ಹೊಸದಿಲ್ಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇದೀಗ ಜಾರಿ ನಿರ್ದೇಶನಾಲಯ ಕೊಟ್ಟ 6ನೇ ಸಮನ್ಸ್ಗೂ ಪ್ರತಿಕ್ರಿಯಿಸದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಇಡಿ ನೀಡಿದ್ದ ಆರನೇ ಸಮನ್ಸ್ ಅನ್ನು ಕೂಡ ಕೈಬಿಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ತಮ್ಮ ವಿರೋಧವನ್ನು ಮುಂದುವರೆಸಿದ್ದಾರೆ.
ಇದನ್ನೂ ಓದಿ: ಕೋವಿಡ್‌ನಿಂದ ಚೇತರಿಸಿಕೊಂಡ ಭಾರತೀಯರಲ್ಲಿ ಶ್ವಾಸಕೋಶದ ಹಾನಿ ಹೆಚ್ಚು!
ಹೇಳಿಕೆಯೊಂದರಲ್ಲಿ, ಕೇಜ್ರಿವಾಲ್‌ಗೆ ಕಳುಹಿಸಲಾದ ಸಮನ್ಸ್‌ಗಳು ಕಾನೂನುಬಾಹಿರವಾಗಿದೆ. ಈ ಸಮಸ್ಯೆ ಈಗ ನ್ಯಾಯಾಲಯದಲ್ಲಿದೆ ಎಂದು ಆಮ್ ಆದ್ಮಿ ಪಕ್ಷ ತಿಳಿಸಿತ್ತು. ಇದೀಗ ಸ್ವತಃ ಇಡಿ ನ್ಯಾಯಾಲಯದ ಮೊರೆ ಹೋಗಿದ್ದು, ಅರವಿಂದ್ ಕೇಜ್ರಿವಾಲ್ ವಿಚಾರಣೆಗೆ ಹಾಜರಾಗುತ್ತಿಲ್ಲ ಎಂದು ಹೇಳಿತ್ತು.
ಇಡಿ ಮತ್ತೆ ಮತ್ತೆ ಸಮನ್ಸ್ ಕಳುಹಿಸುವ ಬದಲು ನ್ಯಾಯಾಲಯದ ನಿರ್ಧಾರಕ್ಕಾಗಿ ಕಾಯಬೇಕು ಎಂದು ಎಎಪಿ ಹೇಳಿದೆ. ಫೆಬ್ರವರಿ 14ರಂದು ತನಿಖಾ ಸಂಸ್ಥೆಯು ಕೇಜ್ರಿವಾಲ್‌ಗೆ ತನ್ನ ಆರನೇ ಸಮನ್ಸ್ ಜಾರಿಗೊಳಿಸಿ, ಫೆಬ್ರವರಿ 19ರಂದು ತನ್ನ ಮುಂದೆ ಹಾಜರಾಗುವಂತೆ ಹೇಳಿತ್ತು. ಆದರೆ, ಇದೀಗ ಈ ಸಮನ್ಸ್ ಅನ್ನು ಕೂಡ ಲೆಕ್ಕಿಸದ ದೆಹಲಿ ಸಿಎಂ, ಇಂದು ವಿಚಾರಣೆಗೆ ಗೈರಾಗಿದ್ದಾರೆ.
ಇದನ್ನೂ ಓದಿ: 10 ವರ್ಷದ ಬಾಲಕಿ ಕನಸಿನಲ್ಲಿ ಕಂಡ ಶ್ರೀಕೃಷ್ಣ; ಈಕೆ ಹೇಳಿದ ಜಾಗದಲ್ಲೇ ಪತ್ತೆ ಆಯ್ತು ಮೂರ್ತಿ
ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಾಲಯವನ್ನು ಉದ್ದೇಶಿಸಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, ದೆಹಲಿ ವಿಧಾನಸಭೆಯಲ್ಲಿ ವಿಶ್ವಾಸ ನಿರ್ಣಯದ ಚರ್ಚೆ ಮತ್ತು ಮಾರ್ಚ್ 1ರಂದು ಮುಕ್ತಾಯಗೊಳ್ಳಲಿರುವ ಬಜೆಟ್ ಅಧಿವೇಶನದಿಂದಾಗಿ ನ್ಯಾಯಾಲಯದ ಮುಂದೆ ದೈಹಿಕವಾಗಿ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ಪಕ್ಷ ಕೂಡ ಪ್ರತಿಕ್ರಿಯಿಸಿದ್ದು, ಮಾರ್ಚ್ 1ರ ನಂತರ ದೆಹಲಿ ಸಿಎಂ ವಿಚಾರಣೆಗೆ ಹಾಜರಾಗಲು ಲಭ್ಯವಿರುತ್ತಾರೆ ಎಂದು ಹೇಳಿದೆ. ಇದರ ಬೆನ್ನಲ್ಲೇ ಮಾರ್ಚ್ 16ರಂದು ಬೆಳಗ್ಗೆ 10 ಗಂಟೆಗೆ ಕೇಜ್ರಿವಾಲ್ ದೈಹಿಕವಾಗಿ ಹಾಜರಾಗುವಂತೆ ಕೋರ್ಟ್ ವೇಳೆ ನಿಗದಿಪಡಿಸಿದೆ,(ಏಜೆನ್ಸೀಸ್).
ಈ ನಟ ಯಾರೆಂದು ಗೊತ್ತಿಲ್ಲದಿದ್ದರೂ ಇವರ ಡೈಲಾಗ್ ಮಾತ್ರ ಪಕ್ಕಾ ನೆನಪಿರುತ್ತೆ!