ಎರಡು ದಿನಗಳಿಂದ ಹುಡುಕುತ್ತಿದ್ದ ಮೃತದೇಹ ಪತ್ತೆ

dead Body Found
Published on

ಹೆಬ್ರಿ: ನಾಡ್ಪಾಲು ಗ್ರಾಮದ ಚೇರೋಳಿಯಲ್ಲಿ ಬುಧವಾರ ನೀರು ಪಾಲಾಗಿದ್ದ ಆನಂದರವರ ಮೃತದೇಹವನ್ನು ಶನಿವಾರ ಈಶ್ವರ ಮಲ್ಪೆ ನೇತೃತ್ವದ ತಂಡ ಮೇಲಕ್ಕೆತ್ತಿದೆ.

ಆನಂದರವರು ನಾಡ್ಪಾಲಿನಲ್ಲಿ ತೋಟಕ್ಕೆ ಹೋಗಲು ನದಿಯನ್ನು ಹಗ್ಗದ ಮೂಲಕ ದಾಟುತ್ತಿದ್ದಾಗ ಪ್ರವಾಹದಿಂದ ನೀರಿನ ಪಾಲಾಗಿದ್ದರು. 2 ದಿನಗಳಿಂದ ಕಾರ್ಕಳ ಅಗ್ನಿಶಾಮಕ ದಳದವರು ಮೃತದೇಹ ಪತ್ತೆ ಮಾಡಲು ನದಿಯಲ್ಲಿ ಹುಡುಕಾಟ ನಡೆಸಿತ್ತು. ಮುಳುಗುತಜ್ಞ ಈಶ್ವರ ಮಲ್ಪೆಯವರ ತಂಡ ನದಿಯಲ್ಲಿ ಹುಡುಕಾಟ ನಡೆಸಿ ಶನಿವಾರ ಪತ್ತೆ ಮಾಡಿದೆ.

ಮಗನು ಮನೆಗೆ ಬಾರದೆ ಮೂರು ವರ್ಷ ಕಳೆಯಿತು ಎಂದು ಮೃತಪಟ್ಟ ವ್ಯಕ್ತಿಯ ತಾಯಿ ಅತ್ತು ಗೊಗರೆಯುತ್ತಿದ್ದರು. ಹೆಂಡತಿ ಹಾಗೂ ಮಗು ಸ್ಥಳಕ್ಕೆ ಬಂದು ಪರಿಸ್ಥಿತಿ ಕುರಿತು ಕಣ್ಣೀರು ಸುರಿಸಿದರು. ಈಶ್ವರ್ ಮಲ್ಪೆ ಅವರ ತಂಡದ ಸಾಹಸಕ್ಕೆ ತಹಸೀಲ್ದಾರ್ ಎಸ್.ಎ.ಪ್ರಸಾದ್ ಧನ್ಯವಾದ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net