More

    ಹೊಸಬರ ಜತೆ ನಿರ್ದೇಶಕ ಶಶಾಂಕ್‌ ಸಿನಿಮಾ..

    ಕಾಲ ಕೂಡಿಬಂದಿದ್ದರೆ ಉಪೇಂದ್ರ ಮತ್ತು ಹರಿಪ್ರಿಯಾ ಅಭಿನಯದ ಚಿತ್ರದ ಚಿತ್ರೀಕರಣವನ್ನು ನಿರ್ದೇಶಕ ಶಶಾಂಕ್ ಪ್ರಾರಂಭಿಸಬೇಕಿತ್ತು. ಏಪ್ರಿಲ್ 20ರ ನಂತರ ಚಿತ್ರೀಕರಣ ಪ್ರಾರಂಭ ಮಾಡುವುದಾಗಿ ಅವರೇ ಹೇಳಿಕೊಂಡಿದ್ದರು. ಈ ಮಧ್ಯೆ, ಉಪೇಂದ್ರ ಮತ್ತು ಹರಿಪ್ರಿಯಾ ಅಭಿನಯದ ‘ಲಗಾಮ್ ಚಿತ್ರದ ಚಿತ್ರೀಕರಣ ಶುರುವಾಗಿದ್ದರಿಂದ, ಶಶಾಂಕ್ ಪ್ಲಾನ್​ಗಳಲ್ಲಿ ಒಂದಿಷ್ಟು ಬದಲಾವಣೆಗಳಾಗಿವೆ. ಉಪೇಂದ್ರ ಅಭಿನಯದ ಚಿತ್ರವನ್ನು ಮುಂದಕ್ಕೆ ಹಾಕಿರುವ ಶಶಾಂಕ್, ಆ ಗ್ಯಾಪ್​ನಲ್ಲಿ ಇನ್ನೊಂದು ಹೊಸ ಚಿತ್ರವನ್ನು ಸದ್ದಿಲ್ಲದೆ ಪ್ರಾರಂಭಿಸಿದ್ದಾರೆ. ಹಾಗೆ ನೋಡಿದರೆ, ‘ಮೊಗ್ಗಿನ ಮನಸ್ಸು’ ನಂತರ ಶಶಾಂಕ್ ಹೊಸಬರ ಜೊತೆಗೆ ಸಿನಿಮಾ ಮಾಡಿರಲೇ ಇಲ್ಲ. ಈಗ ಅವರು ಹೊಸಬರ ಚಿತ್ರವನ್ನು ನಿರ್ದೇಶಿಸುತ್ತಿರುವುದಷ್ಟೇ ಅಲ್ಲ, ಆ ಚಿತ್ರವನ್ನು ತಮ್ಮ ಶಶಾಂಕ್ ಸಿನಿಮಾಸ್ ಮೂಲಕ ನಿರ್ವಿುಸುತ್ತಿದ್ದಾರೆ. ಈ ಚಿತ್ರದ ಮೂಲಕ ಪ್ರವೀಣ್ ಎಂಬ ಹೊಸಪೇಟೆಯ ಹುಡುಗನನ್ನು ನಾಯಕನನ್ನಾಗಿ ಪರಿಚಯಿಸುತ್ತಿದ್ದಾರೆ. ಪ್ರವೀಣ್​ಗೆ ನಾಯಕಿಯಾಗಿ ಹೊಸ ಹುಡುಗಿಯನ್ನು ಪರಿಚಯಿಸಲಾಗುತ್ತಿದೆ. ಇದೊಂದು ಭಾವುಕ ಪ್ರೇಮಕಥೆಯಾಗಿದ್ದು, ಶಶಾಂಕ್ ಅವರೇ ಕಥೆ- ಚಿತ್ರಕಥೆ ರಚಿಸಿದ್ದಾರೆ. ಈಗಾಗಲೇ ಸದ್ದಿಲ್ಲದೆ ಮುಹೂರ್ತವಾಗಿದ್ದು, ಲಾಕ್​ಡೌನ್ ಮುಗಿದ ನಂತರ ಫೋಟೋಶೂಟ್ ಮಾಡಿ, ಚಿತ್ರದ ಶೀರ್ಷಿಕೆಯ ಜತೆಗೆ ಫಸ್ಟ್​ಲುಕ್ ಬಿಡುಗಡೆಯಾಗಲಿದೆಯಂತೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಜೂನ್​ನಲ್ಲಿ ಪ್ರಾರಂಭವಾಗಲಿದೆ.

    ಬಿಗ್​ಬಾಸ್​ಗೆ ಈ ವಾರನಾದ್ರೂ ಬರ್ತಾರಾ ಸುದೀಪ್​? ಕಿಚ್ಚ ಹೇಳಿದ್ದೇನು?

    ಹೆರಿಗೆಗೆ ಒಂದು ವಾರವಿರುವಾಗ ಕರೊನಾ ದೃಢವಾಯ್ತು! ಕೋವಿಡ್ ಕೊಟ್ಟ ನೋವನ್ನು ಹಂಚಿಕೊಂಡ ಬಿಗ್​ಬಾಸ್​ ಸ್ಪರ್ಧಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts