ಧರ್ಮೇಂದ್ರ-ಹೇಮಾ ಮಾಲಿನಿ ಭೇಟಿಯಾಗಿ ಒಂದು ವರ್ಷವಾಗಿದೆಯಂತೆ

Dharmendra - Hema Malini - Final
Published on

ಮುಬೈ: ಬಾಲಿವುಡ್‌ನ ಸ್ಟಾರ್ ಕಪಲ್‌ಗಳಲ್ಲಿ ಮೊದಲ ಸಾಲಿಗೆ ನಿಲ್ಲುವುವರು ಧರ್ಮೇಂದ್ರ ಮತ್ತು ಹೇಮಾ ಮಾಲಿನಿ. ೭೦ರ ದಶಕದಲ್ಲಿ ಪರಸ್ಪರ ಪ್ರೀತಿಸಿ, ಹಲವು ಅಡೆತಡೆಗಳನ್ನು ಎದುರಿಸಿ ಮದುವೆಯಾದ ಈ ಜೋಡಿ, ತಮ್ಮ ಅನ್ಯೋನ್ಯ ದಾಂಪತ್ಯಕ್ಕೆ ಹೆಸರಾಗಿದ್ದಾರೆ. ಆದರೆ, ಕಳೆದೊಂದು ವರ್ಷದಿಂದ ಧರ್ಮೇಂದ್ರ ಮತ್ತು ಹೇಮಾಆ ಮಾಲಿನಿ ಜತೆಯಾಗಿಲ್ಲ ಮತ್ತು ಪರಸ್ಪರ ಭೇಟಿಯಾಗಿಲ್ಲ ಎಂಬ ಮಾಹಿತಿಯೊಂದು ಇದೀಗ ಹೊರಬಿದ್ದಿದೆ.

ಹಾಗಾದರೆ, ಇಷ್ಟು ವರ್ಷ ಅನ್ಯೋನ್ಯವಾಗಿ ಬದುಕಿದ ಈ ದಂಪತಿಯ ಮಧ್ಯೆ ಬಿರುಕು ಮೂಡಿದೆಯಾ ಎಂಬ ಪ್ರಶ್ನೆ ಎದುರಾಗಬಹುದು. ಹಾಗೇನಿಲ್ಲ, ಅವರಿಬ್ಬರೂ ದೂರವಾಗುವುದಕ್ಕೆ ಕಾರಣ ಕೋವಿಡ್-೧೯ ಎಂಬುದು ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಈ ವಿಷಯವನ್ನು ಸ್ವತಃ ಹೇಮಾ ಮಾಲಿನಿ ಅವರೇ ಬಹಿರಂಗಪಡಿಸಿದ್ದಾರೆ.

ವಿಷಯವೇನೆAದರೆ, ಕಳೆದ ವರ್ಷ ಮಹಾರಾಷ್ಟçದಲ್ಲಿ ಕರೊನಾ ಹೆಚ್ಚಾದಾಗ, ಮುಂಬೈನಿAದ ದೂರವಿರುವ ತಮ್ಮ ತೋಟದ ಮನೆಗೆ ಸೇರಿಕೊಂಡರAತೆ ಧರ್ಮೇಂದ್ರ. ಅಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಅವರು, ಕಳೆದೊಂದು ವರ್ಷದಿಂದ ಅಲ್ಲೇ ಉಳಿದುಬಿಟ್ಟಿದ್ದಾರೆ. ಇನ್ನು, ಹೇಮಾ ಮಾಲಿನಿ ಮುಂಬೈನಲ್ಲೇ ಉಳಿದುಕೊಂಡಿದ್ದಾರೆ. ಆಗಾಗ ಫೋನ್ ಮಾಡಿ ಯೋಗಕ್ಷೇಮ ವಿಚಾರಿಸಿಕೊಳ್ಳುವುದನ್ನು ಬಿಟ್ಟರೆ, ಮಿಕ್ಕಂತೆ ತಮ್ಮ ಪತಿಯನ್ನು ಕಳೆದೊಂದು ವರ್ಷದಿಂದ ನೋಡಿಲ್ಲ ಎಂದು ಸ್ವತಃ ಹೇಮಾ ಮಾಲಿನಿ ಹೇಳಿಕೊಂಡಿದ್ದಾರೆ.

ಈ ಕುರಿತು ಸಂದರ್ಶನವೊAದರಲ್ಲಿ ಮಾತನಾಡಿರುವ ಹೇಮಾ ಮಾಲಿನಿ, `ಅವರ ಸುರಕ್ಷತೆಗೆ ಅವರು ದೂರದ ತೋಟದ ಮನೆಯಲ್ಲಿರುವುದೇ ಒಳ್ಳೆಯದು. ನಾವು ಇಬ್ಬರೂ ಜತೆಯಾಗಿರುವುದಕ್ಕಿಂತ ಹೆಚ್ಚಾಗಿ, ನಮಗೆ ಅವರ ಆರೋಗ್ಯ ಮತ್ತು ಸುರಕ್ಷತೆ ಬಹಳ ಮುಖ್ಯ. ಬಹಳ ಕೆಟ್ಟ ಕಾಲಘಟ್ಟದಲ್ಲಿ ನಾವಿದ್ದು, ಎಲ್ಲೆಡೆ ಭಯದ ವಾತಾವರಣವಿದೆ. ಹಾಗಾಗಿ, ಅವರು ಅಲ್ಲೇ ಸುರಕ್ಷಿತವಾಗಿರುವುದು ಒಳ್ಳೆಯದು. ಅವರ ಸುರಕ್ಷತೆಗಾಗಿ ಈ ತ್ಯಾಗ ಮಾಡಲೇಬೇಕಿದೆ' ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net