ಮದ್ವೆಯಾದ ಕೆಲವೇ ವರ್ಷಗಳಲ್ಲಿ ಮಗ ಸಾವು: ಸೊಸೆಗೆ ಮರುಮದುವೆ ಮಾಡಿಸಿದ ಮಾಜಿ ಶಾಸಕ

blank

ಭುವನೇಶ್ವರ: ಮದುವೆಯಾದ ಕೆಲವೇ ವರ್ಷಗಳಲ್ಲಿ ಕಾಯಿಲೆಯಿಂದ ಮಗ ತೀರಿಕೊಂಡ ಬಳಿಕ ಸೊಸೆಗೆ ಬೇರೊಬ್ಬನ ಜೊತೆ ಮರುವಿವಾಹ ಮಾಡಿಸುವ ಮೂಲಕ ಒಡಿಶಾದ ಮಾಜಿ ಶಾಸಕರೊಬ್ಬರು ಮಾದರಿಯಾಗಿದ್ದಾರೆ. ಮದುವೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಶಾಸಕರಿಗೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.

ಶಾಸಕರ ಹೆಸರು ನಬಿನ್​ ನಂದಾ. ಒಡಿಶಾದ ಧೆನಂಕನಲ್​ ಜಿಲ್ಲೆಯ ಗಂಡಿಯಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ. ಅವರ ಪುತ್ರ ಸಂಬಿತ್​ ಜೊತೆ ಮಧುಸ್ಮಿತಾ ಎಂಬ ಯುವತಿಗೆ ಮದುವೆ ನಿಶ್ಚಯ ಮಾಡಿ, ಅದ್ಧುರಿಯಾಗಿ ಮದುವೆ ಮಾಡಿದ್ದರು. ಆದರೆ, ಕರೊನಾದಿಂದ ಬಳಲಿದ ಸಂಬಿತ್​ರನ್ನು ಕಟಕ್​ನ ಅಶ್ವಿನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ 2021ರ ಮೇ 22ರಂದು ಸಂಬಿತ್​ ತೀರಿಕೊಂಡಿದ್ದ.

ಸಂಬಿತ್ ಸಾವಿನ ನಂತರ ಮಧುಸ್ಮಿತಾ ಒಂಟಿಯಾದರು. ಮಾಜಿ ಶಾಸಕ ನಬಿನ್​ ಅವರು ಸೊಸೆಯ ಒಂಟಿತನವನ್ನು ಸಹಿಸಲಾಗದೆ ಆಕೆಯನ್ನು ಮರು ಮದುವೆಗೆ ಒತ್ತಾಯ ಮಾಡಿ, ಸೊಸೆ ಹಾಗೂ ಕುಟುಂಬಸ್ಥರಿಗೆ ಮನವರಿಕೆ ಮಾಡಿಕೊಟ್ಟು ಬಾಲಸೋರ್ ಜಿಲ್ಲೆಯ ಶಿವಚಂದನ್ ಎಂಬ ಯುವಕನೊಂದಿಗೆ ಮರು ವಿವಾಹ ಮಾಡಿಸಿದ್ದಾರೆ. ಮಂಗಳವಾರ ಭುವನೇಶ್ವರದ ನಾಯಪಲ್ಲಿ ಲಕ್ಷ್ಮಿ ದೇವಸ್ಥಾನದಲ್ಲಿ ಸರಳವಾಗಿ ವಿವಾಹ ಕಾರ್ಯಕ್ರಮ ನಡೆದಿದೆ. ಕಾಕತಾಳೀಯವೆಂಬಂತೆ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದಂದೇ ಮದುವೆ ನಡೆದಿದೆ. ನಬಿನ್ ನಂದಾ ಅವರ ಸೊಸೆ ಮದುವೆಯ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ನಂತರ ವೈರಲ್ ಆಗುತ್ತಿದೆ.

ಈ ದಿನವನ್ನು ನಾನೆಂದು ಮರೆಯಲಾರೆ. ನಾನು ತಪ್ಪು ಮಾಡಿದೆನೋ ಗೊತ್ತಿಲ್ಲ. ಹಿಂದೂ ಆಚಾರ-ವಿಚಾರಗಳಿಗೆ ವಿರುದ್ಧವಾಗಿ ನನ್ನ ಸೊಸೆಯನ್ನು ಮರು ಮದುವೆ ಮಾಡಿಸಿದೆ. ನನ್ನ ಹಿರಿಯ ಮಗ ಸತ್ತು ಹೋದ್ದರಿಂದ ಆಕೆಯ ಒಂಟಿತನವನ್ನು ನೋಡಲಾಗದೇ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ನಮ್ಮ ಮನೆಗೆ ಸೊಸೆಯಾಗಿ ಬಂದಳು. ಈಗ ಆಕೆ ಓರ್ವ ಹೆಣ್ಣು ಮಗಳಿದ್ದಾಳೆ ಎಂದು ನಬಿನ್​ ಹೇಳಿದರು.

ನಬಿನ್​ ಅವರು ಈ ಹಿಂದೆ ಬಿಜೆಡಿ ಪರವಾಗಿ ಗಾಂಧಿಯಿಂದ ಶಾಸಕರಾಗಿ ಗೆದ್ದಿದ್ದರು. 2019 ರ ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿದರು ಆದರೆ ಗೆಲ್ಲಲು ವಿಫಲವಾದರು. (ಏಜೆನ್ಸೀಸ್​)

ಗುರುಲಿಂಗಸ್ವಾಮಿ ಹೊಳಿಮಠ ಹೆಸರಿನ ಕೆಯುಡಬ್ಲ್ಯೂಜೆ ದತ್ತಿ ನಿಧಿ ಪ್ರಶಸ್ತಿಗೆ ಶಂಕರ ಪಾಗೋಜಿಗೆ ಆಯ್ಕೆ

VIDEO | ಆಟೋರಿಕ್ಷಾ ಚಾಲಕರಿಗೆ ಇದೊಂಥರಾ ವಿಚಿತ್ರ ಸ್ಪರ್ಧೆ!

ಕ್ಷೇತ್ರದ ಮತದಾರರಿಗೆ ಆಮಿಷ: ಬಿಜೆಪಿಗೆ ಅಸ್ತ್ರವಾದ ಕಾಂಗ್ರೆಸ್​ ನಾಯಕ ರಾಮಲಿಂಗ ರೆಡ್ಡಿ ಕುಕ್ಕರ್​ ಹಂಚುವ ವಿಡಿಯೋ

Share This Article

ಕಾಲುಗಳ ಮಧ್ಯೆ ದಿಂಬು ಇಟ್ಟುಕೊಂಡು ಮಲಗುತ್ತೀರಾ? ಪ್ರಯೋಜನಗಳಿವೆ.. ನೀವು ಟ್ರೈ ಮಾಡಿ ನೋಡಿ.. Sleeping With Pillow Between Legs

Sleeping With Pillow Between Legs : ನಿದ್ದೆ ಮಾಡುವಾಗ ಪ್ರತಿಯೊಬ್ಬರಿಗೂ ವಿಭಿನ್ನ ಅಭ್ಯಾಸಗಳಿರುತ್ತವೆ.  ಕೆಲವರು…

ಪ್ರತಿದಿನ ರೇಷನ್​ ಅಕ್ಕಿ ತಿಂದರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿಯ ಮಾಹಿತಿ! Ration Rice

Ration Rice : ಪ್ರತಿ ಕೆಜಿಗೆ ಕೇವಲ ಒಂದು ರೂಪಾಯಿಗೆ ಮಾರಾಟವಾಗುವ ಅಥವಾ ಸರ್ಕಾರ ಉಚಿತವಾಗಿ…

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಉಪ್ಪು ನೀರು ಕುಡಿಯುವುದರಿಂದ ಏನು ಪ್ರಯೋಜನ; ಇಲ್ಲಿದೆ ನಿಮಗಾಗಿ ಹೆಲ್ತಿ ಮಾಹಿತಿ | Health Tips

ಬೆಳಗ್ಗೆ ಎದ್ದ ನಂತರ ನೀರು ಕುಡಿಯುವ ಅಭ್ಯಾಸವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಆದರೆ…