More

    ಗೊರಕೆ ನಿಲ್ಲಿಸುವ ಟೋಪಿ ಮಾರಾಟದ ನೆಪದಲ್ಲಿ ಗಾಳ: ಚೈನ್‌ಲಿಂಕ್ ವಂಚಕ ಕಂಪನಿಯ ನಾಲ್ವರ ಸೆರೆ

    ಬೆಂಗಳೂರು: ಕಮಿಷನ್ ಆಮಿಷವೊಡ್ಡಿ ಠೇವಣಿ ಪಡೆದು ಜನರಿಗೆ ಮೋಸ ಮಾಡುತ್ತಿದ್ದ ಚೈನ್ ಲಿಂಕ್ ವಂಚಕ ಕಂಪನಿಯ ನಾಲ್ವರನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

    ಸುಧಾಮನಗರದ ಶೇಖ್ ಸಾದಿಕ್ ಅಲಿ (32), ಸುಬ್ರಮಣ್ಯಪುರದ ಎನ್. ಯೋಗೇಶ್ (44), ಗೋವಾದ ಪ್ರಮೋದ್ ಗೋಪಿನಾಥ್ (51) ಮತ್ತು ಮಧ್ಯಪ್ರದೇಶದ ಸುನೀಲ್ ಜೋಶಿ (58) ಬಂಧಿತರು. ಇ ಬಯೋಟೋರಿಯಂ ಕಂಪನಿ ಹೆಸರಿನಲ್ಲಿ ಆರೋಪಿಗಳು ಜನರಿಗೆ ಮೋಸ ಮಾಡುತ್ತಿದ್ದರು. ಕಂಪನಿ ಮುಖ್ಯಸ್ಥ ಸುನೀಲ್ ಜೋಶಿ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಿ 38 ಲಕ್ಷ ರೂ. ಮುಟ್ಟಗೋಲು ಹಾಕಿಕೊಳ್ಳಲಾಗಿದೆ. ಬಂಧಿಸಿ ಕಂಪನಿ ಮತ್ತು ಆರೋಪಿಗಳ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಿದ್ದು, ಕೋರ್ಟ್ ಹಾಜರುಪಡಿಸಿ ಕಸ್ಟಡಿಗೆ ಪಡೆಯಲಾಗಿದೆ ಎಂದು ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸಗೌಡ ತಿಳಿಸಿದ್ದಾರೆ.

    ಮುಂಬೈ ಮೂಲದ ಸುನೀಲ್ ಜೋಶಿ, ಕೆಲವು ದಿನಗಳ ಹಿಂದೆ ಇ ಬಯೋಟೋಯರಿಯಂ ಹೆಸರಿನಲ್ಲಿ ಚೈನ್ ಲಿಂಕ್ ಕಂಪನಿ ಆರಂಭಿಸಿದ್ದ. ತಲೆಗೆ ಮ್ಯಾಗ್ನೆಟಿಕ್ ಟೋಪಿ ಹಾಕಿಕೊಂಡರೆ ನಿದ್ರೆ ಮಾಡುವಾಗ ಗೊರಕೆ ಬರುವುದಿಲ್ಲ. ಸುಖವಾಗಿ ನಿದ್ರೆ ಮಾಡಬಹುದು ಎಂದು ಪ್ರಚಾರ ನಡೆಸಿ 5 ಸಾವಿರ ರೂ. ಗೆ ಮಾರಾಟ ಮಾಡುವ ಪ್ಲ್ಯಾನ್ ಮಾಡಿದ್ದ. ಇದಲ್ಲದೆ, ಇ ಬಯೋಟೋರಿಯಂ ಕಂಪನಿ ಹೆಸರಿನಲ್ಲಿ ಕಮಿಷನ್ ಆಮಿಷವೊಡ್ಡಿ ಕೆಲವರನ್ನು ಏಜೆಂಟ್ ಸಹ ಮಾಡಿ ಆಕರ್ಷಕ ಉಡುಗೊರೆ ಕೊಟ್ಟು ದಾಖಲೆ, ಫೋಟೋ ಮಾಡಿಸಿದ್ದ. ಏಜೆಂಟ್‌ಗಳ ಮೂಲಕ ಜನರನ್ನು ಸಂಪರ್ಕ ಮಾಡಿಸಿ ಒಂದೆಡೆ ಸೇರಿಸುತ್ತಿದ್ದ.

    ಮಾಗ್ನೆಟಿಕ್ ಅಂಶವಿರುವ ಮ್ಯಾಜಿಕ್ ಟೋಪಿ (ಗೊರಕೆ ನಿಲ್ಲಿಸುವ ಟೋಪಿ) ಎಂದು ಸುಳ್ಳು ಹೇಳಿ ಮಾರಾಟ ಮಾಡಿದರೇ ಕಮಿಷನ್ ದೊರೆಯಲಿದೆ ಎಂದು ಪ್ರಚಾರ ಮಾಡುತ್ತಿದ್ದ. ಇದಾದ ಮೇಲೆ ಇ ಬಯೋಟೋರಿಯಂ ನೆಟ್‌ವರ್ಕ್ ಪ್ರೈ ಕಂಪನಿಯಲ್ಲಿ ಠೇವಣಿ ಇರಿಸಿ ತಾವು ಮತ್ತಿಬ್ಬರು ಗ್ರಾಹಕರನ್ನು ಕರೆತಂದರೇ ಹೆಚ್ಚಿನ ಕಮಿಷನ್ ಸಿಗಲಿದೆ ಎಂದು ಹೇಳುತ್ತಿದ್ದ. ಇದೇ ರೀತಿ ವಂಚನೆ ಮಾಡಲು ಜ.15ರಂದು ವಸಂತನಗರದ ಮಿಲ್ಲರ್ ರಸ್ತೆಯ ಅಂಬೇಡ್ಕರ್ ಭವನದಲ್ಲಿ 1 ಸಾವಿರ ಜನರನ್ನು ಸೇರಿಸಿ ಪಿರ್‌ಮಿಡ್ ಚೈನ್ ಲಿಂಕ್ ವ್ಯವಸ್ಥೆಯಲ್ಲಿ ಠೇವಣಿ ಸಂಗ್ರಹಕ್ಕೆ ಮುಂದಾಗಿದ್ದ. ಕಂಪನಿಗೆ ಹೆಚ್ಚಿನ ಜನರನ್ನು ಸೇರಿಸುತ್ತ ಹೋದರೆ ಅಧಿಕ ಲಾಭ ಬರುತ್ತದೆ ಎಂದು ಆಮಿಷ ಒಡ್ಡಿದ್ದರು. ಆನೇಕ ಜನರಿಗೆ ಮೋಸ ಮಾಡುವ ಉದ್ದೇಶದಿಂದ ಸಭೆ ನಡೆಸುತ್ತಿರುವ ಬಗ್ಗೆ ಮಾಹಿತಿ ಪಡೆದ ಇನ್‌ಸ್ಪೆಕ್ಟರ್ ಶಿವಸ್ವಾಮಿ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸಗೌಡ ತಿಳಿಸಿದ್ದಾರೆ.

    ಚೈನ್ ಲಿಂಕ್ ಕಂಪನಿಗಳು ಆರಂಭದಲ್ಲಿ ಕೆಲಸ ಕೊಡುವ ಉದ್ದೇಶವಿದೆ ಎಂದು ಹೇಳಿ ಇಂತಿಷ್ಟು ಜನರನ್ನು ಸೇರಿಸಿಕೊಳ್ಳುತ್ತಿದ್ದರು. ಆನಂತರ ದುಬಾರಿ ಕಮಿಷನ್ ಸೇರಿದಂತೆ ಬೇರೆ ಬೇರೆ ಆಮಿಷ ನೀಡಿ ವಿಶ್ವಾಸ ಗಿಟ್ಟಿಸಿಕೊಂಡು ದಾಖಲೆಗಳನ್ನು ಸೃಷ್ಟಿಸುತ್ತಿದ್ದರು. ಹೊಸದಾಗಿ ಕಂಪನಿಗೆ ಠೇವಣಿ ಹೂಡಿಕೆ ಮಾಡುವರಿಗೆ ಮೊದಲ ತಂಡದ ಏಜೆಂಟ್‌ಗಳನ್ನು ಉದಾಹರಣೆ ಕೊಟ್ಟು ಗಾಳ ಹಾಕುತ್ತಿದ್ದರು. ಹಳೇ ತಂಡದ ಸದಸ್ಯರ ಮೂಲಕ ಹೊಸಬರಿಗೆ ಉತ್ತೇಜಿಸಿ ಕಂಪನಿಗೆ ಸೆಳೆದು ಠೇವಣಿ ಹೂಡಿಕೆ ಮಾಡುವಂತೆ ಸೆಳೆಯುತ್ತಿದ್ದರು. ಹೆಚ್ಚಿನ ಠೇವಣಿದಾರರಿಂದ ಹಣ ಸಂಗ್ರಹಿಸಿ ದಿಢೀರನೇ ಕಂಪನಿ ಸ್ಥಗೀತ ಮಾಡಲು ಸ್ಕೆಚ್ ಹಾಕಿದ್ದರು. ಇದೀಗ ನಾಲ್ವರನ್ನು ಬಂಧಿಸಿ ಸಂಭವೀಯನ ಮೋಸ ತಪ್ಪಿಸಿದ್ದೇವೆ. ತನಿಖೆ ಮುಂದುವರಿದಿದೆ ಎಂದು ಡಿಸಿಪಿ ಶ್ರೀನಿವಾಸಗೌಡ ತಿಳಿಸಿದ್ದಾರೆ.

    5 ಸಾವಿರ ರೂ. ಟೋಪಿ
    ಗೊರಕೆ ಟೋಪಿ ಎಂದು ಬಿಂಬಿಸಿ 5 ಸಾವಿರ ರೂ.ಗೆ ಮಾರಾಟಕ್ಕೆ ಯತ್ನಿಸಿದ್ದ ಟೋಪಿ ಬೆಲೆ ಕೇವಲ 300 ರಿಂದ 400 ರೂ. ಎನ್ನಲಾಗಿದೆ. ಅದರಲ್ಲಿ ಯಾವುದೇ ಮ್ಯಾಗ್ನೆಟಿಕ್ ಅಂಶ ಸಹ ಇರಲಿಲ್ಲ. ಸುಳ್ಳು ಪ್ರಚಾರ ಮಾಡಿ ಜನರಿಗೆ ಮೋಸ ಮಾಡುತ್ತಿದ್ದರು.

    ಸಭೆ ನಡೆಯುತ್ತಿದ್ದ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ಹೆಚ್ಚಿನ ವಂಚನೆ ಆಗುದನ್ನು ತಡೆದಿದ್ದೆವೆ. ಆರೋಪಿಗಳನ್ನು ವಶಕ್ಕೆ ಪಡೆದು ಇಲ್ಲಿಯವರೆಗೂ ನಡೆದಿರುವ ಮೋಸದ ಬಗ್ಗೆ ತನಿಖೆ ಮುಂದುವರಿದಿದೆ.

    | ಶ್ರೀನಿವಾಸಗೌಡ, ಕೇಂದ್ರ ವಿಭಾಗ ಡಿಸಿಪಿ

    ಭೂ ಪರಿಹಾರ ನಿಗದಿಗೆ ಒತ್ತಾಯಿಸಿ ಬೈಕ್ ರ‍್ಯಾಲಿ: ಕಾರಂತ ಬಡಾವಣೆಗೆ ಜಮೀನು ನೀಡಿರುವ ರೈತರಿಂದ ಪ್ರತಿಭಟನೆ

    ಕಣ್ಣಿಗೊಂದು ಸವಾಲ್​: ತೀಕ್ಷ್ಣ ದೃಷ್ಟಿಯುಳ್ಳವರು ಮಾತ್ರ ಈ ಫೋಟೋದಲ್ಲಿರುವ ಮೊಲವನ್ನು ಪತ್ತೆಹಚ್ಚಬಲ್ಲರು!

    ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್​ಗೆ ಪಿತೃ ವಿಯೋಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts