More

    ಪೊಲೀಸ್​ ಗಸ್ತು ವಾಹನ ಡಿಕ್ಕಿ: ಅಮೆರಿಕದಲ್ಲಿ ಭಾರತೀಯ ಮೂಲದ ಯುವತಿ ದುರಂತ ಸಾವು

    ವಾಷಿಂಗ್ಟನ್​: ಅಮೆರಿಕದ ಸಿಯಾಟಲ್​ ಪೊಲೀಸರ ಗಸ್ತು ವಾಹನ ಡಿಕ್ಕಿಯಾಗಿ ಭಾರತೀಯ ಮೂಲದ 23 ವರ್ಷದ ಯುವತಿಯೊಬ್ಬಳು ದುರಂತ ಸಾವಿಗೀಡಾಗಿರುವ ಘಟನೆ ಯುನೈಟೆಡ್​ ಸ್ಟೇಟ್ಸ್​ನ ಸೌಥ್​ ಲೇಕ್​ ಯೂನಿಯನ್​ನಲ್ಲಿ ನಡೆದಿರುವುದಾಗಿ ಸಿಯಾಟಲ್​ ಪೊಲೀಸ್​ ಇಲಾಖೆ ತಿಳಿಸಿದೆ.

    ಮೃತಳನ್ನು ಜಾಹ್ನವಿ ಕಾಂದುಲಾ ಎಂದು ಗುರುತಿಸಲಾಗಿದೆ. ಸೋಮವಾರ ರಾತ್ರಿ ಸಂಭವಿಸಿದ ಅಪಘಾತದಿಂದ ಗಂಭೀರವಾಗಿ ಗಾಯಗೊಂಡಿದ್ದ ಜಾಹ್ನವಿಯನ್ನು ಹರ್ಬೊರ್ವೀವ್​ ಮೆಡಿಕಲ್​ ಸೆಂಟರ್​ಗೆ ಸ್ಥಳಾಂತರ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ. ಕಿಂಗ್ ಕೌಂಟಿ ಮೆಡಿಕಲ್ ಎಕ್ಸಾಮಿನರ್ ಕಚೇರಿಯ ಪ್ರಕಾರ, ಹಲವಾರು ಬಲವಾದ ಗಾಯಗಳೇ ಸಾವಿಗೆ ಕಾರಣ ಎಂದು ಹೇಳಿದೆ.

    ಮೃತ ಜಾಹ್ನವಿ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯ ನಿವಾಸಿ. ಆಕೆ ಸೌತ್ ಲೇಕ್ ಯೂನಿಯನ್‌ನಲ್ಲಿರುವ ಈಶಾನ್ಯ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಯಾಗಿದ್ದರು. ಮುಂಬರುವ ಡಿಸೆಂಬರ್‌ನಲ್ಲಿ ಮಾಹಿತಿ ವ್ಯವಸ್ಥೆಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯುವ ಹಾದಿಯಲ್ಲಿದ್ದರು ಎಂದು ದಿ ಸಿಯಾಟಲ್ ಟೈಮ್ಸ್ ವರದಿ ತಿಳಿಸಿದೆ.

    ರಸ್ತೆ ದಾಟುವಾಗ ಪೊಲೀಸ್​ ಗಸ್ತು ವಾಹನ ಡಿಕ್ಕಿಯಾಗಿ ದುರ್ಘಟನೆ ಸಂಭವಿಸಿದೆ. ಸ್ಥಳದಲ್ಲೇ ಪೊಲೀಸರು ಸಿಪಿಆರ್​ ಮಾಡಿ, ಆಕೆಯನ್ನು ಹರ್ಬೊರ್ವೀವ್​ ಮೆಡಿಕಲ್​ ಸೆಂಟರ್​ಗೆ ಸ್ಥಳಾಂತರ ಮಾಡಲಾಯಿತು. ಆದರೂ ಆಕೆ ಬದುಕುಳಿಯಲಿಲ್ಲ. ಈ ಸಂಬಂಧ ಸಿಯಾಟಲ್​ ಪೊಲೀಸ್​ ಇಲಾಖೆ ತನಿಖೆಗೆ ಆದೇಶಿಸಿದೆ. (ಏಜೆನ್ಸೀಸ್​)

    ಗೊರಕೆ ನಿಲ್ಲಿಸುವ ಟೋಪಿ ಮಾರಾಟದ ನೆಪದಲ್ಲಿ ಗಾಳ: ಚೈನ್‌ಲಿಂಕ್ ವಂಚಕ ಕಂಪನಿಯ ನಾಲ್ವರ ಸೆರೆ

    ಭೂ ಪರಿಹಾರ ನಿಗದಿಗೆ ಒತ್ತಾಯಿಸಿ ಬೈಕ್ ರ‍್ಯಾಲಿ: ಕಾರಂತ ಬಡಾವಣೆಗೆ ಜಮೀನು ನೀಡಿರುವ ರೈತರಿಂದ ಪ್ರತಿಭಟನೆ

    ಕಣ್ಣಿಗೊಂದು ಸವಾಲ್​: ತೀಕ್ಷ್ಣ ದೃಷ್ಟಿಯುಳ್ಳವರು ಮಾತ್ರ ಈ ಫೋಟೋದಲ್ಲಿರುವ ಮೊಲವನ್ನು ಪತ್ತೆಹಚ್ಚಬಲ್ಲರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts