

ವಿಜಯವಾಣಿ ಸುದ್ದಿಜಾಲ ಕಾರ್ಕಳ
ಶಿಕ್ಷಣ ಸಂಸ್ಥೆಗಳು ಬೆಳಗಲು ಅಲ್ಲಿನ ಹಳೇ ವಿದ್ಯಾರ್ಥಿಗಳ ಸಹಕಾರ ಹಾಗೂ ಪ್ರೋತ್ಸಾಹ ಪ್ರಮುಖ ಪಾತ್ರ ವಹಿಸುತ್ತದೆ. ಸಂಸ್ಥೆಗಳ ಬೆಳವಣಿಗೆಯಲ್ಲಿ ದಾನಿಗಳು, ಶಿಕ್ಷಣ ಪ್ರೇಮಿಗಳ ಜತೆಗೆ ಹಳೇ ವಿದ್ಯಾರ್ಥಿಗಳ ಕೊಡುಗೆ ಅನನ್ಯ ಎಂದು ಕಾರ್ಕಳ ಭುವನೇದ್ರ ಕಾಲೇಜು ಪ್ರಾಂಶುಪಾಲ ಡಾ.ಮಂಜುನಾಥ ಕೋಟ್ಯಾನ್ ಹೇಳಿದರು.
ವಿದ್ಯಾವರ್ದಕ ಪ.ಪೂ.ಕಾಲೇಜಿನಲ್ಲಿ ಮುಂಬೈನ ವಿದ್ಯಾದುರ್ಗ ಟ್ರಸ್ಟ್, ಮುಂಡ್ಕೂರಿನ ಶ್ರೀಮತಿ ವೇದಾವತಿ ರಾಘವೇಂದ್ರ ಪ್ರಭು ಪಬ್ಲಿಕ್ ಚಾರಿಟೆಬಲ್ ಟ್ರಸ್ಟ್ ಹಾಗೂ ಇತರ ದಾನಿಗಳ ದತ್ತಿ ನಿಧಿ ನೆರವಿನಿಂದ ವಿದ್ಯಾರ್ಥಿಗಳಿಗೆ ವಿವಿಧ ಸೌಲಭ್ಯ ವಿತರಣೆ ಹಾಗೂ ಸಾಧಕ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.
ಸಂಚಾಲಕ ಡಾ.ಪಿ.ಬಾಲಕೃಷ್ಣ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೋರಿಬೆಟ್ಟುಗುತ್ತು ಸುರೇಂದ್ರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು.
ಮುಂಡ್ಕೂರು ಗ್ರಾಪಂ ಅಧ್ಯಕ್ಷ ದೇವಪ್ಪ ಸಪಳಿಗ, ಆಡಳಿತ ಮಂಡಳಿ ಕಾರ್ಯದರ್ಶಿ ಪಾಂಡುರಂಗ ಪ್ರಭು, ಮುಂಡ್ಕೂರು ಶಿಕ್ಷಣ ಮತ್ತು ಸಮಾಜೋದ್ಧಾರಕ ಸಂಘ ಅಧ್ಯಕ್ಷ ಮುಂಡ್ಕೂರು ಅಂಗಡಿಗುತ್ತು ಪ್ರಸಾದ್ ಎಂ.ಶೆಟ್ಟಿ, ಕೋಶಾಧಿಕಾರಿ ಡಾ.ಪ್ರಭಾಕರ ಶೆಟ್ಟಿಗಾರ್, ಸದಸ್ಯ ಅಶೋಕ್ ಶೆಟ್ಟಿ, ಪ್ರಕಾಶ್ ಕೆ.ಎನ್., ನಿವೃತ್ತ ಪ್ರಾಚಾರ್ಯ ಸುದರ್ಶನ್ ವೈ.ಎಸ್., ನಿವೃತ್ತ ಕಂದಾಯ ಅಧಿಕಾರಿ ಅವಿಲ್ ಡಿಸೋಜ, ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ಶರತ್ ಶೆಟ್ಟಿ, ನಮ್ಮ ಫ್ರೆಂಡ್ಸ್ ಅಧ್ಯಕ್ಷ ಅರುಣ್ ರಾವ್, ಪ್ರೌಢಶಾಲೆ ಮುಖ್ಯ ಶಿಕ್ಷಕಿ ಸವಿತಾ ಸದಾನಂದ, ವಿದ್ಯಾರ್ಥಿ ನಾಯಕಿ ಭವ್ಯ, ಚರಣ್ ಮತ್ತಿತರರು ಉಪಸ್ಥಿತರಿದ್ದರು. ಪ್ರಾಚಾರ್ಯ ಮಾಲತೇಶ್ ಇಂಗಳಕಿ ಸ್ವಾಗತಿಸಿ, ಪ್ರಕಾಸ್ ನಾಕ್, ಶರತ್ ರಾವ್, ಮಾಲತಿ, ದಿನೇಶ್ ವಿದ್ಯಾರ್ಥಿಗಳ ವಿವರ ನೀಡಿದರು. ಸವಿತಾ ಸದಾನಂದ ವಂದಿಸಿ, ಪ್ರಭಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ನಿವೃತ್ತ ಪ್ರಾಂಶುಪಾಲ ದೇವದಾಸ್, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಹತ್ತನೇ ರ್ಯಾಂಕ್ ಪಡೆದ ಹಳೇ ವಿದ್ಯಾರ್ಥಿನಿ ಸ್ನೇಹಾ ಸಪಳಿಗ ಹಾಗೂ ಹತ್ತನೇ ತರಗತಿಯಲ್ಲಿ ರಾಜ್ಯಕ್ಕೆ ಮೂರನೇ ರ್ಯಾಂಕ್ ಪಡೆದ ಶಾಲೆ ಸಿಬ್ಬಂದಿ ಶಂಕರ್ ಅವರ ಪುತ್ರಿ ಸಹನಾರನ್ನು ಸನ್ಮಾನಿಸಲಾಯಿತು. ದಾನಿಗಳ ನೆರವಿನ ಹಾಗೂ ವಿವಿಧ ದತ್ತಿ ನಿಧಿಗಳ ವಿದ್ಯಾರ್ಥಿವೇತನ, ದಾನಿಗಳ ಸಹಕಾರದ ಸಮವಸ್ತ್ರ ವಿತರಣೆ ನಡೆಯಿತು.