

ಆಂಧ್ರಪ್ರದೇಶ: ತಮಿಳು ನಟ ಧನುಷ್ ಮತ್ತು ನಟಿ ಶ್ರುತಿ ಹಾಸನ್ ಅಭಿನಯದ 2012ರಲ್ಲಿ ಬಿಡುಗಡೆಗೊಂಡಿದ್ದ '3' ಚಿತ್ರ ಇದೀಗ ಮೂರನೇ ಬಾರಿಗೆ ರೀ-ರೀಲಿಸ್ ಆಗಿದ್ದು, ಸೆ.14ರಂದು ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ನಟನ ಮಾಜಿ ಪತ್ನಿ ಐಶ್ವರ್ಯ ರಜನಿಕಾಂತ್ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾ ಅಂದು ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸುವಲ್ಲಿ ಮಕಾಡೆ ಮಲಗಿತ್ತು. ಆದ್ರೆ, ಇದೀಗ ಸತತ ಮೂರನೇ ಬಾರಿಗೆ 3 ಚಿತ್ರವನ್ನು ಮರುಬಿಡುಗಡೆ ಮಾಡಿರುವ ಚಿತ್ರತಂಡ, ಸದ್ಯ ಗಲ್ಲಾಪೆಟ್ಟಿಗೆಯಲ್ಲಿ ಶುಭಾರಂಭ ಕಂಡಿದೆ.
ಇದನ್ನೂ ಓದಿ: ರಾಷ್ಟ್ರ ಮಟ್ಟದ ಜಂಪ್ ರೋಪ್ನಲ್ಲಿ ಸಾಧನೆ
ಆಶ್ಚರ್ಯ ವಿಷಯ ಎಂದರೆ ಮೂರನೇ ಬಾರಿಗೆ ಚಿತ್ರಮಂದಿರಗಳಲ್ಲಿ ರೀ-ರಿಲೀಸ್ ಆಗಿರುವ ಧನುಷ್ ಚಿತ್ರ ಇದೀಗ ಬಾಕ್ಸ್ ಆಫೀಸ್ನಲ್ಲಿ ಕೇವಲ ಒಂದು ದಿನದ ಅಂತ್ಯಕ್ಕೆ 1.5 ಕೋಟಿ ರೂ. ಗಳಿಕೆ ಕಂಡಿದೆ ಎಂದು ಸಿನಿ ಮೂಲಗಳು ಮಾಹಿತಿ ಹಂಚಿಕೊಂಡಿವೆ. ಇದೇ ರೀತಿ ಚಿತ್ರ ಮುಂದಿನ ದಿನಗಳಲ್ಲಿ ಉತ್ತಮ ಪ್ರದರ್ಶನ ಕಾಣಲಿದ್ದು, ವಾರಾಂತ್ಯದಲ್ಲಿ ಪ್ರೇಕ್ಷಕರಿಂದ ಥಿಯೇಟರ್ಗಳು ತುಂಬಲಿವೆ ಎಂಬ ನಿರೀಕ್ಷೆಗಳು ಸದ್ಯ ಹೆಚ್ಚಾಗಿವೆ. ಧನುಷ್ '3' ಚಿತ್ರಕ್ಕೂ ಮುನ್ನ ಈ ಹಿಂದೆ ಹಲವಾರು ತಮಿಳು ಸಿನಿಮಾಗಳು ಇದೇ ರೀತಿ ತೆಲುಗು ಚಿತ್ರಮಂದಿರಗಳಲ್ಲಿ ಮರು ಬಿಡುಗಡೆಯಾಗುವ ಮುಖೇನ ಅದೃಷ್ಟ ಪರೀಕ್ಷೆಗೆ ಇಳಿದು ಯಶಸ್ವಿಯಾಗಿವೆ. ಇದೀಗ ಈ ಸಾಲಿಗೆ 3 ಕೂಡ ಸೇರಿಕೊಂಡಿದೆ ಎಂದೇ ಹೇಳಬಹುದು.
ಸದ್ಯ '3' ಕೂಡ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಕಲೆಕ್ಷನ್ ಕಂಡು, ರೀ-ರಿಲೀಸ್ನಲ್ಲಿ ಯಶಸ್ವಿಯಾದರೆ, ಮುಂದಿನ ದಿನಗಳಲ್ಲಿ ಈ ಟ್ರೆಂಡ್ ಮುಂದುವರೆಯುವ ಸಾಧ್ಯತೆಗಳು ಹೆಚ್ಚಿವೆ. ಚಿತ್ರದಲ್ಲಿ ಧನುಷ್, ಶ್ರುತಿ ಹಾಸನ್, ಶಿವಕಾರ್ತಿಕೆಯನ್, ಪ್ರಭು ಸೇರಿದಂತೆ ಮುಂತಾದವರ ತಾರಾಗಣವಿದೆ. ಐಶ್ವರ್ಯ ರಜನಿಕಾಂತ್ ನಿರ್ದೇಶನದ ಚಿತ್ರಕ್ಕೆ ನಟ್ಟಿ ಕುಮಾರ್ ಬಂಡವಾಳ ಹೂಡಿದ್ದಾರೆ,(ಏಜೆನ್ಸೀಸ್).