'ದಿಲ್ ಪಸಂದ್'ನಲ್ಲಿ ಕಾಮಿಡಿ ಜತೆಗೆ ಸೆಂಟಿಮೆಂಟ್​ ಸಹ ಇದೆ ...

Dil Pasand (2)
Published on

ಬೆಂಗಳೂರು: 'ಮಕ್ಳು ಸೋಲ್ಬಾರ್ದು ಕಣೋ. ಮಕ್ಳು ಸೋತ್ರೆ ಅಪ್ಪ-ಅಮ್ಮ ಸೋತಂಗೆ ಕಣೋ ...'

ಅಲ್ಲಿಯವರೆಗೂ ತಮಾಷೆಯೊಂದಿಗೆ ಸಾಗುವ ಟ್ರೇಲರ್​, ಮಗನಿಗೆ ಇಂಥದ್ದೊಂದು ಮಾತು ಹೇಳುವ ಮೂಲಕ ಗಂಭೀರವಾಗುತ್ತದೆ. 'ದಿಲ್​ ಪಸಂದ್​' ಒಂದು ಪಕ್ಕಾ ರೊಮ್ಯಾಂಟಿಕ್​ ಕಾಮಿಡಿ ಚಿತ್ರ, ಇದರಲ್ಲಿ ಒಂದಿಷ್ಟು ಮಜ ಇರಬಹುದು ಎಂದುಕೊಂಡಿದ್ದವರಿಗೆ, ಚಿತ್ರದಲ್ಲಿ ಸೆಂಟಿಮೆಂಟ್​ ಸಹ ಇದೆ ಎಂಬುದನ್ನು ತೋರಿಸಲಾಗಿದೆ.

'ಡಾರ್ಲಿಂಗ್' ಕೃಷ್ಣ ನಾಯಕನಾಗಿ ನಟಿಸಿರುವ 'ದಿಲ್ ಪಸಂದ್' ಚಿತ್ರವು ಇದೇ ನವೆಂಬರ್ 11ರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಈ ಚಿತ್ರದ ಟ್ರೇಲರ್​ನ್ನು, ಯೂಟ್ಯೂಬ್​ನ ಆನಂದ್​ ಆಡಿಯೋ ಚಾನಲ್​ನಲ್ಲಿ ಇಂದು ಬೆಳಿಗ್ಗೆ ಬಿಡುಗಡೆ ಮಾಡಲಾಗಿದೆ.

ರಶ್ಮಿ ಫಿಲಂಸ್ ಲಾಂಛನದಲ್ಲಿ ಸುಮಂತ್ ಕ್ರಾಂತಿ ನಿರ್ಮಿಸಿರುವ ಈ ಚಿತ್ರವನ್ನು ಶಿವತೇಜಸ್ ನಿರ್ದೇಶಿಸಿದ್ದಾರೆ. ಪ್ರೇಮಕಥೆಯ ಜತೆಗೆ ಫ್ಯಾಮಿಲಿ ಸೆಂಟಿಮೆಂಟ್​ ಸಹ ಈ ಚಿತ್ರದಲ್ಲಿದ್ದು, ಕೃಷ್ಣಗೆ ನಾಯಕಿಯರಾಗಿ ನಿಶ್ವಿಕಾ ನಾಯ್ಡು ಮತ್ತು ಮೇಘಾ ಶೆಟ್ಟಿ ನಟಿಸಿದ್ದಾರೆ.

ಪ್ರಮುಖ ಪಾತ್ರಗಳಲ್ಲಿ ಸಾಧು ಕೋಕಿಲ, ರಂಗಾಯಣ ರಘು, ತಬಲ ನಾಣಿ, ಗಿರಿ, ಅರುಣಾ ಬಾಲರಾಜ್ ಮುಂತಾದವರು ನಟಿಸಿದ್ದು, ಅಜೇಯ್​ ರಾವ್​ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದ್ವಿತೀಯಾರ್ಧದಲ್ಲಿ ಅವರ ಪಾತ್ರ ಬರಲಿದ್ದು, ಚಿತ್ರಕ್ಕೆ ಅವರ ಪಾತ್ರ ಟ್ವಿಸ್ಟ್​ ಕೊಡಲಿದೆಯಂತೆ.

'ದಿಲ್​ ಪಸಂದ್​'ಗೆ ಅರ್ಜುನ್​ ಜನ್ಯ ಸಂಗೀತ ಸಂಯೋಜಿಸಿದ್ದು, ಶೇಖರ್ ಚಂದ್ರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net