More

    ಹೆರಿಗೆಗೆ ಒಂದು ವಾರವಿರುವಾಗ ಕರೊನಾ ದೃಢವಾಯ್ತು! ಕೋವಿಡ್ ಕೊಟ್ಟ ನೋವನ್ನು ಹಂಚಿಕೊಂಡ ಬಿಗ್​ಬಾಸ್​ ಸ್ಪರ್ಧಿ

    ಅಮರಾವತಿ: ಕರೊನಾ ಪೂರ್ತಿ ದೇಶವನ್ನೇ ಬೆಚ್ಚಿ ಬೀಳಿಸಿದೆ. ಅನೇಕರು ಕರೊನಾದಿಂದಾಗಿ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಸಿನಿಮಾ ರಂಗದಲ್ಲೂ ಕರೊನಾ ಕರಿ ನೆರಳು ಬಿದ್ದಿದ್ದು, ತಮ್ಮ ಕರೊನಾ ದಿನಗಳ ಅನುಭವಗಳನ್ನು ನಟಿಯೊಬ್ಬರು ಹಂಚಿಕೊಂಡಿದ್ದಾರೆ.

    ತೆಲುಗು ನಟಿ, ತೆಲುಗು ಬಿಗ್​ಬಾಸ್​ನ ಮಾಜಿ ಸ್ಪರ್ಧಿ ಹರಿ ತೇಜಾ ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಡೆಲಿವರಿ ಆಗುವುದಕ್ಕೆ ಒಂದು ವಾರ ಮೊದಲು ಅವರಿಗೆ ಮತ್ತು ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಕರೊನಾ ದೃಢವಾಗಿತ್ತಂತೆ. ಆ ಕಾರಣದಿಂದಾಗಿ ಅವರಿಗೆ ಮಗುವನ್ನು ಬಿಟ್ಟಿರಬೇಕಾದ ಪರಿಸ್ಥಿತಿ ಎದುರಾಯಿತಂತೆ. ಕುಟುಂಬದವರು ಯಾರೂ ಮಗುವನ್ನು ನೋಡಿ, ಮುದ್ದಾಡಲು ಆಗಿರಲಿಲ್ಲವಂತೆ.

    ಈ ವಿಚಾರವಾಗಿ ನಟಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅದೇ ಕಾರಣದಿಂದಾಗಿ ಅಭಿಮಾನಿಗಳು ಶುಭ ಕೋರಿದರೂ ಅದಕ್ಕೆ ಪ್ರತಿಕ್ರಿಯಿಸಲು ಆಗಿರಲಿಲ್ಲ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಮಗಳ ಮಡಿಲಲ್ಲೇ ಪ್ರಾಣ ಬಿಟ್ಟ ತಾಯಿ! ಜೆಸಿಬಿಯಲ್ಲಿ ಶವ ಹೊತ್ತೊಯ್ದ ಸ್ಥಳೀಯರು! ಮನಕಲಕುವ ಘಟನೆ

    ನಾದಿನಿ ಜತೆ ಭಾವನ ಅಕ್ರಮ ಸಂಬಂಧ! ಅವಳಿ ಮಕ್ಕಳನ್ನು ಗರ್ಭದಲ್ಲಿ ಹೊತ್ತಿದ್ದ ಹೆಂಡತಿಯನ್ನೇ ಕೊಂದ ಗಂಡ!

    ಗಂಡ ಸೆಕ್ಸ್​ ಮಾಡಲ್ಲ ಎಂದು ಪೊಲೀಸ್​ ಠಾಣೆಯ ಮೆಟ್ಟಿಲೇರಿದ ಹೆಂಡತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts