ದೆಹಲಿ ವಿಶ್ವವಿದ್ಯಾಲಯಕ್ಕೆ ಅನಧಿಕೃತ ಭೇಟಿ; ರಾಹುಲ್​ ಗಾಂಧಿಗೆ ನೋಟಿಸ್​ ಜಾರಿ

Rahul Gandhi
Published on

ನವದೆಹಲಿ: ಇತ್ತೀಚಿಗೆ ದೆಹಲಿ ವಿಶ್ವವಿದ್ಯಾಲಯಕ್ಕೆ ಅನಧಿಕೃತ ಭೇಟಿ ನೀಡಿದ್ದ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಗೆ ಯೂನಿವರ್ಸಿಟಿ ವತಿಯಿಂದ ನೋಟಿಸ್​ ಜಾರಿ ಮಾಡಲಾಗಿದೆ.

ಮುಂಬರುವ ದಿನಗಳಲ್ಲಿ ಅನಧಿಕೃತ ಭೇಟಿ ನೀಡದಂತೆ ವಿಶ್ವವಿದ್ಯಾಲಯ ಕಾಂಗ್ರೆಸ್​ ನಾಯಕನಿಗೆ ನೀಡಿರುವ ನೋಟಿಸ್​ನಲ್ಲಿ ತಿಳಿಸಲಾಗಿದೆ.

Rahul Gandhi (1)

ನಿಯಮ ಪಾಲನೆ ಅಗತ್ಯ

ಈ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ವಿಶ್ವವಿದ್ಯಾಲಯದ ರಿಜಿಸ್ಟಾರ್​ ವಿಕಾಸ್​ ಗುಪ್ತಾ ಈ ರೀತಿ ಅನಧಿಕೃತ ಭೇಟಿ ನೀಡುವುದು ಅಪಾಯಕಾರಿ. ಸೂಕ್ತ ನಿಯಮಗಳನ್ನು ಪಾಲಿಸುವುದು ಅಗತ್ಯ ಎಂದು ಅವರಿಗೆ ತಿಳಿಸಲಾಗುವುದು.

ರಾಹುಲ್​ ಗಾಂಧಿ ಅವರು ಶುಕ್ರವಾರ ಸ್ನಾತಕೋತರ ವಿಭಾಗದ ವಿದ್ಯಾರ್ಥಿಗಳ ಹಾಸ್ಟೆಲ್​ಗೆ ಭೇಟಿ ನೀಡಿದ್ದರು ಈ ವೇಳೆ ಎಲ್ಲರೂ ಉಟ ಮಾಡುತ್ತಿದ್ದರು. ಈ ರೀತಿಯ ಅನಧಿಕೃತ ಭೇಟಿಗಳನ್ನು ಸಹಿಸಲು ಸಾಧ್ಯವಿಲ್ಲ. ವಿದ್ಯಾರ್ಥಿಗಳ ಭದ್ರತೆಯ ಹಿತದೃಷ್ಟಿಯಿಂದ ಈ ರೀತಿ ಪುನರಾವರ್ತಿಸದಂತೆ ಸುಚಿಸಲಾಗುವುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net