ಉನ್ನತ ಸ್ಥಾನ ತಲುಪಲು ಶ್ರದ್ಧೆ ಮುಖ್ಯ

20sor1
ಸೊರಬದ ಸರ್ಕಾರಿ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಪ್ರಾಚಾರ್ಯೆ ಪ್ರೊ. ನೇತ್ರಾವತಿ ಉದ್ಘಾಟಿಸಿದರು. ಆಶಾ ಗೌಡರ್, ರಾಜಶೇಖರ ಗೌಡ, ಮಂಜುನಾಥ್ ಇತರರಿದ್ದರು.
Published on

ಸೊರಬ: ವಿದ್ಯಾರ್ಥಿಗಳು ಕಲಿಕೆಯಲ್ಲಿ ಆಸಕ್ತಿ ಹೊಂದಿದಾಗ ಮಾತ್ರ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ಪ್ರಾಚಾರ್ಯೆ ಪ್ರೊ. ನೇತ್ರಾವತಿ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸ್ವಾಗತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಉನ್ನತ ಸ್ಥಾನ ತಲುಪಲು ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಹಾಗೂ ಪ್ರಾಮಾಣಿಕತೆ ಬೆಳೆಸಿಕೊಳ್ಳಬೇಕು. ಪದವಿಯಲ್ಲಿ ಗಳಿಸಿದ ಜ್ಞಾನ ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ಸಹಕಾರಿ. ಸಮಯ ವ್ಯರ್ಥ ಮಾಡದೆ ಓದು, ಬರವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.

ಪ್ರತಿ ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಾಗಿದ್ದು, ತರಗತಿಯಲ್ಲಿ ನಡೆದ ಪಾಠ, ಪ್ರವಚನವನ್ನು ಮನನ ಮಾಡಿಕೊಳ್ಳಬೇಕು. ಶಿಕ್ಷಕರನ್ನು ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ಗೌರವಯುತ ಬದುಕು ಕಟ್ಟಿಕೊಳ್ಳಲು ನೆರವಾಗುತ್ತದೆ ಎಂದರು.

ರಾಣೆಬೆನ್ನೂರು ಕಾಲೇಜಿಗೆ ವರ್ಗಾವಣೆಗೊಂಡ ಪ್ರಾಧ್ಯಾಪಕರಾದ ವರ್ಷಾ ಕಾಸನಾಳೆ ಹಾಗೂ ದಿಲೀಪ್ ಅವರನ್ನು ಸನ್ಮಾನಿಸಲಾಯಿತು. ಚಂದ್ರಪ್ಪ, ಇಂದೂಧರ, ತೇಜಸ್ವಿನಿ, ದೇವರಾಜ್, ಆಶಾ ಗೌಡರ್, ರಾಜಶೇಖರ ಗೌಡ, ಮಂಜುನಾಥ್, ಕೊಟ್ರಪ್ಪ, ನೇಂದ್ರಪ್ಪ, ಚಂದ್ರಪ್ಪ, ಜೋಷಿ, ಮೋಹನಕುಮಾರ್, ಪವಿತ್ರಾ, ಕಿರಣಕುಮಾರ್ ಹಾಗೂ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net