ಕಬಡ್ಡಿ ಚಾಂಪಿಯನ್‌ಷಿಪ್‌ಗೆ ಧನ್ವಿ ಆಯ್ಕೆ

New Project (8)
Published on

ಕಡಬ: ಬಿಹಾರದ ಗಯಾದ್ ರಸಲ್‌ಪುರದಲ್ಲಿ ಮಾರ್ಚ್ 27ರಿಂದ 30ರ ವರೆಗೆ ನಡೆಯುವ 34ನೇ ಸಬ್‌ಜೂನಿಯರ್ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲು ಕರ್ನಾಟಕ ಬಾಲಕಿಯರ ಸಬ್‌ಜೂನಿಯರ್ ರಾಜ್ಯ ಕಬಡ್ಡಿ ತಂಡಕ್ಕೆ ಶ್ರೀರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಕೊಣಾಜೆ ಮಣಿಜಾಲು ದುಗ್ಗಣ್ಣಗೌಡ ಮತ್ತು ಅಮಿತಾ ದಂಪತಿಯ ಪುತ್ರಿ ಧನ್ವಿ ಆಯ್ಕೆಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಆಯ್ಕೆಯಾದ ಏಕೈಕ ಬಾಲಕಿ ಆಗಿರುತ್ತಾರೆ. ವಿದ್ಯಾರ್ಥಿನಿಯ ಈ ಸಾಧನೆಗೆ ಶಾಲಾ ಮುಖ್ಯಶಿಕ್ಷಕ ಸತೀಶ್ ಭಟ್ ಮಾರ್ಗದರ್ಶನದಲ್ಲಿ ಮಾಧವ ಬಿ.ಕೆ., ಜಸ್ವಂತ್, ಮಂಜುನಾಥ್ ಹಾಗೂ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಪ್ರಫುಲ್ಲಾ ರೈ ತರಬೇತಿ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net