ಕಾನೂನು ಚೌಕಟ್ಟಿನಲ್ಲಿ ಅಭಿವೃದ್ಧಿ ಚಟುವಟಿಕೆ : ಶಾಸಕ ಉಮಾನಾಥ ಕೋಟ್ಯಾನ್ ಆಶಯ

blank

ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ

ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಸ್ವಚ್ಛ ಗ್ರಾಮವಾಗಬೇಕು. ಈ ನಿಟ್ಟಿನಲ್ಲಿ ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಲಾಗಿದ್ದು, 15ನೇ ಹಣಕಾಸು ಯೋಜನೆಯಿಂದ ಜೆಸಿಬಿ, ಟೆಂಪೋಗಳನ್ನು ಖರೀದಿಸಲಾಗಿದೆ ಎಂದು ಮೂಲ್ಕಿಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಕಿನ್ನಿಗೋಳಿ ಪಟ್ಟಣ ಪಂಚಾಯಿತಿಯ 2024-25ನೇ ಸಾಲಿನ ಎಸ್‌ಎಫ್‌ಸಿ ಯೋಜನೆಯಡಿ ಪರಿಶಿಷ್ಟ ಜಾತಿ/ಪಂಗಡದ ಫಲಾನುಭವಿಗಳಿಗೆ ಟೈಲರಿಂಗ್ ಮಷಿನ್ ವಿತರಣೆ, ಹಸಿಕಸಒಣಕಸ ವಿಂಗಡಿಸಿ ನೀಡಲು ಸಾರ್ವಜನಿಕರಿಗೆ ಡಸ್ಟ್‌ಬಿನ್ ವಿತರಣೆ, ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಘನತ್ಯಾಜ್ಯ ನಿರ್ವಹಣೆಗೆ ಜೆಸಿಬಿ ಹಾಗೂ 2 ಆಟೋ ಟಿಪ್ಪರ್ ವಾಹನಗಳಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದರು.

ಕಿನ್ನಿಗೋಳಿ ಆದಷ್ಟು ಅಭಿವೃದ್ಧಿಗೊಳ್ಳಬೇಕು. ಆದರೆ ಯಾವುದೇ ಸಮಸ್ಯೆಗಳು ಬರಬಾರದು. ಹೊಸ ಕಟ್ಟಡ ಮನೆ ನಿರ್ಮಾಣದ ಸಂದರ್ಭ ಕಾನೂನಿನ ಅಡಿಯಲ್ಲೇ ಪರವಾನಗಿ ನೀಡಬೇಕು. ಕಟ್ಟಡ ನಿರ್ಮಿಸುವಾಗ ಎಸ್‌ಟಿಪಿ ಅಳವಡಿಕೆ ಕಡ್ದಾಯವಾಗಿದ್ದು, ಸರಿಯಾದ ವ್ಯವಸ್ಥೆ ಇದಲ್ಲಿ ಮಾತ್ರ ಪರವಾನಗಿ ನೀಡಬೇಕು. ಇದನ್ನು ಮುಖ್ಯಾಧಿಕಾರಿಗಳು ಗಮನಿಸಬೇಕು ಎಂದರು.

ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಾಯಿತು. ಮೂಲ್ಕಿ ತಹಸೀಲ್ದಾರ್ ಶ್ರೀಧರ ಎಸ್.ಮುಂದಲಮನಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಜಯಶಂಕರ ಪ್ರಸಾದ್, ಈಶ್ವರ್ ಕಟೀಲ್, ಫಿಲೋಮಿನಾ ಸಿಕ್ವೇರಾ, ಸರೋಜಿನಿ ಗುಜರನ್, ಹೇಮಲತಾ, ಬೇಬಿ ಕೆಮ್ಮಡೆ, ಜೋಸೆಫ್ ಕ್ವಾಡ್ರಸ್, ಲೋಕಯ್ಯ ಸಾಲ್ಯಾನ್ ಕೊಂಡೇಲ, ದೇವಪ್ರಸಾದ್ ಪುನರೂರು, ಹಿಲ್ಡಾ ಡಿಸೋಜ, ಸಂಜೀವ ಮಡಿವಾಳ, ಭಾಸ್ಕರ ಪೂಜಾರಿ, ಸಂತೋಷ್, ಸ್ಟಾೃನಿ ಪಿಂಟೋ ಡೋಲಿ ಸಂತುಮಾಯರ್, ಪ್ರಕಾಶ್ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.

ಕಟೀಲು ಸಮೀಪದ ಬಲ್ಲಾಣದಲ್ಲಿ ಘನತ್ಯಾಜ್ಯ ಘಟಕಕ್ಕೆ ಸ್ಥಳೀಯರ ವಿರೋಧವಿದ್ದಲ್ಲಿ ರದ್ದುಗೊಳಿಸಲಾಗುವುದು. ಜಮೀನಿಗೆ ಆವರಣ ಗೋಡೆ ನಿರ್ಮಾಣಕ್ಕೆ ಆದೇಶ ಬಂದಿದ್ದು ಯಾವುದೇ ಕಾರಣಕ್ಕೂ ಅವರಣ ಗೋಡೆ ನಿರ್ಮಿಸದಂತೆ ಮುಖ್ಯಾಧಿಕಾರಿಗಳಿಗೆ ಹೇಳಿದ್ದೇನೆ. ಗ್ರಾಮಸ್ಥರ ಸಹಮತದಿಂದ ಯೋಜನೆಗಳನ್ನು ರೂಪಿಸಲಾಗುವುದು.

ಉಮಾನಾಥ ಕೋಟ್ಯಾನ್

ಶಾಸಕ ಮೂಲ್ಕಿಮೂಡುಬಿದಿರೆ

ನಿಟ್ಟೆ ವಿಶ್ವವಿದ್ಯಾಲಯಕ್ಕೆ ಜಾಗತಿಕ ಮನ್ನಣೆ : ಕುಲಾಧಿಪತಿ ಎನ್.ವಿನಯ್ ಹೆಗ್ಡೆ ಹರ್ಷ

ಕಂಟ್ರಮಜಲು ಪರಿಸರದಲ್ಲಿ ಕಾಡಾನೆ ಉಪಟಳ

Share This Article

ಒಂದು ತಿಂಗಳು ಸಕ್ಕರೆ ಮತ್ತು ಉಪ್ಪು ಬಿಟ್ಟರೆ ದೇಹದಲ್ಲಾಗುವ ಬದಲಾವಣೆ ಏನು ಗೊತ್ತಾ? | Sugar

Sugar: ಸಾಮಾನ್ಯವಾಗಿ ಮನುಷ್ಯನ ದೇಹ ಅನಾರೋಗ್ಯಕ್ಕೊಳಗಾದಾಗ ಆಹಾರದಲ್ಲಿ ಸಕ್ಕೆರೆ ಮತ್ತು ಉಪ್ಪುನಂತಹ ಅಂಶಗಳನ್ನು ತ್ಯಜಿಸಬೇಕಾಗುತ್ತದೆ. ಇದರಿಂದ…

ಹೃದ್ರೋಗ ದೂರ, ಮೆದುಳಿನ ಆರೋಗ್ಯಕ್ಕೆ ಬಲ: ಟ್ಯೂನ ಮೀನಿನಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು! Tuna Fish Benefits

Tuna Fish Benefits: ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮೀನಿನಲ್ಲಿ ಹಲವು…