ನ್ಯಾಯಾಲಯಗಳ ಮೂಲಸೌಕರ್ಯ ಹೆಚ್ಚಳ : ವಕೀಲರ ಪರಿಷತ್ ಸಮ್ಮೇಳನದಲ್ಲಿ ಆಗ್ರಹ

New Project (22)
Published on

ಕಾಸರಗೋಡು: ಹೊಸದುರ್ಗ ಮತ್ತು ಕಾಸರಗೋಡಿನ ನ್ಯಾಯಾಲಯಗಳ ಮೂಲಸೌಕರ್ಯ ಹೆಚ್ಚಿಸಬೇಕು ಹಾಗೂ ನೂತನ ನ್ಯಾಯಾಲಯ ಕಟ್ಟಡಗಳ ನಿರ್ಮಾಣ ತಕ್ಷಣ ಆರಂಭಿಸಬೇಕು ಎಂದು ಭಾರತೀಯ ವಕೀಲರ ಪರಿಷತ್‌ನ ಜಿಲ್ಲಾ ಸಮ್ಮೇಳನದಲ್ಲಿ ಆಗ್ರಹಿಸಲಾಯಿತು.

ವಕೀಲರ ಸಂಘದ ರಾಷ್ಟ್ರೀಯ ಉಪಾಧ್ಯಕ್ಷ ಆರ್.ರಾಜೇಂದ್ರನ್ ಸಮ್ಮೇಳನ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಎ.ಸಿ. ಅಶೋಕ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಉಪಾಧ್ಯಕ್ಷ ಬಿ.ರವೀಂದ್ರನ್, ರಾಜ್ಯ ಸಮಿತಿ ಸದಸ್ಯ ಕರುಣಾಕರನ್ ನಂಬಿಯಾರ್ ಉಪಸ್ಥಿತರಿದ್ದರು. ಪಿ.ಮುರಳೀಧರನ್ ಸ್ವಾಗತಿಸಿದರು. ಕೆ.ಎಂ.ಬೀನಾ ವಂದಿಸಿದರು. ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಎ.ಸಿ.ಅಶೋಕ್ ಕುಮಾರ್ ಅಧ್ಯಕ್ಷ, ಅನಂತರಾಮ ಪಿ, ಅನಿಲ್ ಕೆ.ಜಿ, ಕುಸುಮಾ ಎಂ. ಉಪಾಧ್ಯಕ್ಷರು, ನವೀನ್‌ರಾಜ್ ಕೆ.ಜೆ. ಪ್ರಧಾನ ಕಾರ್ಯದರ್ಶಿ, ಸೂರ್ಯನಾರಾಯಣ ಎನ್, ಪ್ರಜಿತ್ ಎಸ್.ಕೆ, ಅಕ್ಷಾ ಜತೆ ಕಾರ್ಯದರ್ಶಿಗಳು ಹಾಗೂ ಕೋಶಾಧಿಕಾರಿಯಾಗಿ ಹರ್ಷಿತಾ ಅವರನ್ನು ಆಯ್ಕೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net