More

  ಸಾರ್ವಜನಿಕ ರ‍್ಯಾಲಿ ವೇಳೆ ಸ್ಪೋಟಿಸಿಗೊಂಡ ಆತ್ಮಾಹುತಿ ಬಾಂಬರ್: ಕೃತ್ಯ ಕ್ಯಾಮರಾದಲ್ಲಿ ಸೆರೆ

  ರೋಬ್‌​​: ಸಾರ್ವಜನಿಕ ರ‍್ಯಾಲಿಯೊಂದರ ವೇಳೆ ಆತ್ಮಾಹುತಿ ಬಾಂಬರ್ ವ್ಯಕ್ತಿಯೊಬ್ಬ ತನ್ನನ್ನ ತಾನೇ ಸ್ಪೋಟಿಸಿಗೊಂಡ ಘಟನೆ ಬಲೂಚಿಸ್ತಾನದ ರೋಬ್​ನಲ್ಲಿ ನಡೆದಿದೆ. ಈ ಕೃತ್ಯವು ಡ್ರೋಣ್​ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಘಟನೆಯಲ್ಲಿ ಕನಿಷ್ಠ 7 ಮಂದಿ ಗಾಯಗೊಂಡಿದ್ದು, ನಾಲ್ಕು ಜನರ ಸ್ಥಿತಿ ಚಿಂತಾಜನಕವಾಗಿದೆ.

  ಬಲೂಚಿಸ್ತಾನದ ರೋಬ್‌ನಲ್ಲಿ ತನ್ನ ಮೇಲೆ ನಡೆದ ಆತ್ಮಹತ್ಯಾ ದಾಳಿ ಸ್ವಲ್ಪದರಲ್ಲೇ ತಪ್ಪಿದ ನಂತರ ಜಮಾತ್‌-ಎ-ಇಸ್ಲಾಮಿ ಮುಖ್ಯಸ್ಥ ಸಿರಾಜ್​ ಉಲ್​ ಹಕ್​ ಮಾತನಾಡಿ ತಾವು ಸಾವಿಗೆ ಹೆದರುವುದಿಲ್ಲ ಎಂದು ಹೇಳಿದ್ದಾರೆ. ಪಾಕ್​ ಪ್ರಧಾನಿ ಶೆಹಬಾಜ್ ಷರೀಫ್ ಅವರು ಆತ್ಮಹತ್ಯಾ ಸ್ಫೋಟವನ್ನು ಖಂಡಿಸಿದ್ದು, ದಾಳಿಯ ಬಗ್ಗೆ ಕೂಲಂಕುಷ ತನಿಖೆ ನಡೆಸುವಂತೆ ಬಲೂಚಿಸ್ತಾನ್ ಸರ್ಕಾರವನ್ನು ಕೋರಿದ್ದಾರೆ. ಬಲೂಚಿಸ್ತಾನ ಮುಖ್ಯಮಂತ್ರಿ ಅಬ್ದುಲ್ ಖುದ್ದೂಸ್ ಬಿಜೆಂಜೊ ಕೂಡ ಈ ಘಟನೆಯನ್ನು ಖಂಡಿಸಿದ್ದು, ದಾಳಿಯ ಸಂತ್ರಸ್ತರಿಗೆ ಸಂತಾಪ ಸೂಚಿಸಿದ್ದಾರೆ.(ಏಜೆನ್ಸೀಸ್)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts