

ಆಲಿಯಾ ಭಟ್ ಅಭಿನಯದ ‘ಸಡಕ್ 2’ ಹೊಸ ದಾಖಲೆ ಸೃಷ್ಟಿಸಿದೆ. ಬುಧವಾರವಷ್ಟೇ ಬಿಡುಗಡೆಯಾಗಿದ್ದ ಚಿತ್ರದ ಟ್ರೈಲರ್ಗೆ ನಾಲ್ಕೇ ದಿನದಲ್ಲಿ ಲಕ್ಷ ಲಕ್ಷ ಜನರಿಂದ ಡಿಸ್ಲೈಕ್ಗಳ ಸುರಿಮಳೆ ಹರಿದುಬಂದಿದೆ. ಇದೀಗ ಭಾರತೀಯ ಸಿನಿಮಾ ಇತಿಹಾಸದಲ್ಲೇ ಸಡಕ್ 2 ಚಿತ್ರ ಹೊಸ ದಾಖಲೆ ಬರೆದಿದೆ. ವಿಶ್ವದಲ್ಲಿ ಮೂರನೇ ಸಿನಿಮಾ ಎಂಬ ಖ್ಯಾತಿ ಪಡೆದರೆ, ಭಾರತದಲ್ಲಿ ಅತಿ ಹೆಚ್ಚು ಡಿಸ್ಲೈಕ್ ಪಡೆದ ಮೊದಲ ಚಿತ್ರವಾಗಿದೆ.
ಹೌದು, ವಿಶ್ವದಲ್ಲಿಯೇ ಅತೀ ಹೆಚ್ಚು ಡಿಸ್ಲೈಕ್ ಪಡೆದ ಸಿನಿಮಾಗಳ ಸಾಲಿನಲ್ಲಿ ಆಲಿಯಾ ಮೂರನೇ ಸ್ಥಾನದಲ್ಲಿದ್ದಾರೆ. ಟ್ರೇಲರ್ ಬಿಡುಗಡೆಯಾಗಿ ನಾಲ್ಕು ದಿನದಲ್ಲಿ 51 ಮಿಲಿಯನ್ (5.1 ಕೋಟಿ) ವೀಕ್ಷಣೆ ಕಂಡರೆ, ಬರೋಬ್ಬರಿ 10 ಮಿಲಿಯನ್ (ಒಂದು ಕೋಟಿ) ಜನ ಟ್ರೇಲರ್ಗೆ ಡಿಸ್ಲೈಕ್ ಒತ್ತಿದ್ದಾರೆ.
ಇದನ್ನೂ ಓದಿ: ಎಸ್ಪಿ ಬಾಲಸುಬ್ರಮಣ್ಯಂ ಪತ್ನಿ ಸಾವಿತ್ರಿಗೂ ಕರೊನಾ!?
ಇನ್ನು ಪಾಪ್ ಗಾಯಕ ಜಸ್ಟಿನ್ ಬೇಬರ್ ಅವರ ಬೇಬಿ ಹಾಡಿಗೆ 11 ಮಿಲಿಯನ್ ಡಿಸ್ಲೈಕ್ ಸಂದಾಯವಾಗಿದ್ದವು. ಮೊದಲ ಸ್ಥಾನದಲ್ಲಿ ಸ್ವತಃ ಯೂಟ್ಯೂಬ್ ಸಂಸ್ಥೆಯೇ ಹಾಕಿದ್ದ ಎ ರಿವೈಂಡ್ ಆಫ್ ದಿ ಇಯರ್ 2018 ಹಾಡಿಗೆ ಒಟ್ಟು 18.2 ಮಿಲಿಯನ್ ಡಿಸ್ಲೈಕ್ ಸಂದಾಯವಾಗಿದೆ. ಸದ್ಯ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ ಅತಿ ಹೆಚ್ಚು ಪ್ರೇಕ್ಷಕರ ಅವಕೃಪೆಗೆ ಪಾತ್ರವಾದ ಚಿತ್ರದ ಟ್ರೈಲರ್ ಎಂಬ ಖ್ಯಾತಿಯನ್ನು ಸಡಕ್ 2 ಚಿತ್ರ ಪಡೆದುಕೊಂಡಿದೆ.
ಸುಶಾಂತ್ ಆತ್ಮಹತ್ಯೆ ಬಳಿಕ ಸ್ವಜನಪಕ್ಷಪಾತ ವಿಚಾರವಾಗಿ ಆಲಿಯಾ ಭಟ್ ಸೇರಿ ಸಡಕ್ ಚಿತ್ರಕ್ಕೆ ಟ್ರೋಲ್ ಮಾಡಲಾಗುತ್ತಿದ್ದು, ಸಿನಿಮಾ ನಿಷೇಧಕ್ಕೂ ನೆಟ್ಟಿಗರು ದನಿ ಗೂಡಿಸಿದ್ದಾರೆ. ಅಂದಹಾಗೆ ಆಗಸ್ಟ್ 28ಕ್ಕೆ ಡಿಸ್ನಿ ಹಾಟ್ಸ್ಟಾರ್ನಲ್ಲಿ ಈ ಚಿತ್ರ ರಿಲೀಸ್ ಆಗಲಿದೆ. (ಏಜೆನ್ಸೀಸ್)