More

    VIDEO | ಆಟೋರಿಕ್ಷಾ ಚಾಲಕರಿಗೆ ಇದೊಂಥರಾ ವಿಚಿತ್ರ ಸ್ಪರ್ಧೆ!

    ಮಹಾರಾಷ್ಟ್ರ: ಯಾವುದೇ ಊರಿಗೆ ಹೋದರೂ ಅಲ್ಲಿ ಆಟೋ ರಿಕ್ಷಾ ಸಂಚಾರ ಇರುತ್ತದೆ. ಹಾಗೆಯೇ ಪ್ರಯಾಣಿಕರನ್ನು ಕರೆದುಕೊಂಡು ಹೋಗುವಾಗ ಒಟ್ಟೊಟ್ಟಿಗೆ ಎರಡು ರಿಕ್ಷಾಗಳು ಒಂದಾದರೇ ನಾ ಮುಂದೆ, ತಾ ಮುಂದು ಎಂಬಂತೆ ಸ್ಪರ್ಧೆಗೆ ಮುಂದಾಗುತ್ತವೆ. ಆದರೆ ಇಲ್ಲಿ ಆಟೋ ರಿಕ್ಷಾ ಸ್ಪರ್ಧೆ ಆಯೋಜನೆಯಾಗಿದ್ದು, ಹಲವು ಚಾಲಕರು ಆಟೋ ರಿಕ್ಷಾ ರೇಸ್​ನಲ್ಲಿ ಭಾಗವಹಿಸಿದ್ದರು.

    ವಿಶೇಷವೆಂದರೆ ಆಟೋ ರಿಕ್ಷಾ ರೇಸ್ ಸ್ಪರ್ಧೆ ವಿಭಿನ್ನವಾಗಿ ಆಯೋಜನೆಯಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಆಟೋಗಳು ರಿವರ್ಸ್ ಗೇರ್​ನಲ್ಲಿ ಸಂಚರಿಸಬೇಕಾಗಿತ್ತು. ಹೀಗಾಗಿ ಚಾಲಕರು ರಿವರ್ಸ್ ಗೇರ್​ನಲ್ಲಿ ಆಟೋ ಓಡಿಸುತ್ತಾ, ರೇಸ್​​ನಲ್ಲಿ ಭಾಗವಹಿಸಿದರು. ಕಳೆದ ಜನವರಿ 24ರಂದು ಸಂಗಮೇಶ್ವರ ಯಾತ್ರೆಯ ಸಂದರ್ಭದಲ್ಲಿ ಸಾಂಗ್ಲಿಯ ಹರಿಪುರ ಗ್ರಾಮದಲ್ಲಿ ಸ್ಪರ್ಧೆ ಆಯೋಜನೆಯಾಗಿತ್ತು ಎಂದು ವರದಿಯಾಗಿದೆ.

    ರಿವರ್ಸ್​ ಗೇರ್​ನಲ್ಲಿ ಚಾಲನೆ ಮಾಡಬೇಕಿದ್ದ ಆಟೋ ರಿಕ್ಷಾ ರೇಸ್​ನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸ್ಪರ್ಧಿಗಳು ಭಾಗವಹಿಸಿದ್ದರು. ಹಿಮ್ಮುಖವಾಗಿ ಚಾಲನೆ ಮಾಡುವಾಗ ಅತಿಯಾದ ಜಾಗರೂಕತೆ ಜತೆಗೆ ನೈಪುಣ್ಯತೆ ಇದ್ದಾಗ ಮಾತ್ರ ಯಶಸ್ವಿಯಾಗಲು ಸಾಧ್ಯವಾಗುತ್ತದೆ. ಅದರಂತೆ ಈ ಸ್ಪರ್ಧೆಯಲ್ಲಿ ಕೆಲ ಚಾಲಕರು ಗುರಿ ಮುಟ್ಟುವಲ್ಲಿ ಯಶಸ್ವಿಯಾದರೆ, ಇನ್ನು ಕೆಲವರು ಎಡವಿದ್ದಾರೆ.

    ಸದ್ಯ ಆಟೋ ರಿಕ್ಷಾ ರೇಸ್​ನ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಸ್ಪರ್ಧೆಯನ್ನು ವೀಕ್ಷಿಸಲು ಹಲವಾರು ಗ್ರಾಮಸ್ಥರು ನೆರೆದಿರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಬಹುದು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts