

ಇತ್ತೀಚೆಗಷ್ಟೇ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚಮ್ ಸೇರಿ ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈಗೂ ಕರೊನಾ ಪಾಸಿಟಿವ್ ವರದಿಯಾಗಿತ್ತು. ಈಗಷ್ಟೇ ಅವರೆಲ್ಲ ಅದರಿಂದ ಚೇತರಿಸಿಕೊಂಡು, ಮನೆಯಲ್ಲಿ ಹೋಮ್ ಕ್ವಾರಂಟೈನ್ ಆಗಿದ್ದಾರೆ. ಅದಾದ ಬಳಿಕ ಹಲವು ಸಿನಿಮಾ ಮಂದಿಗೂ ಸೋಂಕು ಇರುವುದು ದೃಢಪಟ್ಟಿತ್ತು. ಇದೀಗ ಬಾಲಿವುಡ್ನ ಹಿರಿಯ ನಟನ ಸಹೋದರರಿಗೂ ಕರೊನಾ ಅಂಟಿಕೊಂಡಿದೆ.
ಬಾಲಿವುಡ್ನ ಹಿರಿಯ ನಟ ದಿಲೀಪ್ ಕುಮಾರ್ ಸಹೋದದರಿಗೆ ಕರೊನಾ ಪಾಸಿಟಿವ್ ಇರುವುದು ವರದಿಯಾಗಿದೆ. 90 ವರ್ಷದ ಎಹ್ಸಾನ್ ಖಾನ್ ಮತ್ತು ಅಸ್ಲಮ್ ಖಾನ್ ಕರೊನಾ ಹಿನ್ನೆಲೆಯಲ್ಲಿ ಮುಂಬೈನ ಬಾಂದ್ರಾದಲ್ಲಿರುವ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವಿಚಾರವನ್ನು ಆಸ್ಪತ್ರೆ ವೈದ್ಯರು ಪ್ರಕಟಣೆ ಮೂಲಕ ಬಹಿರಂಗ ಪಡಿಸಿದ್ದು, ದಿಲೀಪ್ ಕುಮಾರ್ ಪತ್ನಿ, ಹಿರಿಯ ನಟಿ ಸೈರಾ ಬಾನು ಸಹ ಅದೇ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇಬ್ಬರು ಸಹೋದದರು ರಕ್ತದೊತ್ತಡದಿಂದ ಬಳಲುತ್ತಿದ್ದು, ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಸಹೋದದರ ಚೇತರಿಕೆ ಸಲುವಾಗಿ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದ್ದಾರೆ ದಿಲೀಪ್ ಕುಮಾರ್. (ಏಜೆನ್ಸೀಸ್)