ಬಿಗ್​ಬಾಸ್​ಗೆ ಈ ವಾರನಾದ್ರೂ ಬರ್ತಾರಾ ಸುದೀಪ್​? ಕಿಚ್ಚ ಹೇಳಿದ್ದೇನು?

sudeep
Published on

ಬೆಂಗಳೂರು: ಕನ್ನಡದ ಬಿಗ್​ಬಾಸ್​ ಸೀಸನ್​ 8 ಅದ್ಭುತವಾಗಿ ಮೂಡಿಬರುತ್ತಿದೆ. ಪ್ರತಿ ಶನಿವಾರ ಮತ್ತು ಭಾನುವಾರ ಕಿಚ್ಚ ಸುದೀಪ್​ ಮನೆ ಮಂದಿಯೊಂದಿಗೆ ಮಾತನಾಡಿ, ತಪ್ಪನ್ನು ತಿದ್ದಿ, ಸರಿಯನ್ನು ಪ್ರಶಂಶಿಸಿ, ಮನೆಯಿಂದ ಒಬ್ಬರನ್ನು ಆಚೆ ಕರೆಸುತ್ತಿದ್ದರು. ಆದರೆ ಕಳೆದ ಎರಡು ವಾರಗಳಿಂದ ಅನಾರೋಗ್ಯ ಹಿನ್ನೆಲೆಯಲ್ಲಿ ಸುದೀಪ್​ ಬಿಗ್​ಬಾಸ್​ನಿಂದ ದೂರ ಉಳಿದಿದ್ದರು. ಅದೇ ರೀತಿ ಈ ವಾರನೂ ಬಿಗ್​ಬಾಸ್​ ಇಂದ ತಪ್ಪಿಸಿಕೊಳ್ತಾರಾ ಅಥವಾ ಅವರೇ ಬಂದು ಎಲಿಮಿನೇಷನ್​ ಮಾಡ್ತಾರಾ?

ಇಂತದ್ದೊಂದು ಪ್ರಶ್ನೆ ಎಲ್ಲರ ತಲೆಯಲ್ಲು ಕಾಡಿದೆ. ಆ ಪ್ರಶ್ನೆಗೆ ಇದೀಗ ಸ್ವತಃ ಸುದೀಪ್​ ಅವರೇ ಉತ್ತರ ನೀಡಿದ್ದಾರೆ. ಟ್ವಿಟ್ಟರ್​ನಲ್ಲಿ ಟ್ವೀಟ್​ ಮಾಡಿರುವ ಅವರು, "ನನಗಾಗಿ ಪ್ರಾರ್ಥಿಸಿದ್ದಕ್ಕಾಗಿ ಧನ್ಯವಾದಗಳು. ನನ್ನ ಆರೋಗ್ಯ ಸುಧಾರಿಸಿದೆ. ಈ ವಾರ ಬಿಗ್​ಬಾಸ್​ಗೆ ತೆರಳುವುದಕ್ಕೆ ಕಾಯುತ್ತಿದ್ದೇನೆ" ಎಂದು ಬರೆದುಕೊಂಡಿದ್ದಾರೆ.

ಅದರೊಂದಿಗೆ ಅವರಿಗೆ ಚಿಕಿತ್ಸೆ ನೀಡುತ್ತಿರುವ ಡಾ. ವೆಂಕಟೇಶ್ ಮತ್ತು ಡಾ. ವಿನಯ್​ಗೆ ಧನ್ಯವಾದ ತಿಳಿಸಿದ್ದಾರೆ. ದೇಗುಲಗಳಲ್ಲಿ ನನಗಾಗಿ ಪ್ರಾರ್ಥನೆ ಮಾಡಿದ ಅನೇಕ ವಿಡಿಯೋಗಳನ್ನು ನೋಡಿದ್ದೇನೆ. ನಿಮಗೆಲ್ಲರಿಗೂ ಲವ್​ ಯು ಎನ್ನಬಹುದು, ಅಷ್ಟೇ ನನ್ನ ಕೈಲಿ ಸಾಧ್ಯವಾಗುವುದು ಎಂದು ಹೇಳಿದ್ದಾರೆ.

ಎರಡು ವಾರ ಬಿಗ್​ಬಾಸ್​ಗೆ ಬಾರದ ಸುದೀಪ್​ ಈ ವಾರ ಬರುವುದು ದೃಢವಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net