ದೆಹಲಿ ಉಪ ಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ ಬಂಧನ; ಅಬಕಾರಿ ನೀತಿ ಪ್ರಕರಣದಲ್ಲಿ ಬಂಧಿಸಿದ ಸಿಬಿಐ

Manish Sisodia
Published on

ದೆಹಲಿ: ನೂತನ ಅಬಕಾರಿ ನೀತಿ ಪ್ರಕರಣದಲ್ಲಿ ಸಿಲುಕಿರುವ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಇಂದು ಸಿಬಿಐ ಬಂಧಿಸಿದೆ. ಸದ್ಯ ಸಿಬಿಐ ಹೆಡ್​​ಕ್ವಾರ್ಟರ್ಸ್​ನಲ್ಲಿ ಅವರನ್ನು ಇರಿಸಲಾಗಿದೆ.

ಆಮ್​ ಆದ್ಮಿ ಪಕ್ಷದ ಮುಖ್ಯಸ್ಥರಾಗಿರುವ ಮನೀಶ್ ಸಿಸೋಡಿಯಾ ಅವರನ್ನು ಇಂದು ಸುಮಾರು 8 ಗಂಟೆಗಳಿಗೂ ಅಧಿಕ ಕಾಲ ನಡೆದ ವಿಚಾರಣೆ ಬಳಿಕ ಸಿಬಿಐ ಬಂಧಿಸಿದೆ. ನೂತನ ಅಬಕಾರಿ ನೀತಿಯಲ್ಲಿನ ಅಕ್ರಮ ಹಾಗೂ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಸೋಡಿಯಾ ಸಿಲುಕಿಕೊಂಡಿದ್ದಾರೆ.

ಸಿಸೋಡಿಯಾ ಬಂಧನವನ್ನು ಆಮ್​ ಆದ್ಮಿ ಪಕ್ಷ ಖಂಡಿಸಿದ್ದು, ತೀವ್ರ ಟೀಕೆಯನ್ನು ಮಾಡಿದೆ. ಮನೀಶ್ ನಿರಪರಾಧಿ, ಅವರ ಬಂಧನ ಕೆಟ್ಟ ರಾಜಕೀಯ. ಮನೀಸ್ ಬಂಧನದಿಂದಾಗಿ ಜನರಲ್ಲಿ ಭಾರಿ ಕೋಪ ಕೆರಳಿದೆ. ಜನರು ಇದಕ್ಕೆ ಪ್ರತಿಕ್ರಿಯಿಸಲಿದ್ದಾರೆ ಎಂದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ನಮ್ಮ ಹೋರಾಟ ಇನ್ನೂ ಗಟ್ಟಿಯಾಗಲಿದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net