ಬ್ರಿಟನ್​​ ಪ್ರಧಾನಮಂತ್ರಿ ಬೋರಿಸ್​ ಜಾನ್ಸನ್​ಗೆ ಕರೊನಾ ವೈರಸ್​; ಜ್ವರ, ನಿರಂತರ ಕೆಮ್ಮಿನಿಂದ ಬಳಲುತ್ತಿರುವುದಾಗಿ ಟ್ವೀಟ್​

Boris
Published on

ಬ್ರಿಟಿಷ್​ ಪ್ರಧಾನಮಂತ್ರಿ ಬೋರಿಸ್​ ಜಾನ್ಸನ್ (55)​ ಅವರಿಗೆ ಕರೊನಾ ಸೋಂಕು ತಗುಲಿದೆ. ಲಂಡನ್​ ಫ್ಯೂಚರ್​ ಕಿಂಗ್​ ಪ್ರಿನ್ಸನ್ಸ್​ ಚಾರ್ಲ್ಸ್​(71) ಅವರಿಗೆ ಕರೊನಾ ವೈರಸ್​ ಬುಧವಾರ ದೃಢಪಟ್ಟಿತ್ತು.

ತಮಗೆ ಕರೊನಾ ವೈರಸ್​ ತಗುಲಿರುವ ಬಗ್ಗೆ ಬೋರಿಸ್​ ಜಾನ್ಸನ್​ ಟ್ವೀಟ್​ ಮಾಡಿ, ತಮ್ಮ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಕಳೆದ 24 ಗಂಟೆಗಳಲ್ಲಿ ಸಣ್ಣ ಪ್ರಮಾಣದಲ್ಲಿ ಜ್ವರ, ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು.

ತಪಾಸಣೆಗೆ ಒಳಪಟ್ಟಾಗ ಕರೊನಾ ಇರುವುದು ದೃಢಪಟ್ಟಿತು. ನನ್ನ ಮನೆಯಲ್ಲಿ ಪ್ರತ್ಯೇಕವಾಗಿದ್ದು ಚಿಕಿತ್ಸೆ ಪಡೆಯುತ್ತೇನೆ. ಆದರೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಸರ್ಕಾರದ ಕೆಲಸಗಳಲ್ಲಿ ಪಾಲ್ಗೊಳ್ಳುತ್ತೇನೆ ಎಂದಿದ್ದಾರೆ.
ತಾವು ಜ್ವರ ಹಾಗೂ ನಿರಂತರ ಕೆಮ್ಮಿನಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿರುವ ಜಾನ್ಸನ್​, ಇಡೀ ಜಗತ್ತಿನಾದ್ಯಂತ ಕರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ದಾರೆ. ಹಾಗೇ ತಾವೂ ವೈದ್ಯರ ಸಲಹೆಯನ್ನು ಪಾಲಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net