
ಕಾಸರಗೋಡು: ನಗರದಿಂದ ಇತರ ರಾಜ್ಯಗಳ ಪ್ರಮುಖ ನಗರಗಳಿಗೆ ಹಾಗೂ ಪ್ರವಾಸಿ ತಾಣಗಳಿಗೆ ಹೆಚ್ಚಿನ ಅಂತಾರಾಜ್ಯ ಸಂಪರ್ಕದ ಕೆಎಸ್ಸಾರ್ಟಿಸಿ ಬಸ್‌ಗಳ ಸಂಚಾರ ಆರಂಭಿಸುವಂತೆ ಸಿಪಿಐ ಕಾಸರಗೋಡಿನಲ್ಲಿ ನಡೆದ ಪಕ್ಷದ ಮಂಡಲ ಸಮಿತಿ ಸಮ್ಮೇಳನ ಆಗ್ರಹಿಸಿದೆ.
ಜುಲೈ 11ರಿಂದ 13ರವರೆಗೆ ಕಾಸರಗೋಡು ವೆಳ್ಳರಿಕುಂಡಿನಲ್ಲಿ ನಡೆಯಲಿರುವ ಪಕ್ಷದ ಜಿಲ್ಲಾ ಸಮ್ಮೇಳನದ ಪೂರ್ವಭಾವಿಯಾಗಿ ಮಂಡಲ ಸಮಿತಿ ಸಮ್ಮೇಳನ ಆಯೋಜಿಸಲಾಗಿತ್ತು.
ಕಾಸರಗೋಡು ಪಂಚಾಯಿತಿಯನ್ನು ನಗರಸಭೆಯಾಗಿ ಮೇರ್ಲ್ದಗೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯು.ಎಲ್.ಭಟ್ ಹೆಸರು ಚಿರಸ್ಥಾಯಿಗೊಳಿಸುವ ನಿಟ್ಟಿನಲ್ಲಿ ಕಾಸರಗೋಡು ಬೀಚ್ ರಸ್ತೆಗೆ ‘ಜಸ್ಟಿಸ್ ಯು.ಎಲ್.ಭಟ್ ರಸ್ತೆ’ ಎಂದು ನಾಮಕರಣ ಮಾಡಬೇಕು, ಸರ್ಕಾರಿ ಆಸ್ಪತ್ರೆಗಳಲ್ಲಿ ತೆರವಾಗಿರುವ ವೈದ್ಯರ ಹಾಗೂ ಇತರ ಸಿಬ್ಬಂದಿ ಹುದ್ದೆಗಳಿಗೆ ವೈದ್ಯರ ನೇಮಕಾತಿ ನಡೆಸಬೇಕು, ಹೆದ್ದಾರಿ ನಿರ್ಮಾಣ ಕಾಮಗಾರಿಯನ್ನು ವೈಜ್ಞಾನಿಕವಾಗಿ ಮಾಡಬೇಕು ಎಂದು ಆಗ್ರಹಿಸಲಾಯಿತು.
ಸಿಪಿಐ ರಾಜ್ಯ ಸಮಿತಿ ಮುಖಂಡ ಸಿ.ಪಿ.ಮುರಳಿ ಸಮ್ಮೇಳನ ಉದ್ಘಾಟಿಸಿದರು. ರಾಜ್ಯ ಸಮಿತಿ ಜತೆ ಕಾರ್ಯದರ್ಶಿ ಇ.ಚಂದ್ರಶೇಖರನ್, ಕೆ. ಕುಞಿರಾಮನ್, ಸಿಪಿಐ ಜಿಲ್ಲಾ ಕಾರ್ಯದರ್ಶಿ ಸಿ.ಪಿ.ಬಾಬು, ರಾಜ್ಯ ಸಮಿತಿ ಸದಸ್ಯರಾದ ಟಿ.ಕೃಷ್ಣನ್, ಗೋವಿಂದನ್ ಪಳ್ಳಿಕ್ಕಾಪಿಲ್, ಜಿಲ್ಲಾ ಸಹಾಯಕ ಕಾರ್ಯದರ್ಶಿ ವಿ.ರಜನ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಬಂಗಳಂ ಕುಞಿಕೃಷ್ಣನ್, ಎಂ. ಕರುಣಾಕರನ್, ವಿ.ಸುರೇಶ್‌ಬಾಬು, ಪಿ.ಪಿ.ಚಾಕೋ, ರಾಧಾಕೃಷ್ಣನ್ ಪೆರುಂಬಳ ಉಪಸ್ಥಿತರಿದ್ದರು. ಮಂಡಲ ಸಮಿತಿ ನೂತನ ಕಾರ್ಯದರ್ಶಿಯನ್ನಾಗಿ ಬಿಜು ಉಣ್ಣಿತ್ತನ್ ಹಾಗೂ ಇತರ 17 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ರೈಲ್ವೆ ಸ್ಟೇಷನ್‌ಗೆ ಹೊಸರೂಪ : ಬಂಟ್ವಾಳ ನಿಲ್ದಾಣದಲ್ಲಿ ಅಭಿವೃದ್ಧಿ ಕಾಮಗಾರಿ : 28.49 ಕೋಟಿ ರೂ. ವೆಚ್ಚ
ನದಿ ಒಡಲಲ್ಲಿ ಮಣ್ಣು ಮಿಶ್ರಿತ ದಿಬ್ಬ! : ಸ್ಥಳೀಯ ಪರಿಸರದಲ್ಲಿ ನೆರೆಭೀತಿ : ಸಂಗಮ ಸ್ಥಳದಿಂದ ಸೇತುವೆಯ ವರೆಗೂ ನಿರ್ಮಾಣ