ಮುಂಬೈ-ದೋಹಾ ವಿಮಾನ 5 ಗಂಟೆ ವಿಳಂಬ: ಹೋಲ್ಡಿಂಗ್​ ಏರಿಯಾದಲ್ಲಿ ನೀರು, ಆಹಾರವಿಲ್ಲದೆ ಪರದಾಡಿದ ಪ್ರಯಾಣಿಕರು!

indigo1
Published on

ಮುಂಬೈ: ಮುಂಬೈನಿಂದ ಕತಾರ್‌ಗೆ ತೆರಳುವ ಇಂಡಿಗೋ ವಿಮಾನದಲ್ಲಿ ಕಂಡು ಬಂದ ತಾಂತ್ರಿಕ ದೋಷದಿಂದ ಭಾನುವಾರ ಮುಂಜಾನೆ ಭಾರಿ ವಿಳಂಬಕ್ಕೆ ಕಾರಣವಾಯಿತು. ಅಷ್ಟೇ ಅಲ್ಲದೆ ಹೋಲ್ಡಿಂಗ್​ ಏರಿಯಾದಲ್ಲಿ ಸುಮಾರು ಐದು ಗಂಟೆ ಪ್ರಯಾಣಿಕರು ನೀರು, ಆಹಾರವಿಲ್ಲದೆ ಬಳಲುವಂತಾಯಿತು.

ವಿಮಾನದ ತಾಂತ್ರಿಕ ಸಮಸ್ಯೆಯಿಂದಾಗಿ, ಪ್ರಯಾಣಿಕರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಯಿಸಲಾಗಿದೆ. ಪ್ರಯಾಣಿಕರಿಗೆ ಈ ಕುರಿತು ಮೊದಲೇ ಮಾಹಿತಿ ನೀಡಿರಲಿಲ್ಲ. ಪ್ರಯಾಣಿಕರು ಆಹಾರ ಮತ್ತು ನೀರು ಸಿಗದೆ ಬಳಲಬೇಕಾಯಿತು ಎಂದು ಆರೋಪಿಸಲಾಗಿದೆ.

ಪತ್ನಿ ಮತ್ತು ಮಗುವಿನೊಂದಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಇಂಡಿಗೋ ಸಂಸ್ಥೆ ಕ್ರಮಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ವಿಮಾನವನ್ನು ಹತ್ತಲು ಆರಂಭದಲ್ಲಿ ಅನುಮತಿಸಲಿಲ್ಲ. ಪ್ರತಿಭಟನೆ ನಂತರ ಅನುಮತಿಸಿದರೂ ಯಾವುದೇ ಅಧಿಕಾರಿಗಳು ಸ್ಪಂದಿಸಲಿಲ್ಲ ಎಂದರು.

ಪ್ರಯಾಣಿಕರಲ್ಲಿ ಮಹಿಳೆಯರು, ಮಕ್ಕಳಿದ್ದರೂ ಕನಿಷ್ಟ ಮೂಲ ಸೌಕರ್ಯಗಳನ್ನು ಒದಗಿಸದೆ ನಿರ್ಲಕ್ಷ್ಯ ಧೋರಣೆ ತಾಳಿದ್ದು ಎಷ್ಟು ಸರಿ ಎಂದು ಪ್ರಯಾಣಿಕರು ಪ್ರಶ್ನಿಸಿರುವುದಾಗಿ ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net