ಪುರಾಣವನ್ನು ಪೀಳಿಗೆಗೆ ದಾಟಿಸುವ ಯಕ್ಷಗಾನ : ಶಂಕರ ನಾರಾಯಣ ಮಯ್ಯ ಅನಿಸಿಕೆ

New Project (35)
Published on

ಬದಿಯಡ್ಕ: ನಾರಂಪಾಡಿ ಯಕ್ಷಮಿತ್ರರು ಸಂಘಟನೆಯ 10ನೇ ವಾರ್ಷಿಕೋತ್ಸವ ಇತ್ತೀಚೆಗೆ ಜರುಗಿತು. ಉದ್ಯಮಿ ಶಂಕರ ನಾರಾಯಣ ಮಯ್ಯ ಅಧ್ಯಕ್ಷತೆವಹಿಸಿ ಮಾತನಾಡಿ, ಯಕ್ಷಗಾನ ನಾಟ್ಯ ಲಯ ತಾಳಗಳ ಸಮ್ಮಿಲನ. ಪೌರಾಣಿಕ ಹಿನ್ನೆಲೆಗಳು ಮುಂದಿನ ತಲೆಮಾರಿಗೆ ತಿಳಿಯುವಂತೆ ಮಾಡುವ ನಮ್ಮ ಸಂಸ್ಕೃತಿಯ ಅತಿ ದೊಡ್ಡ ಕಲೆ ಎಂದರು.

ಬಾಲಕೃಷ್ಣ ಮಾಸ್ತರ್ ನಾರಂಪಾಡಿ, ರಮಾನಾಥ ರೈ ಮೇಗಿನ ಕಡಾರು, ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನಂತಗೋವಿಂದ ಶರ್ಮ ಕೋಳಿಕ್ಕಜೆ, ಪನಡ್ಕ ಗುತ್ತು ಅಮ್ಮು ರೈ ಚಟ್ಲ, ಶಂಕರ ರೈ ಮಾಸ್ತರ್, ನಾರಾಯಣ ಮವ್ವಾರು, ರಾಧಾಕೃಷ್ಣ ರೈ ಮುಂಡಾಸು, ರಾಜೇಶ್ ಅಗಲ್ಪಾಡಿ, ಚೇಂಗಳ ಗ್ರಾ.ಪಂ. ಸದಸ್ಯ ಲತೀಫ್ ನಾರಂಪಾಡಿ, ವಿಜಯ ನಾಯರ್ ಪುಂಡೂರು, ರವೀಂದ್ರ ರೈ ಗೋಸಾಡ, ಹರೀಶ್ ನಾರಂಪಾಡಿ, ಸತೀಶ್ ಭಂಡಾರಿ ಮೇಗಿನ ಬೆಳಿಂಜ, ಕೆದಂಬಾಡಿ ತ್ಯಾಗರಾಜ ರೈ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net