ಹೈದರಾಬಾದ್: ಎನ್‌ಟಿಆರ್ ಅಭಿನಯದ ‘ದೇವರ’ಸಿನಿಮಾ ಸೆ.27ಕ್ಕೆ ಬಿಡುಗಡೆಯಾಗಲಿದ್ದು, ಇನ್ನು 12 ದಿನ ಮಾತ್ರ ಬಾಕಿ ಇದೆ. ಅಮೆರಿಕಾದಲ್ಲಿ ಈ ಚಿತ್ರ ವೀಕ್ಷಣೆಗೆ ಬುಕ್ಕಿಂಗ್ ಈಗಾಗಲೇ ಶುರುವಾಗಿದ್ದು, ಮುಳಬಾಗಿಲು ಮಸಾಲೆದೋಸೆಯಂತೆ ಮಾರಾಟವಾಗುತ್ತಿವೆ. ಮತ್ತೊಂದೆಡೆ, ಅಭಿಮಾನಿಗಳು ಈ ಚಿತ್ರದ ಟಿಕೆಟ್‌ಗಾಗಿ ‘ಬುಕ್ ಮೈ ಶೋ’ ತೆರೆಯುತ್ತಲೇ ಇರುತ್ತಾರೆ. ಇದರಿಂದಾಗಿ ಬುಕ್ ಮೈ ಶೋ ಕ್ರ್ಯಾಶ್ ಆಗಿದೆ ಎನ್ನಲಾಗಿದೆ.
ಇದನ್ನೂ ಓದಿ: ಮಾರುತಿಯಾಗಿ ಚಿರಂಜೀವಿ.. ‘ಜೈ ಹನುಮಾನ್’ಗೆ ಓಕೆ ಅಂದ್ರಾ ಮೆಗಾಸ್ಟಾರ್!
ಇನ್ನು ದೇವರ ದೇಶಾದ್ಯಂತ ಪ್ರೀಬುಕಿಂಗ್‌ನಲ್ಲಿ 50 ಸಾವಿರಕ್ಕೂ ಹೆಚ್ಚು ಟಿಕೆಟ್ ಮಾರಾಟವಾಗಿದ್ದು, ಅತ್ಯಂತ ವೇಗದ ಮಾರಾಟ ದಾಖಲೆ ಬರೆದಿದೆ. ಉತ್ತರ ಅಮೇರಿಕಾದಲ್ಲಿ 1.5 ಮಿಲಿಯನ್ ಅಮೆರಿಕನ್ ಡಾಲರ್ ಕಲೆಕ್ಷನ್ ಸಂಗ್ರಹಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇನ್ನು ದೇಶಾದ್ಯಂತ ಅಬಿಮಾನಿಗಳು ‘ದೇವರ’ ಟಿಕೆಟ್ ಗಾಗಿ ಬುಕ್ ಮೈ ಶೋ ತೆರೆಯುತ್ತಿದ್ದಾರೆ. ಇದರೊಂದಿಗೆ ‘ಬುಕ್ ಮೈ ಶೋ’ ಕ್ರ್ಯಾಶ್ ಆಗಿದೆ. ಹೀಗಾಗಿಯೇ ಈ ಸಿನಿಮಾ ನಾರ್ಮಲ್ ಟಾಕ್ ಪಡೆದರೂ ಬಾಕ್ಸ್ ಆಫೀಸ್ ನಲ್ಲಿ ಮಾಸ್ ಸಂಚಲನ ಮೂಡಿಸುವ ಲಕ್ಷಣ ಕಾಣುತ್ತಿದೆ.
ಈ ಚಿತ್ರವನ್ನು ಎನ್‌ಟಿಆರ್ ಆರ್ಟ್ಸ್ ಮತ್ತು ಯುವ ಸುಧಾ ಆರ್ಟ್ಸ್ ಬ್ಯಾನರ್‌ನಡಿಯಲ್ಲಿ ನಂದಮೂರಿ ಕಲ್ಯಾಣ್ ರಾಮ್ ಅವರ ಪ್ರಸ್ತುತಿಯಲ್ಲಿ ಮಿಕ್ಕಿಲಿನೇನಿ ಸುಧಾಕರ್ ಮತ್ತು ಹರಿಕೃಷ್ಣ.ಕೆ ಜಂಟಿಯಾಗಿ ನಿರ್ಮಿಸಿದ್ದಾರೆ.
ಮುಂಬೈ-ದೋಹಾ ವಿಮಾನ 5 ಗಂಟೆ ವಿಳಂಬ: ಹೋಲ್ಡಿಂಗ್ ಏರಿಯಾದಲ್ಲಿ ನೀರು, ಆಹಾರವಿಲ್ಲದೆ ಪರದಾಡಿದ ಪ್ರಯಾಣಿಕರು!