More

    ಸುಶಾಂತ್​ ಕೊನೇ ಸಿನಿಮಾಕ್ಕೆ ಇಂಥ ಪರಿಸ್ಥಿತಿ ಬರಬಾರದಿತ್ತು!

    ಡಿಸ್ನಿ ಹಾಟ್​ಸ್ಟಾರ್​ನಲ್ಲಿ ಜು. 24ಕ್ಕೆ ಸುಶಾಂತ್​ ಸಿಂಗ್​ ರಜಪೂತ್ ನಟನೆಯ ದಿಲ್ ಬೇಚಾರಾ ಸಿನಿಮಾ ಎಕ್ಸ್​​ಕ್ಲೂಸಿವ್​ ಆಗಿ ಪ್ರೀಮಿಯರ್ ಆಗಿದೆ. ಸುಶಾಂತ್​ ಸಾವಿನ ಬಳಿಕ ಅವರ ಈ ಸಿನಿಮಾ ನೋಡಲು ಸಾಕಷ್ಟು ಮಂದಿ ಕಾಯುತ್ತಿದ್ದರು. ಆದರೆ, ಇದೀಗ ಅವರ ಸಿನಿಮಾ ಆನ್​ಲೈನ್​ನಲ್ಲಿ ಲೀಕ್​ ಆಗಿದೆ.

    ಇದನ್ನೂ ಓದಿ: ಎಲ್ಲರನ್ನು ಒಟ್ಟಾಗಿ ಕರೆದೊಯ್ಯುವವನೇ ನಾಯಕ…

    ಹೌದು, ಸಿನಿಮಾ ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ ತಮಿಳು ರಾಕರ್ಸ್,​ ಚಿತ್ರದ ಒರಿಜಿನಲ್​ ಕಾಪಿಯನ್ನು ಡೌನ್​ಲೋಡ್​ ಮಾಡಿ ಶೇರ್​ ಮಾಡಿದ್ದಾರೆ. ಎಲ್ಲೆಡೆ ಉಚಿತವಾಗಿ ಈ ಸಿನಿಮಾ ವೀಕ್ಷಣೆಯಾಗುತ್ತಿರುವುದು ಚಿತ್ರತಂಡಕ್ಕೆ ತಲೆಬಿಸಿಯಾಗಿದೆ.

    ಈಗಾಗಲೇ ಚಿತ್ರಕ್ಕೆ ಒಳ್ಳೇ ಪ್ರತಿಕ್ರಿಯೆ ಸಿಗುತ್ತಿದ್ದು, ಸಿನಿಮಾ ನೋಡಿದವರು ಸುಶಾಂತ್​ ಅವರನ್ನು ಮತ್ತೆ ಮತ್ತೆ ನೋಡಲು ಮನಸು ಮಾಡುತ್ತಿದ್ದಾರೆ. ಆದರೆ, ಇದೀಗ ಚಿತ್ರ ಆನ್​ಲೈನ್​ನಲ್ಲಿ ಫ್ರಿಯಾಗಿ ಸಿಗುತ್ತಿದ್ದು, ಸಾಕಷ್ಟು ನೆಟ್ಟಿಗರೂ ಈ ಕೆಲಸಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಪಂಪನ ಕನವರಿಕೆಯಲ್ಲಿ ಸಂಗೀತ

    ಇನ್ನೊಂದು ಖುಷಿಯ ವಿಚಾರ ಏನೆಂದರೆ, ಸಾಧ್ಯವಾದಷ್ಟು ಡಿಸ್ನಿ ಹಾಟ್​ಸ್ಟಾರ್​ನಲ್ಲಿಯೇ ಸಿನಿಮಾ ನೋಡಿ, ಪೈರಸಿ ಸಿನಿಮಾ ಬಹಿಷ್ಕರಿಸಿ ಎಂದು ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ. ಪೈರಸಿ ಕಾಪಿ ಬೇಡ ಎಂಬ ಅಭಿಯಾನವನ್ನೂ ಶುರುಮಾಡಿದ್ದಾರೆ. ಅಂದಹಾಗೆ, ಮುಖೇಶ್​ ಛಾಬ್ರಾ ನಿರ್ದೇಶನದಲ್ಲಿ ಮೂಡಿ ಬಂದ ಈ ಸಿನಿಮಾದಲ್ಲಿ ಸಂಜನಾ ಸಿಂಘ್ವಿ ನಾಯಕಿಯಾಗಿ ಪದಾರ್ಪಣೆ ಮಾಡಿದ್ದಾರೆ.

    Dil Bechara Review: ಭಾವನೆಗಳ ಬುನಾದಿ ಮೇಲೆ ಜೀವನಸ್ಫೂರ್ತಿಯ ಮಹಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts