ತಮಿಳು ಸಿನಿಮಾ ನಿರ್ದೇಶಕ ಕೆ.ವಿ. ಆನಂದ್ ನಿಧನ

kv anand
Published on

ಚೆನ್ನೈ: ತಮಿಳು ಸಿನಿಮಾರಂಗದ ಖ್ಯಾತ ನಿರ್ದೇಶಕ, ಸಿನಿಮಾಟೋಗ್ರಾಫರ್​ ಕೆ.ವಿ. ಆನಂದ್(54) ಹೃದಯಾಘಾತದಿಂದ ಇಂದು(ಶುಕ್ರವಾರ) ನಸುಕಿನಲ್ಲಿ ನಿಧನರಾಗಿದ್ದಾರೆ.

ನಿನ್ನೆ ರಾತ್ರಿ ಆನಂದ್​ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಅವರೇ ಕಾರು ಚಲಾಯಿಸಿಕೊಂಡು ಚೆನ್ನೈನ ಖಾಸಗಿ ಆಸ್ಪತ್ರೆಗೆ ಹೋಗಿದ್ದರು ಎನ್ನಲಾಗಿದೆ. ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಛಾಯಾಗ್ರಾಹಕರಾಗಿ ಚಿತ್ರರಂಗಕ್ಕೆ ಬಂದಿದ್ದ ಆನಂದ್​ ನಿರ್ದೇಶಕರಾಗಿ ಹಲವು ಸಿನಿಮಾಗಳನ್ನ ಮಾಡಿ ಗೆದ್ದಿದ್ದರು. ಅಯಾನ್, ಕೋ, ಮಾಟ್ರಾನ್, ಕಾಪ್ಪನ್... ಹೀಗೆ ಹಿಟ್ ಸಿನಿಮಾಗಳಿಗೆ ನಿರ್ದೇಶನ ಮಾಡಿದ ಕೀರ್ತಿ ಇವರದ್ದು.

ತಮಿಳಿನಲ್ಲಿ ಸ್ಟಾರ್​ ನಟರೊಂದಿಗೆ ಕೆಲಸ ಮಾಡಿರುವ ಆನಂದ್​, ಕೆಲ ಸಮಯ ಫೋಟೋ ಜರ್ನಲಿಸ್ಟ್​ ಆಗಿದ್ದರು. ಬಾಲಿವುಡ್​ ಹಾಗೂ ದಕ್ಷಿಣ ಭಾರತೀಯ ಸಿನಿರಂಗದಲ್ಲಿ 15ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಖ್ಯಾತ ನಿರ್ದೇಶಕನ ನಿಧನ ಸುದ್ದಿ ಕೇಳಿದ ಅಭಿಮಾನಿಗಳು ಹಾಗೂ ಸಿನಿರಗಂದ ಗಣ್ಯರು ಕಂಬನಿ ಮಿಡಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net