ಕರೊನಾ ವೈರಸ್​ ಭೀತಿಯ ಮಧ್ಯೆ ಕೊಲೆಗಾರ ಕಣಜ ಎಂಟ್ರಿ: ಕುಟುಕಿದ್ರೆ ಸಾಕು ಜೀವ ಹೋಗಲಿದೆ!

Asian Gaints
Published on

ವಾಷಿಂಗ್ಟನ್​: ಕೆನಡಾ ಗಡಿ ಸಮೀಪದ ವಾಷಿಂಗ್ಟನ್ ರಾಜ್ಯದಲ್ಲಿ "ಮರ್ಡರ್​ ಹಾರ್ನೆಟ್ (ಕೊಲೆಗಾರ ದೊಡ್ಡ ಕಣಜ)" ಎಂದು ಕರೆಯಲ್ಪಡುವ ಆಕ್ರಮಣಕಾರಿ, ಪರಭಕ್ಷಕ ಕೀಟವು ಪತ್ತೆಯಾಗಿದ್ದು, ಇವು ಮನುಷ್ಯರಿಗೆ ಮತ್ತು ಜೇನುಸಾಕಣೆ ಉದ್ಯಮಕ್ಕೆ ಅಪಾಯವನ್ನುಂಟುಮಾಡಬಹುದು ಎಂದು ಅಮೆರಿಕ ರಾಜ್ಯ ಕೃಷಿ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಏಷ್ಯಾದ ರಾಕ್ಷಸ ಕಣಜ(Asian giant hornet) ಎಂದು ಕರೆಯಲ್ಪಡುವ ಕೀಟದ ವೈಜ್ಞಾನಿಕ ಹೆಸರು ವೆಸ್ಪಾ ಮ್ಯಾಂಡರಿನಿಯಾ. ಇದರ ಕೊಂಡಿ ವಿಷಪೂರಿತವಾಗಿದ್ದು, ಸುಮಾರು 6.4 ಇಂಚಿನಷ್ಟು ಬೆಳೆಯುತ್ತದೆ. ಇದೆ ಹೆಚ್ಚಾಗಿ ಆಗ್ನೇಯ ಏಷ್ಯಾ, ಚೀನಾ ಮತ್ತು ತೈವಾನ್​ ರಾಷ್ಟ್ರಗಳಲ್ಲಿ ಕಂಡುಬರುತ್ತದೆ.

ಇದನ್ನು ಮೊದಲು ವಾಷಿಂಗ್ಟನ್​ನ ಬ್ಲೈನ್​ ನಗರದಲ್ಲಿ ಡಿಸೆಂಬರ್​ನಲ್ಲಿ ಮನೆಯ ಮಾಲೀಕರೊಬ್ಬರು ಪತ್ತೆಹಚ್ಚಿದರು ಎಂದು ವಾಷಿಂಗ್ಟನ್​ ರಾಜ್ಯದ ಇಲಾಖೆಯ ಕೀಟಶಾಸ್ತ್ರಜ್ಞ ಸ್ವೆನ್​​ ಎರಿಕ್ ಸ್ಪಿಚಿಗೆರ್​

ಈ ಕೀಟವು ಅನೇಕ ಬಾರಿ ಕುಟುಕುವ ಮೂಲಕ ಸಾಕಷ್ಟು ಪ್ರಮಾಣದ ಅಂದರೆ ಅದರಷ್ಟೇ ಗಾತ್ರದ ವಿಷವನ್ನು ವ್ಯಕ್ತಿಯ ದೇಹಕ್ಕೆ ಇಂಜೆಕ್ಟ್​ ಮಾಡುವ ಸಾಮರ್ಥ್ಯ ಹೊಂದಿದೆ. ಕುಟುಕಿದಾಗ ಗಾಯವಾಗಿ ಅದು ಗ್ಯಾಂಗ್ರೀನ್ ರೀತಿಯಂತಾಗಿ ದೇಹದ ಮಾಂಸವನ್ನೇ ಕರಗಿಸಿಬಿಡುತ್ತದೆ.

ಒಂದೆರಡು ಬಾರಿ ಕುಟುಕಿದರೆ ಮನುಷ್ಯರು ಬದುಕುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದರೆ, ಹೆಚ್ಚು ಬಾರಿ ಕುಟುಕಿದರೆ ನೆಕ್ರೋಸಿಸ್​​ ಮತ್ತು ವಿಷವು ರಕ್ತದೊಳಗೆ ಸೇರಿ ನಿಮ್ಮ ಅಂಗಾಗಳ ಮೇಲೆ ಪ್ರಭಾವ ಬೀರಲು ಆರಂಭಿಸುತ್ತದೆ. ಅನೇಕ ಬಾರಿ ಕುಟುಕಿದರೆ ಸಾಯುವ ಪ್ರಮಾಣ ಹೆಚ್ಚು ಎನ್ನುತ್ತಾರೆ ಕೀಟಶಾಸ್ತ್ರಜ್ಞರು.

ಮಾನವರಿಗೆ ಮಾತ್ರವಲ್ಲದೆ, ಕೃಷಿ ಹಾಗೂ ಜೇನು ಸಾಕಣೆ ಉದ್ಯಮಕ್ಕೂ ಇದು ಮಾರಕವಾಗಿದ್ದು, ಜೇನು ನೋಣಗಳ ಮೇಲೆ ದಾಳಿ ನಾಶ ಮಾಡುತ್ತವೆ ಎಂದು ಕೀಟಶಾಸ್ತ್ರಜ್ಞರು ತಿಳಿಸಿದ್ದಾರೆ. ಮೊದಲೇ ಕರೊನಾ ವೈರಸ್​ನಿಂದ ಕೆಂಗೆಟ್ಟಿರುವ ಅಮೆರಿಕಕ್ಕೆ ಇದೀಗ ಏಷ್ಯಾದ ರಾಕ್ಷಸ ಕಣಜದಿಂದ ಮತ್ತೊಂದು ಆತಂಕ ಎದುರಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net