More

    ಹಲವು ವಿಶೇಷತೆಗಳಿಗೆ ಸಾಕ್ಷಿಯಾಯ್ತು ಕರ್ತವ್ಯ ಪಥ; ಗಣರಾಜ್ಯೋತ್ಸವ ಸಂಭ್ರಮದಲ್ಲಿ ಮೇಳೈಸಿದ ಆತ್ಮನಿರ್ಭರ

    ನವದೆಹಲಿ: ದೇಶದಾದ್ಯಂತ ಇಂದು 74 ನೇ ಗಣರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗಿದೆ. ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಆರ್ಥಿಕ ಪ್ರಗತಿ, ಆಂತರಿಕ ಮತ್ತು ಬಾಹ್ಯ ಭದ್ರತೆಯನ್ನು ಬಿಂಬಿಸುವ ಒಟ್ಟು 23 ಟ್ಯಾಬ್ಲೋಗಳು ಕರ್ತವ್ಯ ಪಥದಲ್ಲಿ ನಡೆದ ಪಥಸಂಚಲನದಲ್ಲಿ ಪಾಲ್ಗೊಂಡಿದ್ದವು. 17 ರಾಜ್ಯಗಳಿಂದ ಮತ್ತು 6 ವಿವಿಧ ಸಚಿವಾಲಯ, ಇಲಾಖೆಗಳನ್ನು ಪ್ರತಿಬಿಂಬಿಸುವ ಟ್ಯಾಬ್ಲೋಗಳು ಎಲ್ಲರ ಗಮನ ಸೆಳೆದವು. ಈ ಬಾರಿಯ ಗಣರಾಜ್ಯೋತ್ಸವ ಹಲವು ವಿಶೇಷತೆಗಳಿಗೆ ಸಾಕ್ಷಿಯಾಯಿತು. ಅವುಗಳು ಇಂತಿವೆ;

    ಈಜಿಪ್ಟ್ ಅಧ್ಯಕ್ಷ ಮುಖ್ಯ ಅತಿಥಿಯಾಗಿ ಮೆರವಣಿಗೆಯಲ್ಲಿ ಭಾಗಿ;
    ಮೊದಲನೆಯದಾಗಿ ಈಜಿಪ್ಟ್ ದೇಶದ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್​-ಸಿಸಿ ಅವರು ಈ ಬಾರಿ ಭಾರತ ಗಣರಾಜ್ಯೋತ್ಸವ ಪರೇಡ್​ನ ಮುಖ್ಯಅತಿಥಿಯಾಗಿ ಪಾಲ್ಗೊಂಡಿದ್ದರು. ಈ ಹಿನ್ನೆಲೆ 144 ಈಜಿಫ್ಟ್​ನ ಯೋಧರು ಕರ್ತವ್ಯಪಥದಲ್ಲಿ ಪರೇಡ್ ಮಾಡಿದರು.

    ರಾಷ್ಟ್ರಪತಿಗಳಿಗೆ 21-ಗನ್ ಸೆಲ್ಯೂಟ್;
    ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಬ್ರಿಟಿಷರ ಕಾಲದ 25-ಪೌಂಡರ್ ಫಿರಂಗಿಗಳ ಬದಲಾಗಿ ಸ್ವದೇಶಿ ಫೀಲ್ಡ್​ಗನ್​ಗಳನ್ನು ರಾಷ್ಟ್ರಪತಿಗಳಿಗೆ ಸೆಲ್ಯೂಟ್ ನೀಡಲು ಬಳಸಲಾಯಿತು. ಇಷ್ಟು ವರ್ಷಗಳ ಕಾಲ ಬ್ರಿಟಿಷರ ಕಾಲದ 25-ಪೌಂಡರ್ ಫಿರಂಗಿಯಿಂದ 21-ಗನ್ ಸೆಲ್ಯೂಟ್ ಮಾಡಲಾಗುತ್ತಿತ್ತು. ಆದರೆ ಈ ವರ್ಷ 105 ಎಂಎಂ ಸ್ವದೇಶಿ ಫೀಲ್ಡ್​ಗನ್ ಬಳಸಲಾಗಿದೆ.

    ಭಾರತದ ಮೊದಲ ಪ್ಯಾಸೆಂಜರ್ ಡ್ರೋನ್‌ನ ಮ್ಯಾಜಿಕ್!
    ಪುಣೆಯ ಸಾಗರ್ ಡಿಫೆನ್ಸ್ ಇಂಜಿನಿಯರಿಂಗ್ ಆವಿಷ್ಕರಿಸಿದ ಭಾರತದ ಮೊದಲ ಪ್ಯಾಸೆಂಜರ್ ಡ್ರೋನ್​ ಕರ್ತವ್ಯ ಪಥದಲ್ಲಿ ಹಾರಾಡಿದೆ. ಈ ಪ್ಯಾಸೆಂಜರ್ ಡ್ರೋನ್‌ಗೆ ವರುಣ ಎಂದು ಹೆಸರಿಡಲಾಗಿದೆ. ಕೆಲ ಸಮಯದ ಹಿಂದೆ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಭಾರತೀಯ ನೌಕಾಪಡೆ ವರುಣನ ಪ್ರಾತ್ಯಕ್ಷಿಕೆ ನಡೆಸಲಾಗಿತ್ತು. ಮಾಹಿತಿಯ ಪ್ರಕಾರ, ಪ್ಯಾಸೆಂಜರ್ ಡ್ರೋನ್‌ನಲ್ಲಿ ಒಬ್ಬರು ಸವಾರಿ ಮಾಡಬಹುದು. ಡ್ರೋನ್ 130 ಕೆಜಿ ತೂಕದೊಂದಿಗೆ ಸುಮಾರು 25 ಕಿಲೋಮೀಟರ್ ಹಾರಬಲ್ಲ ಸಾಮರ್ಥ್ಯ ಹೊಂದಿದೆ.

    ವಿಶ್ವದ ಮೊದಲ ಮಹಿಳಾ ಒಂಟೆ ಸವಾರರ ತಂಡ ಭಾಗಿ
    74ನೇ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಮೊದಲ ಬಾರಿಗೆ ಗಡಿ ಭದ್ರತಾ ಪಡೆ (ಬಿಎಸ್‌ಎಫ್)ಯ ಪುರುಷ ಸೈನಿಕರೊಂದಿಗೆ ದೇಶದ ಮೊದಲ ಒಂಟೆ ಸವಾರಿ ಮಹಿಳಾ ತುಕಡಿ ಪರೇಡ್‌ನಲ್ಲಿ ಭಾಗವಹಿಸಿದೆ. ಬಿಎಸ್​ಎಫ್​ ಮಹಿಳಾ ಒಂಟೆ ತುಕಡಿಗೆ ರಾಜಸ್ಥಾನ ಫ್ರಾಂಟಿಯರ್ ಮತ್ತು ಬಿಕಾನೇರ್ ಸೆಕ್ಟರ್‌ನ ತರಬೇತಿ ಕೇಂದ್ರದಲ್ಲಿ ತರಬೇತಿ ನೀಡಲಾಗಿದೆ.

    ಪಥಸಂಚಲನದಲ್ಲಿ 6 ಅಗ್ನಿವೀರರು ಭಾಗಿ
    ರಕ್ಷಣಾ ಸಚಿವಾಲಯವು ಘೋಷಿಸಿದಂತೆ. 74 ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ, ಕರ್ತವ್ಯ ಪಥದಲ್ಲಿ ನಡೆದ ನೌಕಾಪಡೆಯ ಕವಾಯತು ತಂಡದಲ್ಲಿ ಆರು ಅಗ್ನಿವೀರರು ಭಾಗವಹಿಸಿದ್ದರು.

    ವಿವಿಐಪಿ ಆಸೀನಗಳು ರಿಕ್ಷಾ ಚಾಲಕರು, ತರಕಾರಿ ಮಾರಾಟಗಾರರಿಗೆ ಮೀಸಲು
    74ನೇ ಗಣರಾಜ್ಯೋತ್ಸವ ಕಾರ್ಯಕ್ರಮವು ಈ ಬಾರಿ ಹೊಸ ಕಾರಣದಿಂದ ವಿಭಿನ್ನವಾಗಿ ಗಮನಸೆಳೆದಿದೆ. ವಿವಿಐಪಿ ಆಸೀನಗಳನ್ನು ಈ ಬಾರಿ ರಿಕ್ಷಾ ಚಾಲಕರು, ಕಛೇರಿ ನಿರ್ವಹಣಾ ಕೆಲಸಗಾರರು, ತರಕಾರಿ ಮಾರಾಟಗಾರರು ಮತ್ತು ಅವರ ಕುಟುಂಬಗಳನ್ನು ಒಳಗೊಂಡಂತೆ ಸೆಂಟ್ರಲ್ ವಿಸ್ಟಾವನ್ನು ನಿರ್ಮಿಸಲು ಸಹಾಯ ಮಾಡಿದ ಶ್ರಮಜೀವಿಗಳಿಗೆ ಮೀಸಲಿಡಲಾಗಿತ್ತು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts