

ಆಂಧ್ರಪ್ರದೇಶ: ಭಾನುವಾರ (ಆಗಸ್ಟ್ 27) ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆಲ್ಲುವ ಮೂಲಕ ಮತ್ತೊಮ್ಮೆ ಐತಿಹಾಸಿಕ ಸಾಧನೆಗೈದ ನೀರಜ್ ಚೋಪ್ರಾ ಅವರಿಗೆ ದೇಶಾದ್ಯಂತ ಇದೀಗ ವ್ಯಾಪಕ ಅಭಿನಂದನೆಗಳು ಹರಿದುಬರುತ್ತಿವೆ. ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾರತೀಯರೊಬ್ಬರು ಚಿನ್ನದ ಪದಕ ಗೆದ್ದಿರುವುದು ಇದೇ ಮೊದಲು ಎಂಬ ಹೆಗ್ಗಳಿಕೆ ನೀರಜ್ ಪಾತ್ರರಾಗಿದ್ದಾರೆ.
ಇದನ್ನೂ ಓದಿ: ಉ.ಕದಲ್ಲಿಯೇ ರಡ್ಡಿ ಸಮುದಾಯದ ಬೃಹತ್ ಸಮಾವೇಶ ಆಯೋಜನೆ
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಬೆನ್ನಲ್ಲೇ ಚಿತ್ರರಂಗದ ಹಲವು ಸ್ಟಾರ್ ನಟ-ನಟಿಯರು ಸೇರಿದಂತೆ ಅನೇಕ ಗಣ್ಯರಿಂದ ನೀರಜ್ಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಈ ಸಾಲಿನಲ್ಲಿ ಭಾರತದ ಸ್ಟಾರ್ ನಿರ್ದೇಶಕ ಮತ್ತು ಟಾಲಿವುಡ್ನ ಐಕಾನ್ ಸ್ಟಾರ್, ಅಲ್ಲು ಅರ್ಜುನ್ ಟ್ವೀಟ್ಗಳು ನೆಟ್ಟಿಗರ ಗಮನ ಸೆಳೆದಿವೆ.
ನೀರಜ್ ಚೋಪ್ರಾ ಗೆಲುವಿಗೆ ಪ್ರತಿಕ್ರಿಯಿಸಿರುವ ಎಸ್.ಎಸ್. ರಾಜಮೌಳಿ, "ಮತ್ತೊಮ್ಮೆ ನಮ್ಮ ಚಿನ್ನದ ಹುಡುಗ ಸಾಧಿಸಿದ್ದಾರೆ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಪಾತ್ರರಾದ ನೀರಜ್ ಚೋಪ್ರಾಗೆ ಅಭಿನಂದನೆಗಳು" ಎಂದು ಟ್ವೀಟ್ ಮಾಡಿದ್ದಾರೆ.
"ಮೊದಲ ಬಾರಿಗೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದಿದ್ದಕ್ಕಾಗಿ ನೀರಜ್ ಚೋಪ್ರಾ ಅವರಿಗೆ ಅಭಿನಂದನೆಗಳು. ಇದು ಭಾರತಕ್ಕೆ ಹೆಮ್ಮೆಯ ಗೆಲುವು, ಜೈ ಹಿಂದ್" ಎಂದು ನಟ ಅಲ್ಲು ಅರ್ಜುನ್ ಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದಾರೆ,(ಏಜೆನ್ಸೀಸ್).