More

  ರೇಣುಕಸ್ವಾಮಿ ಹತ್ಯೆ ಕೇಸ್​; ನಾಯಿ ಮೇಲೆ ಆನೆ ದಾಳಿ ಮಾಡಿದಂತೆ ಎಂದ ರಾಮ್​ಗೋಪಾಲ್​ ವರ್ಮಾ

  ಹೈದರಾಬಾದ್​: ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್​ ಸೇರಿದಂತೆ ಪ್ರಕರಣದ 19 ಮಂದಿ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಆರೋಪಿಗಳನ್ನು ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರಿಸಲಾಗಿದೆ. ಇತ್ತ ಪ್ರಕರಣಕ್ಕೆ ಸಂಬಂಧಿಸಿದಂತೆ ಪರ-ವಿರೋಧದ ಚರ್ಚೆ ನಡೆಯುತ್ತಿದ್ದು, ಇದೀಗ ಖ್ಯಾತ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ನಟ ದರ್ಶನ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

  ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುವ ನಿರ್ದೇಶಕ ರಾಮ್​​ಗೋಪಾಲ್​ ವರ್ಮಾ ಸಾಮಾಜಿಕ ಜಾಲತಾಣದಲ್ಲಿ ಹಲವು ವಿಚಾರಗಳ ಬಗ್ಗೆ ಧ್ವನಿ ಎತ್ತುತ್ತಿರುತ್ತಾರೆ. ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರಂಭದಲ್ಲಿ ಮಾತನಾಡಿದ್ದ ಆರ್​ಜಿವಿ ಇದೀಗ ಮತ್ತೊಮ್ಮೆ ಧ್ವನಿ ಎತ್ತಿದ್ದಾರೆ. ನಟ ದರ್ಶನ್​ರನ್ನು ಆನೆ, ರೇಣುಕಸ್ವಾಮಿಯನ್ನು ಶ್ವಾನ (ಗಾತ್ರದ ಪ್ರಕಾರ) ಎಂದು ಕರೆದಿದ್ದಾರೆ.

  ಇದನ್ನೂ ಓದಿ: ನಟ ದರ್ಶನ್ ಕೈದಿ ನಂಬರ್ ಎಷ್ಟು..? ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಬಂಧಿ ನಂಬರ್ ವಿತರಣೆ..

  ಈ ಕುರಿತು ಮಾತನಾಡಿರುವ ಆರ್​ಜಿವಿ, ರೇಣುಕಾ ಸ್ವಾಮಿಯ ಮೇಲೆ ದರ್ಶನ್ ದಾಳಿ ಮಾಡಿರುವುದು ಆನೆ ನಾಯಿಯ ಮೇಲೆ ದಾಳಿ ಮಾಡಿದಂತೆ. ನಾನು ನಾಯಿಯನ್ನು ಅವಹೇಳನ ಮಾಡಲು ಹೇಳುತ್ತಿಲ್ಲಾ. ಗಾತ್ರದ ವಿಚಾರವಾಗಿ ಹೇಳುತ್ತಿದ್ದೇನೆ. ನಾಯಿ ಬೊಗಳಿತು ಎಂಬ ಕಾರಣಕ್ಕೆ ಆನೆ ಹೋಗಿ ಅದರ ಮೇಲೆ ದಾಳಿ ಮಾಡಿದರೆ ಏನಾಗಬಹುದು ನೀವೇ ಯೋಚನೆ ಮಾಡಿ ಎಂದು ರಾಮ್​ಗೋಪಾಲ್​ ವರ್ಮಾ ಹೇಳಿದ್ದಾರೆ. ಇತ್ತ ರಾಮ್​ಗೋಪಾಲ್ ವರ್ಮಾ ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.

  See also  ಬೈಕ್​​ಗೆ ಲಾರಿ ಡಿಕ್ಕಿ; ತಲೆ ಮೇಲೆ ಹರಿದ ಲಾರಿ.. ಬೈಕ್​​ ಸವಾರ ಮೃತ್ಯು!

  ಪೊಲೀಸ್​ ಕಸ್ಟಡಿ ಅಂತ್ಯವಾದ ಹಿನ್ನೆಲೆ ನಟ ದರ್ಶನ್​ ಹಾಗೂ ನಾಲ್ವರು ಸಹಚರರನ್ನು ಪೊಲೀಸರು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಜುಲೈ 04ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ. ನಟ ದರ್ಶನ್ ಹಾಗೂ​ ಕಸ್ಟಡಿಯಲ್ಲಿದ್ದ ಇತರ ಆರೋಪಿಗಳನ್ನು ಪೊಲೀಸರು ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts