ಭಾರತದ ಮೊದಲ ನೀರೊಳಗಿನ ಮೆಟ್ರೋ ಶೀಘ್ರವೇ ಪ್ರಯಾಣಕ್ಕೆ ಮುಕ್ತ

metro
Published on

ಕೊಲ್ಕತ್ತಾ: ಭಾರತದ ಮೊದಲ ನೀರೊಳಗಿನ ಮೆಟ್ರೋ 2023ರ ಅಂತ್ಯದ ವೇಳೆಗೆ ಸಾರ್ವಜನಿಕರಿಗೆ ಪ್ರಯಣಕ್ಕಾಗಿ ಒದಗಲಿದೆ ಎಂದು ನಿರೀಕ್ಷಿಸಿಲಾಗಿದ್ದು, ಹೂಗ್ಲಿ ನದಿಯ ನಡುವೆ ಪರಿಚಯಿಸಲಾದ ಭಾರತದ ಮೊದಲ ನೀರೊಳಗಿನ ರೈಲು ವ್ಯವಸ್ಥೆಯಾಗಿದೆ.

ಸುರಂಗದ ನಿರ್ಮಾಣವು ಪೂರ್ಣಗೊಂಡಿದ್ದು, ಹೂಗ್ಲಿ ನದಿಯ ಅಡಿಯಲ್ಲಿ 5.55 ಮೀಟರ್ ಆಂತರಿಕ ವ್ಯಾಸ ಮತ್ತು 6.1 ಮೀಟರ್ ಬಾಹ್ಯ ವ್ಯಾಸವನ್ನು ಹೊಂದಿರುವ ಸುರಂಗವನ್ನು ನಿರ್ಮಿಸಿದ್ದಾರೆ. ಹೂಗ್ಲಿ ನದಿಯ ತಳದ ಕೆಳಗಿರುವ ಈ ಸುರಂಗಗಳು ನೀರಿನ ಮಟ್ಟಕ್ಕಿಂತ ಸುಮಾರು 32 ಮೀಟರ್‌ ಕೆಳಗಿದ್ದು, ಇವುಗಳನ್ನು ಇಂಜಿನಿಯರಿಂಗ್ ಅದ್ಭುತವೆಂದು ಪರಿಗಣಿಸಲಾಗಿದೆ.

ಹೌರಾ ಮೈದಾನದಿಂದ ಮಹಾಕರನ್ ಮೆಟ್ರೋ ನಿಲ್ದಾಣದವರೆಗೆ ನದಿಯ ಕೆಳಗೆ ಪ್ರಯಾಣಿಸಬಹುದಾಗಿದ್ದು, ಇದು ಡಿಸೆಂಬರ್ 2023ರವರೆಗೆ ಲಭ್ಯವಾಗಬಹುದು ಎಂದು ಪೂರ್ವ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಎನ್​ಐಗೆ ತಿಳಿಸಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net