ಮಾರುತಿಯಾಗಿ ಚಿರಂಜೀವಿ.. 'ಜೈ ಹನುಮಾನ್'ಗೆ ಓಕೆ ಅಂದ್ರಾ ಮೆಗಾಸ್ಟಾರ್​!

hanuma
Published on

ಹೈದರಾಬಾದ್​: ರಾಮಭಕ್ತ ಹನುಮಂತನಾದರೆ, ಮೆಗಾಸ್ಟಾರ್​ ಚಿರಂಜೀವಿ ಅವರ ಇಡೀ ಕುಟುಂಬ ಹನುಮ ಭಕ್ತರು. ಚಿರಂಜೀವಿ, ಅವರ ತಾಯಿ ಅಂಜನಾದೇವಿ, ಸಹೋದರ ಪವನ್, ಪುತ್ರ ರಾಮ್ ಚರಣ್​​..ಹೀಗೆ ಅವರ ಹೆಸರುಗಳಲ್ಲೂ ರಾಮ-ಆಂಜನೇಯ ದೇವರ ಮೇಲಿನ ಭಕ್ತಿ ಕಾಣಬಹುದು. ಈಗ ಚಿರಂಜೀವಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ನೆಚ್ಚಿನ ದೇವರ ಹನುಮಂತನ ಪಾತ್ರ ಮಾಡಲಿದ್ದಾರೆ. ಶೀಘ್ರದಲ್ಲೇ ಚಿತ್ರದಲ್ಲಿ ಆ ಪಾತ್ರವನ್ನು ಅವರು ನಿರ್ವಹಿಸಲಿದ್ದಾರೆ.

ಹನುಮಾನ್ ಚಿತ್ರದ ನಿರ್ದೇಶಕ ಪ್ರಶಾಂತ್ ವರ್ಮಾ ತಮ್ಮ ಮುಂಬರುವ ಚಿತ್ರ 'ಜೈ ಹನುಮಾನ್'ನಲ್ಲಿ ಹನುಮಂತನ ಪಾತ್ರಹಾಕಿಸಲು ಮೆಗಾಸ್ಟಾರ್ ಚಿರಂಜೀವಿ ಕಡೆ ಎದುರು ನೋಡುತ್ತಿದ್ದಾರೆ. ನಿಜ ಜೀವನದಲ್ಲೂ ಮಾರುತಿ ಭಕ್ತರಾಗಿರುವ ಚಿರಂಜೀವಿ ಪಾತ್ರದಲ್ಲೂ ಪರಾಕಾಷ್ಠೆ ತೋರುತ್ತಾರೆ ಎಂಬುದು ವರ್ಮಾ ಅವರ ಇಚ್ಛೆಯಾಗಿರಬಹುದು ಎನ್ನಲಾಗುತ್ತಿದೆ.

ಅಂದಹಾಗೆ ಚಿರಂಜೀವಿ ಈ ಹಿಂದೆ, ಜಗದೇಕವೀರುಡು ಅತಿಲೋಕಸುಂದರಿ ಸಿನಿಮಾದ ದೃಶ್ಯವೊಂದರಲ್ಲಿ ಹನುಮಂತನಂತೆ ಕೆಲಕಾಲ ಕಾಣಿಸಿಕೊಂಡಿದ್ದರು. ಹನುಮಂತನ ಪಾತ್ರದ ಜೊತೆಗೆ ಫೈಟ್ ಕೂಡ ನಡೆಯಲಿದೆ. ಅಲ್ಲದೆ ಈ ಸಿನಿಮಾದಲ್ಲಿ ಹನುಮಂತನನ್ನು ಸ್ತುತಿಸುವ ಜೈ ಚಿರಂಜೀವ ಎಂಬ ಹಾಡು ಇದೆ. ಜೈ ಚಿರಂಜೀವ ಎಂಬ ಕಿರುಚಿತ್ರವನ್ನೂ ಮಾಡಿದ್ದಾರೆ.

ಇನ್ನು ಕೊಂಡವೀಟಿ ದೊಂಗ ಚಿತ್ರದಲ್ಲಿ ಶ್ರೀ ಆಂಜನೇಯಂ.. ಪ್ರಸನ್ನನಾಂಜನೇಯಂ ಎಂಬ ಹಾಡು ಕೂಡ ಇದೆ. ಸಿನಿಮಾಗಳಲ್ಲಿ ಸಂದರ್ಭ ಬಂದಾಗಲೆಲ್ಲಾ ಚಿರಂಜೀವಿ ಹನುಮಂತ ದೇವರ ಭಕ್ತಿ ತೋರಿಸುತ್ತಲೇ ಬಂದಿದ್ದಾರೆ. ಈಗ ಪ್ರಶಾಂತ್ ವರ್ಮಾ ಚಿತ್ರಕ್ಕೆ ಚಿರಂಜೀವಿ ಓಕೆ ಹೇಳಿದ್ದಾರೆ ಎಂಬ ಮಾಹಿತಿ ಇದೆ. ಮೋಕ್ಷಜ್ಞ ಚಿತ್ರದ ನಂತರ ಚಿರಂಜೀವಿ ಅವರ ‘ಹನುಮಂತ’ ಸಿನಿಮಾ ಸೆಟ್ಟೇರುವ ಸಾಧ್ಯತೆಗಳಿವೆ. ಈ ಸಿನಿಮಾದಲ್ಲಿ ಚಿರು ನಟಿಸಿದರೆ ಮೆಗಾಸ್ಟಾರ್ ಚಿರಂಜೀವಿ ಸಂಪೂರ್ಣ ಹನುಮಾನ್ ಪಾತ್ರದಾರಿಯಾಗಿ ನಟಿಸಿದ ಚಿತ್ರವಾಗಲಿದೆ. ಚಿರಂಜೀವಿ, ಪ್ರಶಾಂತ್ ವರ್ಮಾರ 'ಜೈ ಹನುಮಾನ್' ಸಿನಿಮಾದ ಅಧಿಕೃತ ಘೋಷಣೆ ಇನ್ನಷ್ಟೇ ಹೊರಬೀಳಬೇಕಿದೆ.

ಪ್ರಸ್ತುತ ಚಿರಂಜೀವಿ ವಿಶ್ವಂಭರ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಚಿರುಗೆ ಜೋಡಿಯಾಗಿ ತ್ರಿಶಾ, ಮೀನಾಕ್ಷಿ ಚೌಧರಿ ಮತ್ತು ಆಶಿಕಾ ರಂಗನಾಥ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ಸಂಕ್ರಾಂತಿ ಉಡುಗೊರೆಯಾಗಿ ಜನವರಿ 10 ರಂದು ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net