ರಿಯಾ, ಸಾರಾ, ಅಂಕಿತಾ ಅಷ್ಟೇ ಅಲ್ಲ ... ಸುಶಾಂತ್​ಗೆ ಇನ್ನೊಬ್ಬ ಗರ್ಲ್​ಫ್ರೆಂಡ್​ ಇದ್ದಳಂತೆ!

Sushant Singh - Kriti Sanon - Final
Published on

ಮುಂಬೈ: ಕಳೆದ ಜೂನ್​ನಲ್ಲಿ ನಿಧನರಾದ ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ಗೆ ರಿಯಾ ಚಕ್ರವರ್ತಿ ಜತೆ ಲಿವ್​ ಇನ್​ ರಿಲೇಶನ್​ಶಿಪ್​ ಇತ್ತು ಎಂಬ ವಿಷಯ ಈಗಾಗಲೇ ಗೊತ್ತಿದೆ. ಅದಕ್ಕೂ ಮುನ್ನವೇ ಅವರು ಅಂಕಿತಾ ಲೋಖಂಡೆ ಎಂಬ ನಟಿಯನ್ನು ಪ್ರೀತಿಸುತ್ತಿದ್ದರು ಎಂಬ ಸುದ್ದಿಯೂ ಜಗಜ್ಜಾಹೀರಾಗಿದೆ. ಅಂಕಿತಾ ಹೋದ ಮೇಲೆ ಸೈಫ್​ ಅಲಿ ಖಾನ್​ ಪುತ್ರಿ ಸಾರಾ ಅಲಿ ಖಾನ್​ ಜತೆಗೆ ಸುಶಾಂತ್​ ಅಫೇರ್​ ನಡೆಯುತಿತ್ತು ಎಂಬ ಸುದ್ದಿ ಕೆಲವು ದಿನಗಳ ಹಿಂದಷ್ಟೇ ಹೊರಬಿದ್ದಿದೆ.

ರಿಯಾ, ಸಾರಾ, ಅಂಕಿತಾ ಅಲ್ಲದೆ, ಮತ್ತೊಬ್ಬ ನಟಿಯ ಜತೆಗೂ ಸುಶಾಂತ್​ಗೆ ಅಫೇರ್​ ಇತ್ತು ಎಂಬ ಸುದ್ದಿಯೊಂದು ಇದೀಗ ಹೊರಬಿದ್ದಿದೆ. ಆ ನಟಿ ಯಾರು ಗೊತ್ತಾ?, ಕೃತಿ ಸನೋನ್​. ಈ ವಿಷಯವನ್ನು ಮತ್ತೊಬ್ಬ ನಟಿ ಲಿಜಾ ಮಲ್ಲಿಕ್ ಬಹಿರಂಗಪಡಿಸಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಡಿರುವ ಅವರು, 'ಸುಮಾರು ಎರಡೂವರೆ ವರ್ಷಗಳ ಹಿಂದೆ ಬಾಂದ್ರಾ ಕ್ಲಬ್​ನಲ್ಲಿ ನಡೆದ ಕೃತಿ ಸನೋನ್​ ಹುಟ್ಟುಹಬ್ಬದ ಸಂದರ್ಭದಲ್ಲಿ ಸುಶಾಂತ್​ ಅವರನ್ನು ಭೇಟಿ ಮಾಡಿದ್ದೆ. ಅದು ಕೃತಿ ಕೊಟ್ಟ ಪಾರ್ಟಿಯಾದ್ದರಿಂದ, ಅವರು ಬಹಳ ಬಿಜಿಯಾಗಿದ್ದರು. ಅವರ ಪರವಾಗಿ ಸುಶಾಂತ್ ಎಲ್ಲರನ್ನು ಬರಮಾಡಿಕೊಂಡು ನೋಡಿಕೊಳ್ಳುತ್ತಿದ್ದರು. ಸುಶಾಂತ್​ ಯಾಕೆ ಈ ಕೆಲಸ ಮಾಡುತ್ತಿದ್ದಾರೆ ಎಂದು ಗೊತ್ತಾಗಲಿಲ್ಲ. ಆ ನಂತರ ಅವರಿಬ್ಬರೂ ಡೇಟಿಂಗ್ ಮಾಡುತ್ತಿದ್ದರು ಎಂದು ಗೊತ್ತಾಯಿರು' ಎಂದು ಹೇಳಿದ್ದಾರೆ ಲಿಜಾ.

ಈ ಕುರಿತು ಇನ್ನಷ್ಟು ಮಾತನಾಡಿರುವ ಅವರು, 'ಅವರಿಬ್ಬರೂ ಬಹಿರಂಗವಾಗಿ ಡೇಟಿಂಗ್​ ಮಾಡುತ್ತಿರುವುದಾಗಿ ಹೇಳದಿದ್ದರೂ, ಅವರಿಬ್ಬರು ಎಷ್ಟು ಹತ್ತಿರವಾಗಿದ್ದರು ಎಂದು ಅಲ್ಲಿ ನೋಡಿದವರೆಲ್ಲರಿಗೂ ಗೊತ್ತು. ಅವರಿಬ್ಬರೂ ಡೇಟಿಂಗ್​ ಮಾಡುತ್ತಿಲ್ಲ ಎಂದು ಕೆಲವೊಮ್ಮೆ ಹೇಳಿಕೊಂಡರೂ, ನಮಗೆಲ್ಲಾ ಅವರಿಬ್ಬರೂ ಡೇಟಿಂಗ್​ ಮಾಡುತ್ತಿದ್ದರು ಎಂಬ ವಿಷಯ ಗೊತ್ತಿತ್ತು' ಎಂದು ಲಿಜಾ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net