More

    ಭೂ ಪರಿಹಾರ ನಿಗದಿಗೆ ಒತ್ತಾಯಿಸಿ ಬೈಕ್ ರ‍್ಯಾಲಿ: ಕಾರಂತ ಬಡಾವಣೆಗೆ ಜಮೀನು ನೀಡಿರುವ ರೈತರಿಂದ ಪ್ರತಿಭಟನೆ

    ಬೆಂಗಳೂರು: ಬಿಡಿಎ ಉದ್ದೇಶಿತ ಕಾರಂತ ಬಡಾವಣೆ ನಿರ್ಮಾಣಕ್ಕೆ ಜಮೀನು ನೀಡಲಿರುವ ರೈತರು ಹೊಸ ಮಾದರಿಯ ಭೂ ಪರಿಹಾರ ವಿತರಿಸುವಂತೆ ಒತ್ತಾಯಿಸಿ ಬೈಕ್ ರ‍್ಯಾಲಿ ನಡೆಸಿ ಗಮನ ಸೆಳೆದರು.

    ಶಿವರಾಮ ಕಾರಂತ ಬಡಾವಣೆ ಯೋಜನೆ ವಿರೋಧಿ ಹೋರಾಟ ಸಮಿತಿ ಆಶ್ರಯದಲ್ಲಿ ಗುರುವಾರ ಲೇಔಟ್ ವ್ಯಾಪ್ತಿಯ 17 ಹಳ್ಳಿಗಳಲ್ಲೂ ನೂರಕ್ಕೂ ಹೆಚ್ಚು ಬೈಕ್‌ಗಳಲ್ಲಿ ರೈತರು ರ‍್ಯಾಲಿ ನಡೆಸಿ ಕೇಂದ್ರದ 2013ರ ಭೂ ಪರಿಹಾರ ಕಾಯ್ದೆ ಅನ್ವಯ ರೈತಾಪಿ ವರ್ಗಕ್ಕೆ ನ್ಯಾಯ ಒದಗಿಸಬೇಕು ಎಂದು ಜಾಗೃತಿ ಮೂಡಿಸಲಾಯಿತು. ಬೈಕ್ ರ‍್ಯಾಲಿ ಮಾಡಿ ಅಗ್ರಹಾರದಿಂದ ಆರಂಭಿಸಿ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ಕೊನೆಗೆ ರಾಮಗೊಂಡನಹಳ್ಳಿಯಲ್ಲಿ ಮುಕ್ತಾಯ ಕಂಡಿತು.

    ಬೈಕ್ ರ‍್ಯಾಲಿ ಪಾಲ್ಗೊಂಡಿದ್ದವರನ್ನು ಉದ್ದೇಶಿಸಿ ಮಾತನಾಡಿದ ಹೋರಾಟ ಸಮಿತಿಯ ಸಂಚಾಲಕ ಎಂ.ರಮೇಶ್, ಪ್ರಸ್ತುತ ಕಾರಂತ ಲೇಔಟ್‌ಗಾಗಿ ಜಮೀನು ನೀಡಲಿರುವ ರೈತರಿಗೆ ಬಿಡಿಎ 1894ರ ಭೂಸ್ವಾಧೀನ ಕಾಯ್ದೆ ರೀತಿ ಪರಿಹಾರ ನೀಡುವುದಾಗಿ ಹೇಳಿದೆ. ಆದರೆ, ಕೇಂದ್ರ ಸರ್ಕಾರದ 2013ರ ಕಾಯ್ದೆ ಅಸ್ತಿತ್ವದಲ್ಲಿರುವಾಗ ಹಳೇ ಕಾನೂನು ಊರ್ಜಿತವಾಗದು. ಹಾಗಾಗಿ ಬಿಡಿಎ ರೈತರನ್ನು ದಿಕ್ಕುತಪ್ಪಿಸುವ ಬದಲು ನ್ಯಾಯಯುತ ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸಿದರು.

    ಇತ್ತೀಚಿಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಯು.ಯು.ಲಲಿತ್ ಅವರ ನೇತೃತ್ವದ ತ್ರಿಸದಸ್ಯ ಪೀಠವು, ಮಹಾನದಿ ಕೋಲ್ ಫೀಲ್ಡ್‌ಸ್ ಪ್ರಕರಣದಲ್ಲಿ ಈಗಾಗಲೇ ಭೂಸ್ವಾಧೀನ ಮಾಡಿಕೊಂಡಿರುವ ಜಮೀನಿನ ರೈತರಿಗೆ 2013ರ ಕಾಯ್ದೆ ಅಡಿಯಲ್ಲಿ ಪರಿಹಾರ ವಿತರಿಸಲು ಆದೇಶಿಸಿದೆ. ಇದು ಇಡೀ ದೇಶಕ್ಕೆ ಅನ್ವಯಿಸಲಿದ್ದರೂ, ಬಿಡಿಎ ಅಧಿಕಾರಿಗಳು ಹಳೆಯ ಕಾಯ್ದೆಯಡಿಯಲ್ಲಿ ಪರಿಹಾರ ಪಡೆದುಕೊಳ್ಳುವಂತೆ ರೈತರ ಮೇಲೆ ಒತ್ತಡ ಹೇರುತ್ತಿದೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಸ್ಪಷ್ಟ ಪರಿಹಾರ ನೀತಿ ಪ್ರಕಟಿಸಬೇಕು ಎಂದು ಅವರು ಒತ್ತಾಯಿಸಿದರು.

    ಫೆ.6ಕ್ಕೆ ಪೊರಕೆ ಚಳವಳಿ: ಪರಿಷ್ಕೃತ ರೂಪದಲ್ಲಿ ಪರಿಹಾರ ವಿತರಿಸುವಂತೆ ಒತ್ತಾಯಿಸಿ ಹಲವು ಬಾರಿ ಬಿಡಿಎಗೆ ಮನವಿ ಮಾಡಿಕೊಳ್ಳಲಾಗಿದೆ. ಇದಕ್ಕೆ ಅಧಿಕಾರಿ ವರ್ಗ ಸೊಪ್ಪು ಹಾಕದೆ ಮೌನಕ್ಕೆ ಶರಣಾಗಿದ್ದಾರೆ. ನಿದ್ದೆಯಲ್ಲಿರುವ ಅಧಿಕಾರಿಗಳನ್ನು ಎಚ್ಚರಿಸಲು ೆ.6ರಂದು ಬಿಡಿಎ ಕಚೇರಿ ಎದಿರು ರೈತ ಮಹಿಳೆಯರು ಪೊರಕೆ ಚಳವಳಿ ನಡೆಸಲಿದ್ದಾರೆ ಎಂದು ಹೋರಾಟ ಸಮಿತಿಯ ಆರ್.ಪಂಚಾಕ್ಷರಿ ತಿಳಿಸಿದರು.

    ಕಣ್ಣಿಗೊಂದು ಸವಾಲ್​: ತೀಕ್ಷ್ಣ ದೃಷ್ಟಿಯುಳ್ಳವರು ಮಾತ್ರ ಈ ಫೋಟೋದಲ್ಲಿರುವ ಮೊಲವನ್ನು ಪತ್ತೆಹಚ್ಚಬಲ್ಲರು!

    ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್​ಗೆ ಪಿತೃ ವಿಯೋಗ

    ಮದ್ವೆಯಾದ ಕೆಲವೇ ವರ್ಷಗಳಲ್ಲಿ ಮಗ ಸಾವು: ಸೊಸೆಗೆ ಮರುಮದುವೆ ಮಾಡಿಸಿದ ಮಾಜಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts