More

    ಅನುಮಾನವೇ ಬೇಡ..ಇಲ್ಲಿ ಲಾಕ್​ಡೌನ್​ ಅವಧಿ ಮೇ 29ರವರೆಗೂ ಮುಂದುವರಿಯುತ್ತದೆ…!

    ನವದೆಹಲಿ: ಮೇ 4ಕ್ಕೆ ಎರಡನೇ ಹಂತದ ಲಾಕ್​ಡೌನ್​ ಅವಧಿ ಮುಕ್ತಾಯಗೊಂಡು, ಈಗ ಕೆಲವು ಸಡಿಲಿಕೆಗಳೊಂದಿಗೆ ಮೇ 17ರವರೆಗೆ ದೇಶಾದ್ಯಂತ ಲಾಕ್​ಡೌನ್ ಮುಂದುವರಿಯುತ್ತಿದೆ.

    ಮೇ 17ರ ನಂತರ ಲಾಕ್​ಡೌನ್ ಮುಂದುವರಿಸಬೇಕೋ, ಬೇಡವೋ, ಒಮ್ಮೆ ಮುಂದುವರಿಸಿದರೂ ಅದರ ಸ್ವರೂಪ ಹೇಗಿರುತ್ತದೆ ಎಂಬುದನ್ನು ಆಯಾ ರಾಜ್ಯಗಳಲ್ಲಿನ ಕರೊನಾ ಪರಿಸ್ಥಿತಿ ನೋಡಿಕೊಂಡು ಕೇಂದ್ರ ಸರ್ಕಾರ ನಿರ್ಧಾರ ಮಾಡಲಿದೆ.

    ದೇಶದಲ್ಲಿ ಮೂರನೇ ಹಂತದ ಲಾಕ್​ಡೌನ್​ ನಡೆಯುತ್ತಿದ್ದು ಅದರ ಅವಧಿ ಮೇ 17ಕ್ಕೆ ಮುಕ್ತಾಯಗೊಳ್ಳಲಿದೆ. ಆದರೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್​ ರಾವ್​ ಅವರು, ತಮ್ಮ ರಾಜ್ಯದಲ್ಲಿ ಲಾಕ್​ಡೌನ್​ನ್ನು ಮೇ 29ರವರೆಗೆ ಮುಂದುವರಿಸುವುದಾಗಿ ಈಗಲೇ ಘೋಷಿಸಿಬಿಟ್ಟಿದ್ದಾರೆ.
    ಮಂಗಳವಾರ ಸಂಜೆ ಸುಮಾರು 7 ತಾಸು ಕ್ಯಾಬಿನೇಟ್ ಮೀಟಿಂಗ್​ ನಡೆಸಿದ ಅವರು ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

    ಇದನ್ನೂ ಓದಿ: ದಾವಣಗೆರೆಗೆ COVID19 ವಕ್ಕರಿಸಿದ್ಹೇಗೆ?

    ನಮ್ಮ ರಾಜ್ಯದಲ್ಲಿ ಸುಮಾರು 6 ಜಿಲ್ಲೆಗಳು ಕರೊನಾ ರೆಡ್​ಝೋನ್​​ನಲ್ಲಿ ಇವೆ. 18 ಆರೆಂಜ್​ ಝೋನ್​ಗಳು ಇವೆ ಮತ್ತು 9 ಹಸಿರು ವಲಯಗಳಿವೆ. ಅದರಲ್ಲೂ ಮೂರು ಜಿಲ್ಲೆಗಳಲ್ಲಿ ವಿಪರೀತ ಕೊರನಾ ಸೋಂಕಿತರು ಇದ್ದಾರೆ.
    ಕೆಲವು ನಿರ್ಬಂಧ, ಷರತ್ತುಗಳೊಂದಿಗೆ ರೆಡ್​ ಝೋನ್​ನಲ್ಲೂ ಅಂಗಡಿಗಳನ್ನು ತೆರೆಯಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ ನಾವು ಹೈದರಾಬಾದ್​, ಮೆಡ್​ಚಲ್​, ಸೂರ್ಯಪೆಟ್​, ವಿಕಾರಾಬಾದ್​ಗಳಲ್ಲಿ ಯಾವುದೇ ಅಂಗಡಿಗಳನ್ನೂ ಓಪನ್​ ಮಾಡಲು ಬಿಟ್ಟಿಲ್ಲ.

    ಇದನ್ನೂ ಓದಿ: ಹಾದಿ ತಪ್ಪಿದ್ರೆ ಕಿಕ್​ಔಟ್, ರಾಜ್ಯದ ಸರ್ಕಾರಿ ನೌಕರರಿಗೆ ಸಿದ್ಧವಾಗುತ್ತಿದೆ ಮೂಗುದಾರ

    ನಮ್ಮ ರಾಜ್ಯದಲ್ಲಿ ಜನರು ಲಾಕ್​ಡೌನ್​ ವಿಸ್ತರಣೆಯಾಗಬೇಕು ಎನ್ನುತ್ತಿದ್ದಾರೆ. ಹಾಗಾಗಿ ಮೇ 29ರವರೆಗೂ ಕಟ್ಟುನಿಟ್ಟಾಗಿ ಮುಂದುವರಿಸುತ್ತೇವೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೂ ಮಾಹಿತಿ ರವಾನಿಸಿದ್ದೇನೆ ಎಂದು ಚಂದ್ರಶೇಖರ್​ ರಾವ್​ ತಿಳಿಸಿದ್ದಾರೆ.

    ತೆಲಂಗಾಣದಲ್ಲಿ ಒಟ್ಟು 1096 ಕೊರನಾ ಪ್ರಕರಣಗಳು ಇದ್ದು, ಅದರಲ್ಲಿ 439 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 628 ಮಂದಿ ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆಗಿದ್ದಾರೆ. (ಏಜೆನ್ಸೀಸ್​)

    ಇದನ್ನೂ ಓದಿ: ಚೆನ್ನೈನ ಈ ಹಣ್ಣು ಮಾರುಕಟ್ಟೆ ಈಗ ಭಯ ಹುಟ್ಟಿಸುತ್ತಿರುವುದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts