ನವದೆಹಲಿ: 70 ಸದಸ್ಯಬಲದ ದೆಹಲಿ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ಸರ್ಕಾರ ರಚಿಸುವುದು ನಿಶ್ಚಿತವಾಗಿದೆ. ಸತತ ನಾಲ್ಕನೇ ಬಾರಿಗೆ ಅಧಿಕಾರಕ್ಕೇರುವ ಕನಸು ಕಂಡಿದ್ದ ಎಎಪಿಗೆ (AAP) ಭಾರೀ ಮುಖಭಂಗವಾಗಿದ್ದು, ಈ ಬಾರಿಯೂ ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿದೆ.
ಇತ್ತ ಬಿಜೆಪಿ ಮ್ಯಾಜಿಕ್ ನಂಬರ್ ದಾಟುತ್ತಿದ್ದಂತೆ ಪ್ರದಾನ ಕಚೇರಿಯಲ್ಲಿ ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲುಮುಟ್ಟಿದ್ದು, ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಆದರೆ, ಕಾಕತಾಳೀಯ ಎಂಬಂತೆ ಎಎಪಿ (AAP) ನಾಯಕರು ಕೂಡ ಗೆಲುವು ನಮ್ಮದೇ ಎಂದು ಸಂಭ್ರಮಿಸಿದ್ದಾರೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಎಎಪಿ ಕಾರ್ಯಕರ್ತರನ್ನು ಟೀಕಿಸಿ ಕಮೆಂಟ್ ಹಾಕುತ್ತಿದ್ದಾರೆ.
VIDEO | Delhi Election Results 2025: Visuals of AAP workers celebrating at party office amid counting of votes.#DelhiElectionResults #DelhiElectionResultsWithPTI
(Full video is available on PTI Videos – https://t.co/n147TvrpG7) pic.twitter.com/UtWZfXc99C
— Press Trust of India (@PTI_News) February 8, 2025
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಎಎಪಿ ನಾಯಕರು ಪಕ್ಷದ ಕೇಂದ್ರ ಕಚೇರಿಯಲ್ಲಿ ಹಾಡು ಹಾಡುತ್ತ ಕುಣಿಯುತ್ತಿರುವುದನ್ನು ನೋಡಬಹುದಾಗಿದೆ. ಪಿಟಿಐ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಆಪ್ ಕಾರ್ಯಕರ್ತರು ಎಎಪಿ ಗೆಲ್ಲುತ್ತದೆ ಎಂದು ಆಶಾಭಾವನೆಯನ್ನು ವ್ಯಕ್ತಪಡಿಸಿದ್ದಾರೆ.
ಸದ್ಯ ಲಭ್ಯವಾಗಿರುವ ವರದಿ ಪ್ರಕಾರ ಬಿಜೆಪಿ 42, ಎಎಪಿ (AAP) 28 ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್, ಸತ್ಯೇಂ,ದ್ರ ಜೈನ್, ಮನೀಶ್ ಸಿಸೋಡಿಯಾಗೆ ಹಿನ್ನಡೆಯಾಗಿದ್ದು, ಸಿಎಂ ಅತಿಶಿ, ಪರ್ವೇಶ್ ಶರ್ಮಾ, ಕಪಿಲ್ ಮಿಶ್ರಾ ಮುನ್ನಡೆ ಕಾಯ್ದುಕೊಂಡಿದ್ದಾರೆ. ಸದ್ಯ ಬಿಜೆಪಿ ಸರ್ಕಾರ ರಚಿಸುವುದು ಪಕ್ಕಾ ಎಂದು ಹೇಳಿದೆ.
ಕುಂಭ ಸಾಧುಗಳೊಂದಿಗೆ ಅಸಂಭವ ಘಟನೆಗಳು; 15 ಸಾವಿರ ಕಿಲೋಮೀಟರ್ ಪಾದಯಾತ್ರೆ, ವಯೋವೃದ್ಧ ನಾಗರಾಜ ಶೆಟ್ಟಿ ಸಾಧನೆ
ನಮ್ಮವರು ಭಾರತವನ್ನು ಸೋಲಿಸುವುದು ಫಿಕ್ಸ್; Champions Trophy ಹೊಸ್ತಿಲಲ್ಲೇ ಪಾಕ್ ಮಾಜಿ ಆಟಗಾರನ ಹೇಳಿಕೆ ವೈರಲ್