ನವದೆಹಲಿ: ಇತ್ತೀಚೆಗಷ್ಟೇ ಮುಕ್ತಾಯವಾದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರಲ್ಲಿ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಮತ್ತು ಗುಜರಾತ್ ಟೈಟಾನ್ಸ್ (ಜಿಟಿ) ನಡುವೆ ಲೀಗ್ ಪಂದ್ಯ ನಡೆದಿದ್ದು ಎಲ್ಲರಿಗೂ ತಿಳಿದಿದೆ. ಈ ಪಂದ್ಯದ ಮಧ್ಯದಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ ಎಂ.ಎಸ್ ಧೋನಿ ಮೈದಾನದಲ್ಲಿದ್ದಾಗಲೇ, ಅಭಿಮಾನಿಯೊಬ್ಬ ಓಡಿ ಬಂದು ಧೋನಿಯ ಪಾದ ಮುಟ್ಟಿದ್ದನ್ನು ಎಲ್ಲರು ನೋಡಿರುತ್ತೀರಿ. ಬಳಿಕ ಧೋನಿ, ಅಭಿಮಾನಿಯನ್ನ ಸಂತೈಸಿಸಿ, ಕೆಲ ಸೆಕೆಂಡ್ ಮಾತನಾಡಿದರು. ಈ ವೇಳೆ ಕ್ರೀಡಾಂಗಣದ ಸಿಬ್ಬಂದಿ ಆತನನ್ನು ಎಳೆದೊಯ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ, ಆ ಅಭಿಮಾನಿಯೊಂದಿಗೆ ಧೋನಿ ಏನು ಮಾತನಾಡಿದರು ಎಂಬುದು ಯಾರಿಗೂ ತಿಳಿದಿಲ್ಲ. ಇದೀಗ ಅಭಿಮಾನಿಯೇ ಬಹಿರಂಗಪಡಿಸಿದ್ದಾರೆ.
ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಎಂಎಸ್ ಧೋನಿ ಅಭಿಮಾನಿ, ನನ್ನ ಹೆಸರು ಜೈ ಜಾನಿ. ಎಂಎಸ್ ಧೋನಿಯ ದೊಡ್ಡ ಅಭಿಮಾನಿ. ಮಹಿ ಓರ್ವ ದಂತಕಥೆ. ಚೆನ್ನೈ ಮತ್ತು ಗುಜರಾತ್ ನಡುವಿನ ಪಂದ್ಯ ನಡೆಯುತ್ತಿರುವಾಗ ಧೋನಿ ಮೈದಾನಕ್ಕೆ ಬಂದರು. ಹೇಗಾದರೂ, ನಾನು ಅವರನ್ನು ಭೇಟಿಯಾಗಬೇಕೆಂದು ಬಯಸಿದ್ದೆ. ಅದಕ್ಕಾಗಿಯೇ ಫೆನ್ಸಿಂಗ್ ಅನ್ನು ಜಿಗಿದು ಮೈದಾನದ ಒಳಗೆ ಇಳಿದು ಧೋನಿ ಬಳಿಗೆ ಓಡಿದೆ ಎಂದಿದ್ದಾರೆ.
ನಾನು ಮಹಿ ಭಾಯ್ ಎಂದು ಕೂಗುತ್ತಾ ಕೈ ಎತ್ತಿ ಸಾರ್ ಎಂದು ಜೋರಾಗಿ ಹೇಳಿದೆ. ನಾನು ಧೋನಿ ಅವರ ಪಾದಗಳನ್ನು ಸ್ಪರ್ಶಿಸಿ, ಅವರನ್ನು ಹತ್ತಿರದಿಂದ ಕಂಡಾಗ ನನ್ನ ಕಣ್ಣಲ್ಲಿ ನೀರು ಸುರಿಯಿತು ಎಂದು ಜೈ ಜಾನಿ ಹೇಳಿದರು.
ನಾನು ಮಾತನಾಡುವಾಗ ಎಂಎಸ್ ಧೋನಿ ಅವರು ನನ್ನ ಸಮಸ್ಯೆಯನ್ನು ಗ್ರಹಿಸಿದರು. ನೀವು ಯಾಕೆ ಇಷ್ಟು ವೇಗವಾಗಿ ಉಸಿರಾಡುತ್ತಿದ್ದೀರಿ ಎಂದು ಕೇಳಿದರು. ನನಗೆ ಉಸಿರಾಟದ ತೊಂದರೆ ಇದೆ ಎಂದು ಹೇಳಿದೆ. ಹೆದರಬೇಡ, ನಿಮ್ಮ ಶಸ್ತ್ರಚಿಕಿತ್ಸೆಗೆ ನಾನು ಜವಾಬ್ದಾರನಾಗಿರುತ್ತೇನೆ. ನಿನಗೆ ಏನೂ ಆಗಲು ಬಿಡುವುದಿಲ್ಲ ಎಂದು ಧೈರ್ಯ ಕೊಟ್ಟರು ಮಹಿ ಭಾಯ್ ಎಂದು ಜೈ ಜಾನಿ ಭಾವುಕರಾದರು.
The fan who invaded the pitch to meet MS Dhoni had breathing issues.
MS when the fan tells him this – "I will take care of your surgery. Nothing will happen to you, don't worry. I won't let anything happen to you". ❤️pic.twitter.com/9uMwMktBxZ
— Mufaddal Vohra (@mufaddal_vohra) May 29, 2024
ಅವನನ್ನು ತುಂಬಾ ಹುಷಾರಾಗಿ ಹೊರಗಡೆ ಕರೆದುಕೊಂಡು ಹೋಗಿದೆ. ಇಲ್ಲಿ ತೊಂದರೆ ಅಂತಾ ಏನೂ ಆಗಿಲ್ಲ ಎಂದು ಕ್ರೀಡಾಂಗಣದ ಸಿಬ್ಬಂದಿಗೆ ಧೋನಿ ತಿಳಿಸಿದರು. ಮೈದಾನದಲ್ಲಿ ಸುಮಾರು 21 ಸೆಕೆಂಡುಗಳ ಕಾಲ ಅಭಿಮಾನಿ, ಧೋನಿ ಜೊತೆ ಮಾತುಕತೆ ನಡೆಸಿದರು. ಈ ಘಟನೆಯನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಜೈ ಜಾನಿ ಹೇಳಿದ್ದಾರೆ. ಜೈ ಜಾನಿ ಮಹಿ ಕುರಿತು ಮಾತನಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಧೋನಿಯ ಒಳ್ಳೆಯ ಹೃದಯವನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. (ಏಜೆನ್ಸೀಸ್)
ಹಾರ್ದಿಕ್-ನತಾಶಾ ಡಿವೋರ್ಸ್ ವದಂತಿಗೆ ಸ್ಪೋಟಕ ಟ್ವಿಸ್ಟ್: ಈ ಜೋಡಿ ಬೇರೆಯಾಗೋದು ಬಹುತೇಕ ಖಚಿತ
ಪತ್ನಿಯ ಜೀವಕ್ಕೆ ಅಪಾಯ ತಂದಿಟ್ಟ ಅಂಬಟಿ ರಾಯುಡು ವರ್ತನೆ! ಇನ್ನಾದ್ರೂ ಸುಮ್ಮನಿರಲು ಸಲಹೆ