More

    ರಕ್ಷಣಾತ್ಮಕ ಹೆಜ್ಜೆ: ಭಾರತ-ಅಮೆರಿಕ ಬಂಧ ಇನ್ನಷ್ಟು ಗಟ್ಟಿ

    ಜಾಗತಿಕ ಆರ್ಥಿಕ ಸೂಪರ್ ಪವರ್ ಆಗುವ ಹಂಬಲ ಹೊಂದಿರುವ ಚೀನಾ ಈ ಗುರಿಸಾಧನೆ ನಿಟ್ಟಿನಲ್ಲಿ ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿ್ತೆ. ಇದು ಹಲವು ದೇಶಗಳ ಕೆಂಗಣ್ಣಿಗೆ ಕಾರಣವಾಗಿದೆ. ಇದಲ್ಲದೆ, ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಪಾರಮ್ಯ ಸಾಧಿಸಲು ಚೀನಾ ಅನುಸರಿಸುತ್ತಿರುವ ನೀತಿಯ ಬಗ್ಗೆಯೂ ಹಲವು ದೇಶಗಳು ಆಕ್ಷೇಪ ಹೊಂದಿವೆ. ಈ ಎರಡೂ ಸಂಗತಿಗಳನ್ನು ಮುಖ್ಯವಾಗಿಟ್ಟುಕೊಂಡು, ಚೀನಾ ಮೇಲಾಟವನ್ನು ತಡೆಯಲೋಸುಗ ಭಾರತ ಹಾಗೂ ಅಮೆರಿಕ ಕಾರ್ಯತಂತ್ರ ಪಾಲುದಾರಿಕೆಯನ್ನು ಇನ್ನಷ್ಟು ವಿಸ್ತರಿಸಲು ಮುಂದಾಗಿರುವುದು ಗಮನಾರ್ಹ.

    ಅಮೆರಿಕ ವಿದೇಶಾಂಗ ಸಚಿವ ಲಾಯ್್ಡ ಆಸ್ಟಿನ್ ಅವರು ಈಗ ಭಾರತ ಪ್ರವಾಸದಲ್ಲಿದ್ದು, ಸೋಮವಾರ ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರೊಂದಿಗೆ ವಿವಿಧ ವಿಷಯಗಳ ಕುರಿತು ವಿಸõತವಾಗಿ ರ್ಚಚಿಸಿದರು. ಮಹತ್ವಾಕಾಂಕ್ಷೆಯ ಐದು ವರ್ಷಗಳ ರಕ್ಷಣಾ ಪಾಲುದಾರಿಕೆಯನ್ನು ಇನ್ನಷ್ಟು ಹೆಚ್ಚಿಸುವ ಬಗ್ಗೆ ಸಹ ಪ್ರಮುಖವಾಗಿ ಚರ್ಚೆ ನಡೆಯಿತು. ಇದರಲ್ಲಿ ಕೈಗಾರಿಕಾ ಸಹಕಾರವನ್ನು ಅಂದರೆ, ಉತ್ಪಾದನಾ ವಲಯದಲ್ಲಿ ಪರಸ್ಪರ ಸಹಕಾರ ವರ್ಧಿಸುವ ಬಗ್ಗೆಯೂ ಉಭಯ ನಾಯಕರು ರ್ಚಚಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜೂನ್ 22ರಂದು ಅಮೆರಿಕಕ್ಕೆ ತೆರಳಲಿದ್ದು, ಅದಕ್ಕೆ ಪೂರ್ವಭಾವಿಯಾಗಿ ನಡೆದಿರುವ ಈ ಸಮಾಲೋಚನೆ ಮಹತ್ವ ಪಡೆದಿದೆ. ಮೋದಿ ಭೇಟಿ ಸಮಯದಲ್ಲಿ ರಕ್ಷಣಾ ಒಪ್ಪಂದದ ಬಗ್ಗೆ ಅಧಿಕೃತವಾಗುವ ನಿರೀಕ್ಷೆ ಇದೆ. ಕಳೆದ ತಿಂಗಳೂ ಅಮೆರಿಕದಲ್ಲಿ ಉಭಯ ದೇಶಗಳ ರಕ್ಷಣಾ ನೀತಿ ಗುಂಪಿನ ಸಭೆ ನಡೆದಿದ್ದು, ಯುದ್ಧ ವಿಮಾನಗಳ ಇಂಜಿನ್ ಇತ್ಯಾದಿ ಉತ್ಪಾದನೆಯನ್ನು ಜಂಟಿ ಸಹಯೋಗದಲ್ಲಿ ಮಾಡುವ ಕುರಿತು ಚರ್ಚೆ ನಡೆದಿದೆ. ತಂತ್ರಜ್ಞಾನ ವರ್ಗಾವಣೆ ಚೌಕಟ್ಟಿನ ಅಡಿಯಲ್ಲಿ, ಜೆಟ್ ಇಂಜಿನ್ ಅನ್ನು ಭಾರತದಲ್ಲೇ ತಯಾರಿಸಲು ಸರ್ಕಾರ ಚಿಂತನೆ ನಡೆಸಿದೆ.

    2016ರ ಜೂನ್​ನಲ್ಲಿ ಅಮೆರಿಕವು ಭಾರತವನ್ನು ‘ಪ್ರಮುಖ ರಕ್ಷಣಾ ಪಾಲುದಾರ’ ಯಾದಿಯಲ್ಲಿ ಸೇರಿಸಿದ್ದು, ಇದರಿಂದ ರಕ್ಷಣಾ ವ್ಯವಹಾರ ಹೆಚ್ಚಲು ಅನುವಾಗಿದೆ. 2008ರ ವರೆಗೂ ಅಮೆರಿಕದೊಂದಿಗೆ ಭಾರತದ ರಕ್ಷಣಾ ವ್ಯವಹಾರ ಬಹುತೇಕ ಶೂನ್ಯವಿತ್ತು. 2020ರ ಹೊತ್ತಿಗೆ ಅದು 20 ಬಿಲಿಯನ್ ಡಾಲರ್​ಗೆ ಏರಿದೆ. ಕ್ಷಿಪಣಿಗಳು, ಡ್ರೋನ್​ಗಳು, ದೂರಗಾಮಿ ಸಾಗರ ನಿಗಾ ವಿಮಾನಗಳು ಮುಂತಾದವು ಭಾರತವು ಅಮೆರಿಕದಿಂದ ಪ್ರಮುಖವಾಗಿ ಖರೀದಿಸುವ ರಕ್ಷಣಾ ಉತ್ಪನ್ನಗಳು. ಇಂಡೋ-ಪೆಸಿಫಿಕ್ ವಲಯದಲ್ಲಿ ಹೆಚ್ಚುತ್ತಿರುವ ಚೀನಾ ಚಟುವಟಿಕೆಗಳು ಹಾಗೂ ಭಾರತದೊಂದಿಗಿನ ಗಡಿತಂಟೆಯ ಹಿನ್ನೆಲೆಯಲ್ಲಿ ಈಚಿನ ವರ್ಷಗಳಲ್ಲಿ ಭಾರತ-ಅಮೆರಿಕ ಸಂಬಂಧ ಮತ್ತಷ್ಟು ಬಿಗಿಯಾಗುತ್ತಿದೆ.

    ಕ್ವಾಡ್ ಒಕ್ಕೂಟದ ಕಾರಣದಿಂದಲೂ ಅಮೆರಿಕವು ಭಾರತದೊಂದಿಗೆ ರಕ್ಷಣಾ ಒಡಂಬಡಿಕೆಗಳನ್ನು ಹೊಂದುತ್ತಿದೆ. ಚೀನಾವು ಭಾರತದ ಜತೆ ಅಗಾಧ ಪ್ರಮಾಣದ ವ್ಯಾಪಾರವಹಿವಾಟುಗಳನ್ನು ಹೊಂದಿದ್ದಾಗ್ಯೂ, ಗಡಿ ವಿಷಯದಲ್ಲಿ ಸದಾ ರಂಪ ಮಾಡುತ್ತಿರುತ್ತದೆ. ಈ ವಲಯದಲ್ಲಿ ತನ್ನ ಮೇಲುಗೈಗೆ ಭಾರತವೇ ಅಡ್ಡಿ ಎಂಬುದು ಚೀನಾ ನಾಯಕರ ಕೆಂಪುಕಣ್ಣಿಗೆ ಕಾರಣ. ಅಮೆರಿಕದಂತಹ ಪ್ರಬಲ ದೇಶವು ಚೀನಾದ ವಿಷಯವಾಗಿ ಭಾರತದ ಜತೆ ನಿಲ್ಲುವುದು ನಮ್ಮ ವಿಶ್ವಾಸ ಹಾಗೂ ಶಕ್ತಿಯನ್ನು ಮತ್ತಷ್ಟು ವರ್ಧಿಸುವಲ್ಲಿ ಅನುಮಾನವಿಲ್ಲ. ಹಾಗೇ ಕೆಲ ವಿಷಯಗಳಲ್ಲಿ ಅಮೆರಿಕಕ್ಕೆ ಭಾರತ ಅನಿವಾರ್ಯ ಎಂಬುದನ್ನೂ ಮರೆಯುವ ಹಾಗಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts