ಮೂಡುಬಿದಿರೆ: ಸಂಪಾಜೆಯ ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಆಶ್ರಯದಲ್ಲಿ ನಡೆದ ಸಂಪಾಜೆ ಯಕ್ಷೋತ್ಸವ-2024 ಹವ್ಯಾಸಿ ಯಕ್ಷಗಾನ ಕಲಾವಿದರ ಸ್ಪರ್ಧೆಯಲ್ಲಿ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ತಂಡ ಪ್ರಥಮ ಬಹುಮಾನ ಪಡೆಯಿತು.
ಪ್ರಥಮ ಬಹುಮಾನ ರೂ. 50,000, ಟ್ರೋಫಿಯನ್ನು ಒಳಗೊಂಡಿದೆ. ಸಮಗ್ರ ಪ್ರಥಮ(ಒಟ್ಟು 130 ವೇಷಗಳಲ್ಲಿ ಅತ್ಯುತ್ತಮ ನಿರ್ವಹಣೆ) ಪ್ರಜ್ವಲ್ ಶೆಟ್ಟಿ, ವೈಯಕ್ತಿಕ ವಿಭಾಗದಲ್ಲಿ ಅರ್ಜುನ ಪಾತ್ರಧಾರಿ ಶ್ರೀವತ್ಸ ಹೆಗಡೆ, ಚಿತ್ರಾಂಗದೆ ಪಾತ್ರಧಾರಿ ಈಶ್ವರೀ ಆರ್.ಶೆಟ್ಟಿ, ಬಬ್ರುವಾಹನ ಪಾತ್ರಧಾರಿ ಪ್ರಜ್ವಲ್ ಶೆಟ್ಟಿ ಪ್ರಥಮ ಸ್ಥಾನ ಗಳಿಸಿದರೆ, ಅನುಸಾಲ್ವ ಪಾತ್ರಧಾರಿ ಸಾತ್ವಿಕ್ ನೆಲ್ಲಿತೀರ್ಥ, ಮಂತ್ರಿ ಸುಬುದ್ದಿಯ ಪಾತ್ರಧಾರಿ ಪ್ರಹ್ಲಾದಮೂರ್ತಿ ಕಡಂದಲೆ ದ್ವಿತೀಯ ಬಹುಮಾನ ಪಡೆದರು. ಆದಿತ್ಯ ಅಂಬಲಪಾಡಿ, ಮಯೂರ ತಂಡಕ್ಕೆ ನಿರ್ದೇಶನ ನೀಡಿದ್ದರು.
ಒಟ್ಟು ಹದಿಮೂರು ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ವಿಜೇತ ತಂಡವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅಭಿನಂದಿಸಿದ್ದಾರೆ.