ಜೀ಼ ಕನ್ನಡದಲ್ಲಿ ‘ದಿಯಾ’ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್

zee
Published on

ಬಿಡುಗಡೆ ಬಳಿಕ ಎಲ್ಲೆಡೆ ಮೆಚ್ಚುಗೆಯ ಮಾತುಗಳನ್ನೇ ಕೇಳಿಸಿಕೊಂಡು, ಅಮೆಜಾನ್​ ಪ್ರೈಮ್​ನಲ್ಲೂ ಹವಾ ಸೃಷ್ಟಿಸಿದ್ದ ‘ದಿಯಾ‘ ಸಿನಿಮಾ, ಇದೀಗ ಕಿರುತೆರೆಯಲ್ಲಿ ಪ್ರಸಾರಕ್ಕೆ ಅಣಿಯಾಗಲಿದೆ. ಜೂನ್​ 28ರ ಭಾನುವಾರ ಸಂಜೆ 7 ಗಂಟೆಗೆ ಜೀ಼ ಕನ್ನಡದಲ್ಲಿ ಸಿನಿಮಾ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಆಗಲಿದೆ.

ಕೆ.ಎಸ್.ಅಶೋಕ ನಿರ್ದೇಶನದ ಪೃಥ್ವಿ ಅಂಬರ್, ದೀಕ್ಷಿತ್ ಶೆಟ್ಟಿ ಮತ್ತು ಖುಷಿ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರ ಫೆಬ್ರವರಿ ತಿಂಗಳಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಪಡೆದಿತ್ತು.

ದಿಯಾ ಒಬ್ಬ ಯುವತಿಯ ಕಥೆಯಾಗಿದ್ದು ಆಕೆ ಸ್ವಭಾತಃ ಅಂತರ್ಮುಖಿಯಾಗಿದ್ದರೂ ಒಬ್ಬ ಯುವಕನ ಪ್ರೀತಿಯಲ್ಲಿ ಸಿಲುಕಿಕೊಳ್ಳುತ್ತಾಳೆ. ಆತ ದಿಢೀರ್ ಎಂದು ಕಣ್ಮರೆಯಾಗುತ್ತಾನೆ. ಸಂಕಷ್ಟದಲ್ಲಿರುವ ಯುವತಿಯ ಬದುಕಲ್ಲಿ ಮತ್ತೊಬ್ನ ಎಂಟ್ರಿ ಆಗುತ್ತದೆ. ಆತ ಆಕೆಗೆ ಬದುಕುವ ಉತ್ಸಾಹ ಹೆಚ್ಚಿಸುತ್ತಾನೆ.

ಪವಿತ್ರಾ ಲೋಕೇಶ್, ಅರವಿಂದ್​ ರಾವ್, ರಾಜೇಶ್ ರಾವ್, ಜ್ಯೋತಿ ರೈ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಡಿ.ಕೃಷ್ಣ ಚೈತನ್ಯ ಚಿತ್ರದ ನಿರ್ಮಾಪಕರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net