More

    ಎಸ್​ಪಿ ಬಾಲಸುಬ್ರಮಣ್ಯಂ ಪತ್ನಿ ಸಾವಿತ್ರಿಗೂ ಕರೊನಾ!?

    ಕರೊನಾ ಸೋಂಕು ತಗುಲಿದ ಹಿನ್ನೆಲೆ ಆಗಸ್ಟ್ 5ರಂದು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಸ್​.ಪಿ. ಬಾಲಸುಬ್ರಮಣ್ಯಂ ಅವರ ಆರೋಗ್ಯ ಸ್ಥಿತಿ ಹದಗೆಡುತ್ತಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಇದೇ ಕುಟುಂಬದಿಂದ ಇನ್ನೊಂದು ಬ್ರೇಕಿಂಗ್​ ಸುದ್ದಿ ಹೊರಬಿದ್ದಿದೆ. ಎಸ್​ಪಿಬಿ ಪತ್ನಿ ಸಾವಿತ್ರಿ ಅವರಿಗೂ ಕರೊನಾ ತಗುಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.

    ಇದನ್ನೂ ಓದಿ: ಹೆಡ್-ಬುಷ್ ಆಡ್ತಿದ್ದಾರೆ ಧನಂಜಯ್: ಆರು ಭಾಷೆಗಳಲ್ಲಿ ಜಯರಾಜ್​ನ ದಾದಾಗಿರಿಯ ದಿನಗಳು

    ಈಗಾಗಲೇ ಎಸ್​ಪಿಬಿ ಆರೋಗ್ಯ ವಿಚಾರಕ್ಕೆ ಇಡೀ ಕುಟುಂಬ ಆತಂಕದಲ್ಲಿದೆ. ಇದರ ನಡುವೆಯೇ ತಾಯಿಗೂ ಕರೊನಾ ಸೋಂಕು ಇರುವುದು ಇಡೀ ಕುಟುಂಬಕ್ಕೆ ನೋವನ್ನುಂಟು ಮಾಡಿದೆ. ಸದ್ಯ ಈ ಸುದ್ದಿಯನ್ನು ಕುಟುಂಬ ಎಲ್ಲಿಯೂ ಬಹಿರಂಗ ಪಡಿಸಿಲ್ಲ. ಆದರೆ, ಅವರಿಗೂ ಕರೊನಾ ತಗುಲಿರುವ ಬಗ್ಗೆ ಮಾತು ಕೇಳಿಬರುತ್ತಿದೆ.

    ಇದನ್ನೂ ಓದಿ: ಸಿನಿ ಸ್ವಾತಂತ್ರ್ಯ: ಸೋಷಿಯಲ್ ಮೀಡಿಯಾದಲ್ಲಿ ತಾರೆಯರ ಸಂಭ್ರಮ

    ಸದ್ಯ ಆಸ್ಪತ್ರೆಯೊಂದರಲ್ಲಿ ದಾಖಲಾಗಿರುವ ಸಾವಿತ್ರಿ, ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ತೀವ್ರ ನಿಗಾ ಘಟಕದಲ್ಲಿ ಎಸ್​ಪಿಬಿ ಅವರಿಗೆ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ಪ್ಲಾಸ್ಮಾ ಥೆರಪಿಯನ್ನೂ ಎಸ್​ಪಿಬಿ ಅವರಿಗೆ ಮಾಡಿದ್ದು, ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡು ಬಂದಿದೆಯಾದರೂ, ಚೇತರಿಕೆಗೆ ಇನ್ನೂ ಸಮಯದ ಅವಶ್ಯಕತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. (ಏಜೆನ್ಸೀಸ್​)

    ತ್ರಿವಿಕ್ರಮ ಟೀಸರ್ ರಿಲೀಸ್; ಮಾಸ್ ಅವತಾರದಲ್ಲಿ ಜೂ. ರವಿಚಂದ್ರನ್​ ಎಂಟ್ರಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts