More

    VIDEO| ಹೆದ್ದಾರಿಯಲ್ಲಿ ಕಾರು ಚಲಾಯಿಸುವಾಗ ಸಿಕ್ಕಿಬಿದ್ದ 5 ವರ್ಷದ ಬಾಲಕನ ಹೇಳಿಕೆ ಕೇಳಿ ದಂಗಾದ ಪೊಲೀಸರು!

    ನ್ಯೂಯಾರ್ಕ್​: ಕಾರೊಂದು ಅಡ್ಡಾದಿಡ್ಡಿಯಾಗಿ ಹೆದ್ದಾರಿಯಲ್ಲಿ ಬರುತ್ತಿರುವುದನ್ನು ಗಮನಿಸಿ ಕಾರನ್ನು ತಡೆದ ಪೊಲೀಸರಿಗೆ ಭಾರಿ ಅಚ್ಚರಿಯೊಂದು ಕಾದಿತ್ತು. ಕಾರಿನ ಬಾಗಿಲು ತೆಗೆಯುತ್ತಿದ್ದಂತೆ ಚಾಲಕನ ಸೀಟಿನಲ್ಲಿ 5 ವರ್ಷದ ಬಾಲಕ ಇದ್ದುದ್ದನ್ನು ನೋಡಿ ಬೆಸ್ತುಬಿದ್ದ ಪೊಲೀಸರು ಆತನ ಹೇಳಿಕೆ ಕೇಳಿ ಮತ್ತಷ್ಟು ಕಂಗಾಲಾದ ಘಟನೆ ಅಮೆರಿಕದ ಉತಾಹ್ ಹೆದ್ದಾರಿಯಲ್ಲಿ ಸೋಮವಾರ ನಡೆದಿದೆ.

    ಹೆದ್ದಾರಿಯಲ್ಲಿ ನಿಧಾನವಾಗಿ ಬರುತ್ತಿದ್ದ ಕಾರು ಅಂತಾರಾಜ್ಯ ಮುಕ್ತಮಾರ್ಗದ ಎಡ ಪಥದಲ್ಲಿ ಅಡ್ಡಾದಿಡ್ಡಿಯಾಗಿ ಬರುವುದನ್ನು ಗಮನಿಸಿ ಅಮೆರಿಕ ಹೈವೇ ಪೊಲೀಸರು ಸೈರನ್​(ಎಚ್ಚರಿಕೆ ಗಂಟೆ) ಮೊಳಗಿಸಿದ್ದಾರೆ. ಇದನ್ನು ಕೇಳಿದ ಚಾಲಕ ರಸ್ತೆಯ ಪಕ್ಕಕ್ಕೆ ಕಾರನ್ನು ಬಹಳ ಸೊಗಸಾಗಿ ಪಾರ್ಕ್​ ಮಾಡಿದ್ದಾನೆ. ಬಳಿಕ ಕಾರಿನ ಬಳಿ ಹೋಗಿ ನೋಡಿದಾಗ ಚಾಲಕನ ಸೀಟಿನಲ್ಲಿ ಬಾಲಕ ಇರುವುದನ್ನು ನೋಡಿ ಪೊಲೀಸರು ಅಚ್ಚರಿಗೊಂಡಿದ್ದಾರೆ.

    ಇದನ್ನೂ ಓದಿ: ಕರೊನಾ ವಾರಿಯರ್ಸ್​ ಜೀವಕ್ಕೆ ಮುಳುವಾಯ್ತು ಜೀವ ಉಳಿಸುವ ಆಂಬುಲೆನ್ಸ್​!

    ಬಳಿಕ ಸ್ಥಳದಲ್ಲೇ ವಿಚಾರಣೆಗಿಳಿದ ಪೊಲೀಸರು ಡ್ರೈವಿಂಗ್​ ಹೇಗೆ ಕಲಿತೆ ಎಂಬ ಪ್ರಶ್ನೆಯ ಜತೆ ಇನ್ನಿತರ ಮಾಹಿತಿಯನ್ನು ಬಾಲಕನಿಂದ ಕಲೆ ಹಾಕಿದ್ದಾರೆ. ಬಾಲಕನಾಗಿರುವುದರಿಂದ ಆತನ ಹೆಸರನ್ನು ಬಿಟ್ಟುಕೊಡದ ಪೊಲೀಸರು, ದುಬಾರಿ ಲ್ಯಾಂಬೋರ್ಗಿನಿ ಕಾರು ಕೊಡಿಸದಿದ್ದಕ್ಕೆ ಪಾಲಕರೊಂದಿಗೆ ಗಲಾಟೆ ಮಾಡಿಕೊಂಡು ಕಾರಿನ ಸಮೇತ ಬಾಲಕ ಮನೆ ಬಿಟ್ಟು ಬಂದಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

    ಅಚ್ಚರಿಯೇನೆಂದರೆ, ಪಾಲಕರು ಕಾರು ಕೊಡಿಸದಿದ್ದಕ್ಕೆ ತಾನೇ ಖರೀದಿಸಲು ನಿರ್ಧರಿಸಿ ಕ್ಯಾಲಿಫೋರ್ನಿಯಾಗೆ ಹೋಗಲು ಕಾರು ಚಲಾಯಿಸಿಕೊಂಡು ಬಂದಿರುವುದಾಗಿ ಉತಾಹ್ ಹೈವೇ ಪೊಲೀಸರು ಟ್ವೀಟ್​ ಮೂಲಕ ತಿಳಿಸಿದ್ದಾರೆ. ಬಾಲಕ ಬಳಿ ಇದ್ದದ್ದು ಕೇವಲ ಮೂರೇ ಡಾಲರ್ ಎಂಬುದು ವಿಶೇಷವಾಗಿದೆ. ಆದರೆ, ಮತ್ತಷ್ಟು ಮಾಹಿತಿಯನ್ನು ಬಹಿರಂಗಪಡಿಸಲು ಪೊಲೀಸರು ಒಪ್ಪಲಿಲ್ಲ. (ಏಜೆನ್ಸೀಸ್​)

    ಇದನ್ನೂ ಓದಿ: ಉಗ್ರರೊಂದಿಗಿನ ಕಾದಾಟದಲ್ಲಿ ಹುತಾತ್ಮರಾದ ಪತಿ ಮೃತದೇಹದ ಮುಂದೆ ಪತ್ನಿಯ ಶೋಕ: ಭಾವುಕರಾದ ನೆಟ್ಟಿಗರು

    ಅನುಮಾನವೇ ಬೇಡ..ಇಲ್ಲಿ ಲಾಕ್​ಡೌನ್​ ಅವಧಿ ಮೇ 29ರವರೆಗೂ ಮುಂದುವರಿಯುತ್ತದೆ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts