ಸೌತ್​ ಬ್ಯೂಟಿಗೆ ಬೇಡವಾಯ್ತಾ ಟಾಲಿವುಡ್​? ಪೂಜಾ ಹೆಗ್ಡೆ ನಡೆಗೆ ತೆಲುಗು ಫ್ಯಾನ್ಸ್​ ಬೇಸರ | Pooja Hegde

ವಿಜಯವಾಣಿ - 2025-02-28T180406.518
Published on

Pooja Hegde: ‘ಅಲಾ ವೈಕುಂಠಪುರಮುಲೋ’, ‘ಡಿಜೆ ದುವ್ವಾಡ ಜಗನ್ನಾಥಂ’, ‘ಹೌಸ್​ಫುಲ್ 4’ ಸೇರಿದಂತೆ ಹಲವು ಸಿನಿಮಾಗಳ ಮುಖೇನ ಬ್ಯಾಕ್​ ಟು ಬ್ಯಾಕ್​ ಹಿಟ್​ ಕೊಟ್ಟ ಸೌತ್​ ಬ್ಯೂಟಿ, ನಟಿ ಪೂಜಾ ಹೆಗ್ಡೆ ಅದ್ಯಾಕೋ ತೆಲುಗು ಚಿತ್ರರಂಗದಿಂದ ಕೊಂಚ ದೂರ ಉಳಿದಂತೆ ಕಂಡುಬಂದಿದೆ. ಪ್ರಸ್ತುತ ಬಾಲಿವುಡ್​, ತಮಿಳು ಚಿತ್ರಗಳಲ್ಲಿ ಅಭಿನಯಿಸುತ್ತಿರುವ ಪೂಜಾ, ಕಳೆದ ವರ್ಷ ಹೆಚ್ಚೆಚ್ಚು ಅವಕಾಶಗಳನ್ನು ಪಡೆಯದೆ, ಟಾಪ್ ನಟಿಯರ ಸಾಲಿನಿಂದ ಬಹಳ ದೂರ ಉಳಿದಿದ್ದರು.

ಖುಷಿ-ಬೇಸರ

2024ರಲ್ಲಿ ತೆರೆಕಂಡ ಮಹೇಶ್​ ಬಾಬು ಅಭಿನಯದ 'ಗುಂಟೂರು ಕಾರಂ' ಚಿತ್ರದಿಂದ ಪೂಜಾ ಹೆಗ್ಡೆ ಹೊರನಡೆದಿದ್ದೇ ತಡ, ಅಲ್ಲಿಂದ ನಟಿಯ ಅವಕಾಶಗಳು ಕುಂಠಿತವಾಯಿತು. ಸಂಭಾವನೆ ವಿಚಾರಕ್ಕೆ ಚಿತ್ರತಂಡದಿಂದ ಹೊರಗುಳಿದ ಪೂಜಾ, ಅದಾದ ನಂತರ ಆ ವರ್ಷದಲ್ಲಿ ನಟಿಸಿದ ಯಾವ ಚಿತ್ರಗಳು ತೆರೆಗೆ ಬರಲಿಲ್ಲ ಎಂಬುದು ಅವರ ಅಭಿಮಾನಿಗಳಲ್ಲಿ ತೀವ್ರ ಬೇಸರ ಮೂಡಿಸಿತು. 2024ರಿಂದ 2025ಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಪೂಜಾ ಲಕ್​ ಬದಲಾಗಿದ್ದು, ನಟಿ ಅಭಿನಯದ ಹಲವು ಸಿನಿಮಾಗಳು ಇದೇ ವರ್ಷ ತೆರೆಕಾಣಲು ಸಿದ್ಧವಾಗಿದೆ. ಇದು ಅಭಿಮಾನಿಗಳಲ್ಲಿ ಖುಷಿ ತಂದಿದ್ದೇ ಆದರೂ ಅವುಗಳ ಪೈಕಿ ಬಹುತೇಕ ತಮಿಳು ಚಿತ್ರಗಳೇ ಆಗಿರುವುದು ಕೊಂಚ ಬೇಸರ ತಂದಿದೆ.

ತಮಿಳು ಸೂಪರ್​ಸ್ಟಾರ್​, ತಲೈವಾ ನಟ ರಜನಿಕಾಂತ್ ಅಭಿನಯನದ ಹಾಗೂ ಲೋಕೇಶ್​ ಕನಗರಾಜ್ ನಿರ್ದೇಶನದಲ್ಲಿ ಮೂಡಿಬರಲಿರುವ​ 'ಕೂಲಿ' ಚಿತ್ರದಲ್ಲಿ ಪೂಜಾ ಹೆಗ್ಡೆ ವಿಶೇಷ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಕುರಿತಂತೆ ಕಾಲಿವುಡ್​ನಲ್ಲಿ ಈಗಾಗಲೇ ಹಲವು ಸುದ್ದಿಗಳು ಬಂದಿವೆ. ಕೇವಲ ಕೂಲಿ ಚಿತ್ರದಲ್ಲಿ ಮಾತ್ರ ಪೂಜಾ ಬಣ್ಣ ಹಚ್ಚುತ್ತಿದ್ದಾರೆ ಎಂದುಕೊಂಡಿದ್ದ ನಟಿಯ ಟಾಲಿವುಡ್​ ಫ್ಯಾನ್ಸ್​, ಅವರ ಚಿತ್ತ ತಮಿಳು ಚಿತ್ರರಂಗದತ್ತ ವಾಲಿದೆ ಎಂಬ ಸಂಗತಿ ತಿಳಿದು ಜಾಲತಾಣಗಳಲ್ಲಿ ಬೇಸರ ಹೊರಹಾಕಿದ್ದಾರೆ. ಇದಕ್ಕೆ ಕಾರಣ ಅವರ ಮುಂಬರುವ ಸಾಲಿ ಸಾಲು ತಮಿಳು ಚಿತ್ರಗಳು.

ಟಾಲಿವುಡ್​-ಕಾಲಿವುಡ್​

ಈಗಾಗಲೇ 'ರೆಟ್ರೋ' ಚಿತ್ರದಲ್ಲಿ ತಮಿಳು ನಟ ಸೂರ್ಯಗೆ ನಾಯಕಿಯಾಗಿರುವ ಪೂಜಾ, ಚಿತ್ರದ ಚಿತ್ರೀಕರಣವನ್ನು ಸಂಪೂರ್ಣವಾಗಿ ಮುಗಿಸಿದ್ದಾರೆ. ಇದರ ನಂತರದಲ್ಲಿ ದಳಪತಿ ವಿಜಯ್ ಅವರ ಕೊನೆಯ ಸಿನಿಮಾ 'ಜನ ನಾಯಗನ್' ಚಿತ್ರಕ್ಕೂ ಅವರೇ ನಾಯಕಿಯಾಗಿದ್ದಾರೆ. ಈ ಎರಡು ಬಹುನಿರೀಕ್ಷಿತ ಸಿನಿಮಾಗಳು ಬಿಡುಗಡೆಗೆ ಸಿದ್ಧವಿದ್ದು, ರಿಲೀಸ್ ದಿನಾಂಕಗಳ ಅಧಿಕೃತ ಘೋಷಣೆಯಷ್ಟೇ ಬಾಕಿ ಉಳಿದಿದೆ. ಇದರೊಟ್ಟಿಗೆ ನಟ ರಾಘವ್​ ಲಾರೆನ್ಸ್​ ಅಭಿನಯದ 'ಕಾಂಚಾನ 4' ಚಿತ್ರದಲ್ಲಿ ಪೂಜಾ ಕಾಣಿಸಿಕೊಳ್ಳಲಿದ್ದಾರೆ. ​

ಗುಡ್​ಬೈ ಮುನ್ಸೂಚನೆ?

ಪ್ರಸ್ತುತ ಕಾಲಿವುಡ್‌ನಲ್ಲಿ ಸಖತ್​ ಬಿಜಿಯಾಗಿರುವ ಪೂಜಾ ಹೆಗ್ಡೆ ಏಕೆ ತೆಲುಗು ಚಿತ್ರರಂಗವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ? ಯಾವ ಒಂದು ತೆಲುಗು ಚಿತ್ರವನ್ನು ಕೈಗೆತ್ತಿಕೊಂಡಿಲ್ಲ? ಇದು ಟಾಲಿವುಡ್​ಗೆ ಗುಡ್​ಬೈ ಹೇಳಿರುವ ಮುನ್ಸೂಚನೆಯೇ ಎಂಬ ಹತ್ತಾರು ಪ್ರಶ್ನೆಗಳನ್ನು ಜಾಲತಾಣಗಳಲ್ಲಿ ಮುಂದಿಟ್ಟಿದ್ದಾರೆ. ಅವರ ಕಾಲಿವುಡ್​ ಪಯಣ ಕುರಿತು ಅಭಿಮಾನಿಗಳು ನಿರಾಶೆಗೊಂಡಿದ್ದಾರೆ. ತೆಲುಗು ನಿರ್ದೇಶಕರು ಅವರನ್ನು ಸಂಪರ್ಕಿಸುತ್ತಿಲ್ಲವೇ ಅಥವಾ ಅವರಿಗೇ ಕಾಲಿವುಡ್ ಸಿನಿಮಾಗಳಲ್ಲಿ ನಟಿಸುವ ಆಸಕ್ತಿ ಇದೆಯೇ? ಎಂಬುದು ಸದ್ಯ ತೆಲುಗು ಪ್ರೇಕ್ಷಕರ ಪ್ರಶ್ನೆಯಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net