ಕುಸಿದು ಬಿದ್ದು ವೃದ್ಧ ಮೃತ್ಯು

Death Case
Published on

ಕಾಸರಗೋಡು: ಬೆದ್ರಡ್ಕ ದೇಶಮಂಗಲ ನಿವಾಸಿ ಸುರೇಂದ್ರ(60) ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಇವರು ಉಪ್ಪಳ ಕೋಡಿಬೈಲಿನಲ್ಲಿರುವ ಪುತ್ರಿ ಮನೆಗೆ ಭಾನುವಾರ ತೆರಳಿದ್ದು, ಸಂಜೆ ಅಲ್ಲಿಂದ ವಾಪಸಾಗಲು ಹೊರಡುವಾಗ ಉಸಿರಾಟದ ಸಮಸ್ಯೆ ಎದುರಾಗಿ ಕುಸಿದು ಬಿದ್ದಿದ್ದರು. ತಕ್ಷಣ ಇವರನ್ನು ಮಂಗಲ್ಪಾಡಿ ತಾಲೂಕಾಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಅಸಹಜ ಸಾವಿನ ಬಗ್ಗೆ ಮಂಜೇಶ್ವರ ಠಾಣೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net