ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ; ಮೆಟ್ರೋದಲ್ಲಿ ಜನ ಸಂಚಾರ ಕಡಿಮೆ ಆಗಿದ್ಯಾ?

namma metro
ನಮ್ಮ ಮೆಟ್ರೋ
Published on

ಬೆಂಗಳೂರು: ಕಾಂಗ್ರೆಸ್, ತನ್ನ ಚುನಾವಣಾ ಪೂರ್ವದ ಆಶ್ವಾಸನೆಗಳನ್ನು ಒಂದೊಂದಾಗಿ ಕಾರ್ಯರೂಪಕ್ಕೆ ತರುತ್ತಿದ್ದು ನಿನ್ನೆ ಶನಿವಾರ ಎಲ್ಲಾ ಮಹಿಳೆಯರಿಗೆ ಬಸ್ ಸಂಚಾರವನ್ನು ಉಚಿತ ಮಾಡಿದ್ದಾರೆ. ಇದರಿಂದಾಗಿ ಮೆಟ್ರೋದಲ್ಲಿ ಮಹಿಳೆಯರು ಸಂಚಾರ ಮಾಡುವುದು ಕಮ್ಮಿ ಮಾಡಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.

ದಿಗ್ವಿಜಯ ನ್ಯೂಸ್ ವರದಿ ಪ್ರಕಾರ ಶಕ್ತಿ ಯೋಜನೆಯಿಂದ ಮೆಟ್ರೋ ಸೇವೆ ಮೇಲೆ ಯಾವುದೇ ಪರಿಣಾಮ ಬಿದ್ದಿಲ್ಲ. ಎಂದಿನಂತೆ ಮೆಟ್ರೋ ಸೇವೆ ಪಡೆಯಲು ನಗರದ ಜನರು ಮುಂದಾಗಿದ್ದಾರೆ. ಇನ್ನು ಮಹಿಳಾ ಪ್ರುಯಾಣಿಕರ ಸಂಖ್ಯೆಯೂ ಮೆಟ್ರೋದಲ್ಲಿ ಕುಗ್ಗಿಲ್ಲ. ಅನೇಕ ಜನರು ಇನ್ನೂ ಮೆಟ್ರೋವನ್ನೇ ನಿತ್ಯ ಪ್ರಯಾಣಕ್ಕಾಗಿ ನೆಚ್ಚಿಕೊಂಡಿದ್ದಾರೆ. ಅನೇಕರು ಮೆಟ್ರೋ ಪಾಸ್ ಮಾಡಿಸಿಕೊಂಡಿದ್ದು ಅದನ್ನೇ ಬಳಸಿಕೊಂಡು ಪ್ರಯಾಣ ಬೆಳೆಸುತ್ತಿದ್ದಾರೆ.

ಇನ್ನು ಸಮಯಕ್ಕೆ ಸರಿಯಾಗಿ ಬರುವ ಮೆಟ್ರೋ ರೈಲುಗಳ ಸೇವೆ ಬೆಸ್ಟ್ ಎಂಬ ಅಭಿಪ್ರಾಯ ಜನರಲ್ಲಿದ್ದು ತಣ್ಣನೆ ಎ.ಸಿಯಲ್ಲಿ ಕುಳಿತು ಟ್ರಾಫಿಕ್ ಕಿರಿಕಿರಿ ತಪ್ಪಿಸಿಕೊಳ್ಳಬಹುದು ಎಂಬ ಅಭಿಮತ ಜನರಲ್ಲಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net