

ಇಂಡಿ: ರಾಷ್ಟ್ರೀಯ ಭಾವೈಕ್ಯ, ಶಿಸ್ತು, ಸೇವಾ ಮನೋಭಾವ, ಸಹೋದರತ್ವ ಭಾವನೆ ಬೆಳೆಸುವಲ್ಲಿ ಭಾರತ ಸೇವಾದಳದ ಕಾರ್ಯ ಶ್ಲಾಘನೀಯ ಎಂದು ಶಿರಶ್ಯಾಡದ ಅಭಿನವ ಮುರುಘೇಂದ್ರ ಶಿವಾಚಾರ್ಯರು ಹೇಳಿದರು.
ತಾಲೂಕಿನ ಹಿರೇಮಸಳಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಇಂಡಿಯ ಭಾರತ ಸೇವಾದಳ ತಾಲೂಕು ಸಮಿತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಹಿರೇಮಸಳಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಸಹಯೋಗದಲ್ಲಿ ತಾಲೂಕು ಮಟ್ಟದ ಭಾರತ ಸೇವಾದಳ ಮಕ್ಕಳ ರಾಷ್ಟ್ರೀಯ ಭಾವೈಕ್ಯ ಮೇಳದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಎಸ್.ಪಿ. ಬಿರಾದಾರ, ಸೇವಾದಳ ಜಿಲ್ಲಾ ಉಪಾಧ್ಯಕ್ಷ ಶ್ರೀಮಂತ ಇಂಡಿ, ಶಿಕ್ಷಕ ಸಂಘದ ಪದಾಧಿಕಾರಿ ವೈ.ಟಿ. ಪಾಟೀಲ, ಸೇವಾದಳ ತಾಲೂಕು ಅಧ್ಯಕ್ಷ ಕೆ.ಪಿ. ಭೈರಜಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಪಂ ಅಧ್ಯಕ್ಷ ಹಾಗೂ ಸದಸ್ಯರು, ಎಸ್‌ಡಿಎಂಸಿ ಅಧ್ಯಕ್ಷ ಹಾಗೂ ಸದಸ್ಯರು, ಶಿಕ್ಷಣ ಇಲಾಖೆ ಅಧಿಕಾರಿ, ಶಿಕ್ಷಕ ಸಂಘದ ಪದಾಧಿಕಾರಿ, ಗ್ರಾಮದ ಪ್ರಮುಖರು, ಸೇವಾದಳ ಶಿಕ್ಷಕ ವೃಂದ, ಶಾಲಾ ಶಿಕ್ಷಕ ವೃಂದ ಇತರರಿದ್ದರು.
ಭಾರತ ಸೇವಾದಳ ವಲಯ ಸಂಘಟಕ ನಾಗೇಶ ಡೋಣೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಪ್ರಭಾರಿ ಮುಖ್ಯಶಿಕ್ಷಕ ಆನಂದ ಕೆಂಭಾವಿ ಸ್ವಾಗತಿಸಿದರು. ಅಂಬಣ್ಣ ಸುಣಗಾರ ನಿರೂಪಿಸಿದರು. ತಾಲೂಕು ಅಧಿನಾಯಕ ಎಸ್.ಬಿ. ಕಲ್ಲೋಳ್ಳಿ ವಂದಿಸಿದರು.
ಮೇಳದಲ್ಲಿ ತಾಲೂಕಿನ 500 ಮಕ್ಕಳು, 40 ಜನ ಸೇವಾದಳ ಶಿಕ್ಷಕರು ಭಾಗವಹಿಸಿದ್ದರು.