ಕುರಿಗಳ ಮೇಲೆ ಹರಿದ ಕಾರು, 38 ಜೀವ ಬಲಿ!

sheep death
Published on

ಬೆಳಗಾವಿ: ತಮ್ಮಷ್ಟಕ್ಕೆ ತಾವಿದ್ದ ಕುರಿಗಳ ಮೇಲೆ ಕಾರೊಂದು ಹರಿದಿದ್ದು, 38 ಕುರಿಗಳು ಸ್ಥಳದಲ್ಲೇ ಮೃತಪಟ್ಟ ಧಾರುಣ ಘಟನೆ ಸವದತ್ತಿ ತಾಲೂಕಿನ ಚಿಕ್ಕಉಳ್ಳಿಗೇರಿ ಗ್ರಾಮದಲ್ಲಿ ಸಂಭವಿಸಿದೆ.

ಭಾನುವಾರ ನಸುಕಿನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೃತ ಕುರಿಗಳು ಬೈಲಹೊಂಗಲ ತಾಲೂಕಿನ ಹೊಳಿನಾಗಲಾಪುರ ಗ್ರಾಮದ ಕುರಿಗಾಹಿ ಯಲ್ಲಪ್ಪ ಬಿಜ್ಜಣ್ಣವರ ಎಂಬುವರಿಗೆ ಸೇರಿವೆ. ಇದನ್ನೂ ಓದಿರಿ ದೇವರಿಗೆ ಕೈಮುಗಿಯುತ್ತಿದ್ದಾಗಲೇ ವ್ಯಕ್ತಿಯ ಕುತ್ತಿಗೆ ಕೊಯ್ದು ಬರ್ಬರ ಹತ್ಯೆ!

ಮೇವಿಗಾಗಿ ಕುರಿಗಳೊಂದಿಗೆ ಸವದತ್ತಿಯಿಂದ ನರಗುಂದ ಕಡೆಗೆ ಹೋಗುವ ಸಂದರ್ಭದಲ್ಲಿ ಚಿಕ್ಕಉಳ್ಳಿಗೇರಿ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. 50ಕ್ಕೂ ಹೆಚ್ಚು ಕುರಿಗಳಿಗೆ ಗಂಭೀರ ಗಾಯಗಳಾಗಿವೆ. ಕುರಿ ಮಾಲೀಕರಿಗೆ ಸುಮಾರು 6 ಲಕ್ಷ ರೂ.ಗೂ ಹೆಚ್ಚು ನಷ್ಟ ಉಂಟಾಗಿದೆ.

"ಬದುಕಿಗೆ ಆಸರೆಯಾಗಿದ್ದ ಕುರಿಗಳ ಸಾವಿನಿಂದಾಗಿ ದಿಕ್ಕು ತೋಚದಂತಾಗಿದೆ'' ಎಂದು ಯಲ್ಲಪ್ಪ ಬಿಜ್ಜಣ್ಣವರ ಅಳಲು ತೋಡಿಕೊಂಡಿದ್ದಾರೆ. ಅಪಘಾತದ ಬಳಿಕ ಚಾಲಕ ಕಾರಿನೊಂದಿಗೆ ಪರಾರಿಯಾಗಿದ್ದಾನೆ. ಸವದತ್ತಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net